ಸುಳ್ಯ ತಾಲೂಕಿನ ಕಸಬಾ ಗ್ರಾಮದ ಶಾಂತಿನಗರದಲ್ಲಿ ತೀರಾ ಚಿಕ್ಕದಾದ ಗುಡಿಸಲು ಮನೆಯಲ್ಲಿರುವ ಮಹಿಳೆಯೊಬ್ಬರ ಮನೆಯ ಕನಸಿಗೆ ಪುತ್ತಿಲ ಪರಿವಾರದ ಸುಳ್ಯ ಘಟಕವು ಈಗ ನೆರವಿಗೆ ಇಳಿದಿದೆ. ಇವರ ಜೊತೆ ಸಹೃದಯಿಗಳು ಕೈಜೋಡಿಸಬಹುದು. ಈ ಮಹಿಳೆ ಸುಮತಿ ಅವರ ಪರಿಸ್ಥಿತಿ ತೀರಾ ಸಂಕಷ್ಟದಿಂದ ಕೂಡಿದೆ.
ಮಹಿಳೆಯ ಪತಿ ಗಣೇಶ ಅಸೌಖ್ಯದ ಕಾರಣದಿಂದಾಗಿ ಇಹಲೋಕ ತ್ಯಜಿಸಿ ಹಲವು ವರ್ಷಗಳಾಗಿವೆ. ಮೂವರು ಮಕ್ಕಳೊಂದಿಗೆ ಮಹಿಳೆಯ ವಾಸ. ಆದರೆ ಮೂರು ಮಕ್ಕಳಲ್ಲಿ ಒಬ್ಬಾತನಿಗೆ ದೃಷ್ಟಿ ದೋಷವಿದ್ದು ಇನ್ನೊಬ್ಬ ಕೂಲಿ ಕೆಲಸ ಮಾಡುತ್ತಿದ್ದಾನೆ. ಮತ್ತೊಬ್ಬ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕೂಲಿ ಮಾಡಿ ಬಂದ ಹಣ ಜೀವನ ನಿರ್ವಹಣೆಗೇ ಸಾಲುತ್ತಿಲ್ಲ. ಹಾಗಿದ್ದರೂ ಪುಟ್ಟ ಮನೆಯೊಂದನ್ನು ಕಟ್ಟುವ ಹಂಬಲ ಸುಮತಿ ಅವರದಾಗಿತ್ತು. ಪುತ್ತಿಲ ಪರಿವಾರದ ಸುಳ್ಯ ಘಟಕದ ಸಹೃದಯಿಗಳು ಸುಮತಿ ಅವರ ಮನೆಯ ಪರಿಸ್ಥಿತಿ ಗಮನಿಸಿ ಮನೆ ಕಟ್ಟುವ ಕನಸಿಗೆ ಆಸರೆಯಾದರು. ಇದರ ಜೊತೆಗೆ ಸ್ಥಳೀಯಾಡಳಿತ , ಪ್ರತಿನಿಧಿಗಳನ್ನೂ ಮಾತನಾಡಿಸಿದರು. ಈಗ ಮಹಿಳೆ ಸುಮತಿ ಅವರ ಪುಟ್ಟ ಮನೆ ಕಟ್ಟುವ ಕನಸಿಗೆ ಕಲ್ಲು, ಸಿಮೆಂಟು, ಹೊಯಿಗೆ, ಕಬ್ಬಿಣ…, ಹೀಗೆ ಸಹಾಯ ಮಾಡಿದರೆ ಮನೆ ಸುಲಭದಲ್ಲಿ ನಿರ್ಮಾಣವಾದೀತು. ಅದಕ್ಕಾಗಿ ನೆರವು ಅಗತ್ಯ ಇದೆ.
The Sullia Unit of Puttila Parivar has now come to help a woman living in a very small hut in Shantinagar, Kasaba village of Sullia taluk. Friends can join hands with them. Sumathi’s situation is very difficult.
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…