Advertisement
MIRROR FOCUS

ಧರ್ಮದ ನಿಜವಾದ ಅರ್ಥ ಒಳ್ಳೆಯದು ಮಾಡುವುದು | ಸುಬ್ರಹ್ಮಣ್ಯದಲ್ಲಿ ಗೀತಾ ಜಯಂತಿ |

Share

ಭಗವದ್ಗೀತೆ ಆರಂಭದ ವಾಕ್ಯ ಧರ್ಮ, ಕೊನೆಯ ವಾಕ್ಯ ಜಯ. ಇಡೀ ಭಗವದ್ಗೀತೆಯ ಅರ್ಥವೇ ಇದರಲ್ಲಿ ಒಳಗೊಂಡಿದೆ. ಧರ್ಮಕ್ಕೆ ಜಯವಾಗಬೇಕು. ಧರ್ಮ ಎಂದರೆ ಒಳ್ಳೆಯದು ಮಾಡುವುದು ಎಂದರ್ಥ. ಒಳ್ಳೆಯದು ಮಾಡುವುದೇ ಭಗವದ್ಗೀತೆಯ ಒಟ್ಟು ಸಾರ ಎಂದು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶೀಶಕುಮಾರ್‌ ಹೇಳಿದರು.

 

ಅವರು ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆದ ಗೀತಾ ಜಯಂತಿ ಹಾಗೂ ಮೆಟ್ರಿಕ್‌ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಗವದ್ಗೀತೆಯ ಆರಂಭವಾಗುವುದು ಧರ್ಮ ಕ್ಷೇತ್ರ-ಕುರುಕ್ಷೇತ್ರದ ವಾಕ್ಯಗಳಿಂದ. ಕುರು ಅಂದರೆ ಮಾಡು ಎಂದರ್ಥವೂ ಇದೆ. ಅಂದರೆ  ಧರ್ಮ ಕ್ಷೇತ್ರದಲ್ಲಿ ಒಳ್ಳೆಯದು ಮಾಡು ಎಂದರ್ಥ. ಹೀಗಾಗಿ ಮಾಡುವ ಎಲ್ಲಾ ಕೆಸಲಗಳು, ತೊಡಗಿಸಿಕೊಳ್ಳುವ ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯದು ಮಾಡು. ಧರ್ಮವನ್ನು ಮಾಡು ಎಂಬುದೇ ಇಡೀ ಗೀತೆಯ ಸಂದೇಶವಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಧರ್ಮ ಪಾಲನೆ, ಶಿಕ್ಷಕರು ಶಿಕ್ಷಣ ಕ್ಷೇತ್ರದ ಧರ್ಮ ಪಾಲನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆಯಾ ಕ್ಷೇತ್ರದ ಧರ್ಮ ಪಾಲನೆಯೇ ಅಗತ್ಯವಾಗಿದೆ. ಇದನ್ನೇ ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ತಿಳಿಸಿದ್ದಾರೆ.  ಇದಕ್ಕಾಗಿಯೇ ಭಗವದ್ಗೀತೆಯು ಒಂದು ಅಧ್ಬುತವಾದ ಮನಶಾಸ್ತ್ರ ಗ್ರಂಥವಾಗಿಯೂ, ಮ್ಯಾನೇಜ್‌ ಮೆಂಟ್‌ ಕ್ಷೇತ್ರಕ್ಕೆ ನಿರ್ವಹಣಾ ಗ್ರಂಥವಾಗಿಯೂ ಪರಮಶ್ರೇಷ್ಟವಾಗಿದೆ. ಇದಕ್ಕಾಗಿಯೇ ಭಗವದ್ಗೀತೆಯನ್ನು ಓದಿದಂತೆಯೇ ಸಕಾರಾತ್ಮಕ ಬದಲಾವಣೆಗಳು ಸಾಧ್ಯವಿದೆ ಎಂದು ಹೇಳಿದರು.

ಮೆಟ್ರಿಕ್‌ ಮೇಳವನ್ನು ಉದ್ಘಾಟಿಸಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಭಾರತಿ ದಿನೇಶ್‌ , ಮಕ್ಕಳಿಗೆ ಎಲ್ಲಾ ರೀತಿಯ ಶಿಕ್ಷಣ ಅಗತ್ಯ ಇದೆ. ವ್ಯಾಪಾರ ವಹಿವಾಟಿನ ಮೂಲಕವೂ ಶಿಕ್ಷಣ ಅಗತ್ಯ ಇದೆ ಎಂದರು.

ಸಭಾಧ್ಯಕ್ಷತೆಯನ್ನು ವಿದ್ಯಾರ್ಥಿನಿ ಶ್ರೀಪೂರ್ಣ ಜಿ ಎಲ್‌ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗಣೇಶ್‌ ಪ್ರಸಾದ್‌ ನಾಯರ್‌, ಸಂಚಾಲಕ ಚಂದ್ರಶೇಖರ ನಾಯರ್‌, ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ, ಪಿ ಯು ಕಾಲೇಜಿನ ಪ್ರಾಂಶುಪಾಲ ಸಂಕೀರ್ತನ್‌ ಹೆಬ್ಬಾರ್‌ ಉಪಸ್ಥಿತರಿದ್ದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

6 hours ago

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

13 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

13 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

13 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

23 hours ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

1 day ago