ಭಾರತ ಇತ್ತೀಚೆಗೆ ಅನೇಕ ವಿಚಾರದಲ್ಲಿ ಮುಂದುವರೆದಿದೆ. ಅದರಲ್ಲೂ ಡಿಜಿಟಲ್ ಪೇಮೆಂಟ್ ವಿಷಯದಲ್ಲಂತೂ ಸಾಕಷ್ಟು ಬೆಳವಣಿಗೆ ಕಂಡಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಜರ್ಮನ್ ಸಚಿವ ಭಾರತದ ಡಿಜಿಟಲ್ ಯುಗದ ಬಗ್ಗೆ ಹಾಡಿ ಹೊಗಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಡಿಜಿಟಲ್ ಪಾವತಿ ಆರಂಭವಾಗಿ ವರ್ಷಗಳೇ ಕಳೆದಿವೆ. ಇಂದು ಒಂದು ಟೀ ಕುಡಿದರೂ ಡಿಜಿಟಲ್ ಮೂಲಕವೇ ಹಣ ಪಾವತಿಸುತ್ತಾರೆ. ಸಾರಿಗೆ ವಾಹನಗಳಲ್ಲಿಯೂ ಯುಪಿಐ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನು ಮಾರುಕಟ್ಟೆಗಳಲ್ಲಿ ಎಲ್ಲಾ ಅಂಗಡಿಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇದೆ. ಈ ವ್ಯವಸ್ಥೆಯಿಂದ ಚಿಲ್ಲರೆ ಕೊಡುವ ಸಮಸ್ಯೆಗೆ ಕಡಿವಾಣ ಬಿದ್ದಿದೆ.
ಕೇವಲ ತರಕಾರಿ ಅಂಗಡಿ ಅಲ್ಲದೇ ವ್ಯವಹಾರ ನಡೆಯುವ ಪ್ರತಿ ಕ್ಷೇತ್ರದ ಹಳ್ಳಿ ಹಳ್ಳಿಗೂ ಡಿಜಿಟಲ್ ಪಾವತಿ ಕಾಲಿಟ್ಟಿದೆ. ಒಬ್ಬರ ಖಾತೆಯಿಂದ ಮತ್ತೊಂದು ಖಾತೆಗೂ ಹಣವನ್ನು ಇಂದು ಸುಲಭವಾಗಿ ಕಳಿಸಬಹುದು. ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಫೆಡೆರಲ್ ಮಂತ್ರಿ ವೋಲ್ಕರ್ ವಿಸ್ಸಿಂಗ್, ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರಿನ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಡಿಜಿಟಲ್ ಪೇಮೆಂಟ್ ಮಾಡಿ ತರಕಾರಿ ಖರೀದಿಸಿರುವ ಫೋಟೋ ಮತ್ತು ವಿಡಿಯೋವನ್ನು ಜರ್ಮನಿ ಅಂಬೆಸ್ಸಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಡಿಜಿಟಲ್ ಯುಗದ ಬಗ್ಗೆ ಹೇಳಿದ್ದೇನು? : ಭಾರತದಲ್ಲಿಯ ಡಿಜಿಟಲ್ ಮೂಲ ಸೌಕರ್ಯ ಇಲ್ಲಿಯ ಯಶಸ್ಸು. ಇಲ್ಲಿಯ ಪ್ರತಿಯೊಬ್ಬರು ಯುಪಿಐ ವ್ಯವಸ್ಥೆಯನ್ನು ಬಳಸುತ್ತಾರೆ. ಕೆಲವೇ ಸೆಕೆಂಡ್ ಗಳಲ್ಲಿ ಯುಪಿಐ ಮೂಲಕ ವ್ಯವಹಾರ ನಡೆಸಬಹುದಾಗಿದೆ. ವೋಲ್ಕರ್ ವಿಸ್ಸಿಂಗ್ ಅವರ ಸಹ ಈ ಸರಳ ವಿಧಾನದ ಮೂಲಕ ವ್ಯವಹರಿಸುವ ಅನುಭವವನ್ನು ಪಡೆದುಕೊಂಡರು ಎಂದು ಬರೆಯಲಾಗಿದೆ. ಆಗಸ್ಟ್ 19ರಂದು ಬೆಂಗಳೂರಿನಲ್ಲಿ ನಡೆದ ಜಿ20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ಸಾರಿಗೆ ಫೆಡೆರಲ್ ಮಂತ್ರಿ ವೋಲ್ಕರ್ ವಿಸ್ಸಿಂಗ್ ಭಾಗಿಯಾಗಿದ್ದರು. ಈ ಸಮಯದಲ್ಲಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಸುತ್ತಾಡಿದ್ದಾರೆ.
Source : Twitter
ಒಂದೆರಡು ಕಡೆ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಮೇ14ರಿಂದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜದ ಚಟ್ನಿ ಪುಡಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ 1ಕಪ್. (ಒಣಗಿಸಿದ ಹಲಸಿನ…
ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು…
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಂಭವನೀಯ ದಾಳಿಯ ಬಗ್ಗೆ…
ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…