ಮನೆ ,ಮನೆಯ ಸುತ್ತ ಹೂ ,ತರಕಾರಿಗಳ ಕೈ ತೋಟ. ಎದುರಿಗೆ ಅಂಗಳ, ಮನೆಯ ಕಿಟಕಿ ಪಕ್ಕವೋ ಅಟ್ಟದ ರೀಪಿನ ಸಂಧಿಯಲ್ಲೋ ಸಿಕ್ಕಿದ ಪುಟ್ಟ ಜಾಗದಲ್ಲಿ ಗುಬ್ಬಚ್ಚಿಯ ಎರಡೋ ಮೂರೋ ಗೂಡು ಇದೆಯೆಂದರೆ ಮನೆ ಸಂಪೂರ್ಣವಾಯಿತೆಂದೇ ಅರ್ಥ. ಅಲ್ಲಿಂದ ಮುಂದೆ ಗದ್ದೆ ಇದು ನಮ್ಮ ಹಳ್ಳಿ ಮನೆಗಳ ಸಹಜ ಚಿತ್ರಣ.
ಹುಲ್ಲು ಕಡ್ಡಿ , ಹಕ್ಕಿಯ ಹಿಕ್ಕೆ ,ಸಣ್ಣ ಸಣ್ಣ ರೆಕ್ಕೆಗಳು ಅಲ್ಲಲ್ಲಿ ಬಿದ್ದುಕೊಂಡಿರುವುದು ಸಾಮಾನ್ಯ ದೃಶ್ಯ. ಗುಬ್ಬಚ್ಚಿ ಸಣ್ಣ ಹಕ್ಕಿ . ನಮ್ಮ ಮನಸಿಗೆ ಯಾಕೋ ಇದು ತುಂಬಾ ಹತ್ತಿರದ ಹಕ್ಕಿ ಎನಿಸುತ್ತದೆ. ಆದರೀಗ ಯಾಕೋ ಅಪರೂಪ. ಬೇಕೆಂದ ಕೂಡಲೇ ನೋಡಲು ಸಿಗದು. ಗುಬ್ಬಚ್ಚಿಗಳ ಆಹಾರ ಮೂಲವಾದ ಗದ್ದೆಗಳು ಕಮ್ಮಿಯಾದದ್ದು, ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದುದರ ಕಾರಣವಿರಬಹುದು.
ಗುಬ್ಬಚ್ಚಿಯು ಜೋಡಿಯಾಗಿ ಇರುತ್ತವೆ. ಇದರ ವೈಜ್ಞಾನಿಕ ಹೆಸರು Passer domesticus. ಸರಾಸರಿ ಜೀವಿತಾವಧಿ 3 ವರ್ಷ. ಇದರ ವೇಗದ ಮಿತಿ ಗಂಟೆಗೆ 46 ಕಿಮೀ. ಹಕ್ಕಿಯ ಉದ್ದ 14 ರಿಂದ 18 ಸೆ.ಮೀ. ಎತ್ತರ 16 ಸೆ.ಮೀ. ಸಾಮಾನ್ಯವಾಗಿ ತೂಕ24 ರಿಂದ 40 ಗ್ರಾಂ.
ಅವುಗಳ ಬಣ್ಣ ಕಂದು.ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ.ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ. ಇವುಗಳ ಮೊಟ್ಟೆಗಳು ನಸು ಹಸಿರು ಮಿಶ್ರಿತ ಬಿಳಿ ಬಣ್ಣದ್ದಾಗಿರುತ್ತದೆ. ವಿಶ್ವದಲ್ಲಿ 26 ಜಾತಿಯ ಗುಬ್ಬಚ್ಚಿಗಳನ್ನು ಗುರುತಿಸಲಾಗಿದೆ. ನಮ್ಮ ದೇಶದಲ್ಲಿ 5ವಿಭಿನ್ನ ಜಾತಿಯ ಗುಬ್ಬಿಗಳಿವೆ. ಇವುಗಳಲ್ಲಿ ಮನೆಗುಬ್ಬಿ ಸರ್ವವ್ಯಾಪಿ. ಧಾನ್ಯ, ಹುಳು ಹುಪ್ಪಟೆಗಳು ಇವುಗಳ ಮುಖ್ಯ ಆಹಾರ.
ಗುಬ್ಬಿಗಳಿಗೆ ಧೂಳು ಸ್ನಾನವೆಂದರೆ ಬಹಳ ಪ್ರೀತಿ. ಗುಬ್ಬಿಗಳು ಅಗತ್ಯ ಬಿದ್ದರೆ ನೀರಿನ ಮೇಲೆ ಈಜ ಬಲ್ಲುದು. ಈ ಹಕ್ಕಿ ತನ್ನ ವಾಸ್ತವ್ಯ ಪ್ರದೇಶದಿಂದ ಹೆಚ್ಚೆಂದರೆ 2 ಕಿ.ಮೀ ಸಂಚರಿಸುತ್ತವೆ. ಗುಬ್ಬಚ್ಚಿ ವಲಸೆ ಹಕ್ಕಿಯಲ್ಲ.
2012 ನೇ ಇಸವಿಯಲ್ಲಿ ದೆಹಲಿಯ ರಾಜ್ಯ ಪಕ್ಷಿಯೆಂದು ಗುಬ್ಬಚ್ಚಿಯನ್ನು ಘೋಷಿಸಲಾಗಿದೆ. ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವೆಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಛಾಯಾಚಿತ್ರ : ಯು ರಾಧಾಕೃಷ್ಣ ರಾವ್ ಬಾಳಿಲ
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…