ರಾಜ್ಯಾದ್ಯಂತ ಜಲಕ್ಷಾಮ(Water Crisis) ಶುರುವಾಗಿದೆ. ಸರ್ಕಾರ(Govt) ಕೂಡ ನೀರು ಸರಬರಾಜು(Water supply) ಮಾಡೋದಕ್ಕೆ ನಾನಾ ಪ್ರಯತ್ನ ಮಾಡ್ತಿದೆ. ಮತ್ತೊಂದೆಡೆ ಸುಡುಸುಡು ಬಿಸಿಲಿನ ವಾತಾವರಣ. ನೀರಿಲ್ಲದೇ ಜನಬೇಸಿಗೆಯಲ್ಲಿ(Summer) ಜನ ಪರದಾಟ ಮಾಡ್ತಿದ್ರೇ ಈಗ ಆರೋಗ್ಯದ(Health) ಸಮಸ್ಯೆ ಕೂಡ ಶುರುವಾಗಿದ್ದು, ಕಾಲರಾ(cholera Disease) ಭೀತಿ ಎದುರಾಗಿದೆ.
ಬಿರು ಬಿಸಿಲಿನ ವಾತಾವರಣ, ವಾಡಿಕೆಗಿಂತ ತಾಪಮಾನ ಹೆಚ್ಚಾಗಿ ಜನ ತತ್ತರಿಸ್ತಿದ್ದಾರೆ. ನೀರೇ ಇಲ್ಲದೇ ಕೆರೆ, ಬಾವಿ, ನದಿಗಳು ಬತ್ತಿವೆ. ನೀರಿನಿಂದಲೇ ಕಾಲರಾ ಬರ್ತಿದ್ದು, ಈಗಾಗಲೇ 6 ಕ್ಕೂ ಹೆಚ್ಚು ಕೇಸ್ ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿದೆ. ಹಾಗಾದ್ರೆ ಕಾಲರಾದಿಂದ ದೂರ ಇರೋದು ಹೇಗೆ, ನಾವು ನಮ್ಮ ಮಕ್ಕಳು ಹಿರಿಯರನ್ನ ರಕ್ಷಿಸಿಕೊಳ್ಳೋದು ಹೇಗೆ..? ಅಲ್ಲದೇ ಬೇಸಿಗೆಯಲ್ಲಿ ಹೇಗೆ ಆಹಾರ ಇರಬೇಕು, ಅದರಲ್ಲೂ ಮಕ್ಕಳ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
* ಮಕ್ಕಳಿಗೆ ನಿತ್ಯ 2 ರಿಂದ 3 ಲೀಟರ್ ನೀರು ಕುಡಿಸಿ
* ಕುಡಿಯುವ ನೀರನ್ನ ಕಾಯಿಸಿ, ಆರಿಸಿದ ನಂತರ ನೀಡಿ
* ಪ್ಲಾಸ್ಟಿಕ್ ಬಾಟಲ್ ಬಳಸೋದನ್ನ ನಿಲ್ಲಿಸಿ
* ಸ್ಟೀಲ್ ಬಾಟಲ್‍ಗಳಲ್ಲಿ ನೀರನ್ನು ಕೊಡಿ
* ಕೋಲ್ಡ್ ವಾಟರ್ ನೀಡಲೇಬೇಡಿ
* ಮಿತವಾದ ಮೃದುವಾದ ಆಹಾರ ನೀಡಿ
ಮಕ್ಕಳು ಮಾತ್ರವಲ್ಲ ಪೋಷಕರು ಮತ್ತು ಹಿರಿಯರು ಸಹ ತಿನ್ನೋ ಆಹಾರದ ಬಗ್ಗೆ ಗಮನವಹಿಸಬೇಕು. ಜೊತೆಗೆ ಮನೆಯಿಂದ ಹೊರಗೆ ಬಂದಾಗ ಕಾಟನ್ ಬಟ್ಟೆಯನ್ನ ಧರಿಸಿ, ಸೆಖೆ ಅಂತಾ ಎಸಿಯಲ್ಲೇ ಇದ್ರೂ ಸಮಸ್ಯೆಯಾಗಲಿದೆ ಎಂದು ಆಹಾರ ತಜ್ಞೆ ಡಾ. ಪ್ರೇಮ ಹೇಳುತ್ತಾರೆ. ಒಟ್ಟಿನಲ್ಲಿ ಈ ಬೇಸಿಗೆ ನೀರಿಲ್ಲದೇ ನಾನಾ ಸಮಸ್ಯೆ ಉಂಟು ಮಾಡ್ತಿದೆ. ನೀರಿಗಾಗಿ ಜನ ಬೀದಿ ಬೀದಿ ಸುತ್ತೋ ಪರಿಸ್ಥಿತಿ ನಿರ್ಮಾಣವಾಗಿದ್ರೇ, ನೀರಿನಿಂದಲೇ ಕಾಲರಾ ಕೂಡ ಜನರ ನಿದ್ದೆಗೆಡಿಸ್ತಿರೋದಂತೂ ಸತ್ಯ.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…