ಕೆಲವು ಹೂಗಳು ನೋಡಲು ಅಂದ. ಇನ್ನೂ ಕೆಲವು ಅಲಂಕಾರಕ್ಕೆ ಸೂಕ್ತವಾದ ಬಣ್ಣ ಆಕಾರ ಹೊಂದಿರುತ್ತದೆ. ಇನ್ನೂ ಕೆಲವು ಹೂವುಗಳು ಅಂದದ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಔಷಧಿ ಉಪಯುಕ್ತ ಅಂಶಗಳನ್ನು ಹೊಂದಿರುತ್ತವೆ. ಅಂತಹ ಹೂವುಗಳಲ್ಲಿ ನಂದಿಬಟ್ಟಲು ಹೂವು ಒಂದು.
ನಂದಿಬಟ್ಟಲು ಹೂ ಔಷಧಿ ಉಪಯುಕ್ತವಾಗಿದ್ದು ಕಣ್ಣಿನ ಕಾಡಿಗೆ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಇದರಿಂದ ತಯಾರಿಸಿದ ಕಾಡಿಗೆ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಕಣ್ಣಿನ ಆರೋಗ್ಯಕ್ಕೂ ಉತ್ತಮವಾದದ್ದು.
ಏನು ಮಾಡಬೇಕು ?: ಮನೆ ಅಂಗಳದಲ್ಲಿ ಅರಳುವ ನಂಜು ಬಟ್ಟಲು ಹೂವು ಗಳನ್ನು ಪೇಸ್ಟ್ ಮಾಡಿ ಸ್ವಚ್ಛವಾಗಿ ತೊಳೆದ ಬಿಳಿ ಬಟ್ಟೆಗೆ ಹಚ್ಚಿ ಒಣಗಿಸಿ ಮಾರನೇ ದಿನ ಮತ್ತೆ ಇದೇರೀತಿ ಅದೇ ಬಟ್ಟೆಗೆ ಮತ್ತೋಂದು ಪದರು ಮಾಡಬೇಕು.ಹೀಗೆ ಏಳು ದಿನ ದ ನಂತರ ಅದನ್ನು ಚೆನ್ನಾಗಿ ಹೊಸೆದು ಬತ್ತಿಮಾಡಿ ಹಣತೆ ಯಲ್ಲಿ ಶುದ್ಧ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ದೀಪ ಹಚ್ಚಿ . ಮೇಲೆ ಒಂದು ಹಣತೆಯನ್ನು ಸ್ವಲ್ಪ ತುಪ್ಪ ಸವರಿ ದೀಪ ಉರಿಯಲು ಅನುವು ಆಗುವಂತೆ ಮುಚ್ಚಿ.ಮೇಲಿನ ಹಣತೆ ಯಲ್ಲಿ ಕಾಡಿಗೆ ಶೇಖರಿಸಿ.ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.ಗಾಳಿ ಆಡದಂತೆ ಚಿಕ್ಕ ಡಬ್ಬಿಯಲ್ಲಿ ಇಟ್ಟುಕೊಳ್ಳಬೇಕು.ಇದನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣಿಗೆ ತಂಪು ಮತ್ತು ಆಕರ್ಷಕ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…