ಭಾರತವು 5.3 ಮಿಲಿಯನ್‌ ಮರಗಳನ್ನು ಕಳೆದುಕೊಂಡದ್ದು ಹೇಗೆ..?

May 19, 2024
12:14 PM
ಕೃಷಿಭೂಮಿ ಮರಗಳು ಸಾಕಷ್ಟು ಪ್ರಮಾಣದಲ್ಲಿ ನಾಶವಾಗುತ್ತಿದೆ. ಈ ಬಗ್ಗೆ ಸಂಶೋಧಕರು ಕಳೆದ 5 ವರ್ಷಗಳ ಅಧ್ಯಯನ ವರದಿಯನ್ನು ಬಹಿರಂಗಪಡಿಸಿದ್ದಾರೆ.

ಭಾರತವು 5 ವರ್ಷಗಳಲ್ಲಿ 5.3 ಮಿಲಿಯನ್ ಮರಗಳನ್ನು ಕಳೆದುಕೊಂಡಿದೆ. ಅಂದರೆ 5 ವರ್ಷಗಳಲ್ಲಿ ಅಂದಾಜು 11 ಪ್ರತಿಶತದಷ್ಟು ದೊಡ್ಡ ಮರಗಳು  ಕಣ್ಮರೆಯಾಗಿವೆ. ಇದೊಂದು ಅಧ್ಯಯನ ವರದಿ ಈಚೆಗೆ ಪ್ರಕಟವಾಗಿದೆ. ಕೃಷಿಯಿಂದಾಗಿ ಹೆಚ್ಚು  ಮರಗಳು ನಾಶವಾಗಿದೆ ಎನ್ನುವುದು ಈ ವರದಿಯಲ್ಲಿ ಕಂಡುಬಂದಿರುವ ಅಂಶವಾಗಿದೆ.

Advertisement
Advertisement
Advertisement

2018 ರಿಂದ 2022 ರವರೆಗೆ ಭಾರತದಲ್ಲಿ ಐದು ಮಿಲಿಯನ್ ದೊಡ್ಡ ಕೃಷಿ ಭೂಮಿ ಮರಗಳನ್ನು ಕೃಷಿಯ ಕಾರಣಕ್ಕೆ  ಕಡಿಯಲಾಯಿತು, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಗಮನಾರ್ಹ ನಷ್ಟವಾಗಿದೆ. ಈ ಹಿಂದೆ 2010-2011ರಲ್ಲಿ ಮ್ಯಾಪ್ ಮಾಡಲಾದ ಭಾರತದ ಸುಮಾರು 11% ದೊಡ್ಡ ಮರಗಳು 2018 ರ ವೇಳೆಗೆ ಕಣ್ಮರೆಯಾಗಿವೆ.  ಡೆನ್ಮಾರ್ಕ್ ಮೂಲದ ಸಂಶೋಧಕರು ಮ್ಯಾಪ್ ಮಾಡಿ ಗಮನಿಸಿದ್ದರು.

Advertisement

ಪರಿಸರ ಉಳಿವಿನ ಬಗೆಗಿನ ಸಂಸ್ಥೆಯ ಅಧ್ಯಯನವು ಆತಂಕಕಾರಿಯಾದ ಅಂಶಗಳನ್ನು ಹೇಳಿದೆ. Nature Sustainability journal ನಲ್ಲಿ ಈ ಅಂಶ ಪ್ರಕಟವಾಗಿದೆ. ಈಚೆಗೆ ಅರಣ್ಯ ನಾಶದ ಪ್ರಮಾಣವು ಹೆಚ್ಚಾಗುತ್ತಿದೆ. ವಿಶೇಷವಾಗಿ ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ, ಕೆಲವು ಪ್ರದೇಶಗಳಲ್ಲಿ ಅರ್ಧದಷ್ಟು ಮರಗಳನ್ನು ಕಳೆದುಕೊಂಡಿವೆ. ಮಧ್ಯ ಭಾರತವು ಅತಿ ಹೆಚ್ಚು ಅರಣ್ಯನಾಶದ ಪ್ರಮಾಣವನ್ನು ಅನುಭವಿಸುತ್ತಿದೆ.ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಹರಿಯಾಣ ಮತ್ತು ಕಾಶ್ಮೀರದಂತಹ ರಾಜ್ಯಗಳಾದ್ಯಂತ ಗಮನಿಸಿದ ಅಧ್ಯಯನ ತಂಡವು ಗ್ರಾಮದ ಜನರ ಜೊತೆ ಮಾತುಕತೆ ನಡೆಸಿದೆ. ಎಲ್ಲಾ ಕಡೆಯೂ ಕೂಡಾ ಭತ್ತದ ಗದ್ದೆಗಳನ್ನು ವಿಸ್ತರಿಸಲು ಮತ್ತು ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಮರಗಳನ್ನು ಕಡಿಯಲಾಗಿದೆ ಎಂಬ ಅಂಶ ಬಹಿರಂಗವಾಗಿದೆ.

2018 ಮತ್ತು 2022 ರ ನಡುವೆ, ಸುಮಾರು 53 ಲಕ್ಷ ಮರಗಳು ಭಾರತದಲ್ಲಿ ನಾಶವಾಗಿದೆ. ಅಂದರೆ ಪ್ರತಿ ಚದರ ಕಿಲೋಮೀಟರ್‌ಗೆ ಸರಾಸರಿ 2.7 ಮರಗಳು ನಷ್ಟವಾಗಿವೆ. ವಿಶೇಷವಾಗಿ  ಮಣ್ಣಿನ ಫಲವತ್ತತೆಯನ್ನು ಹೆಚ್ಚು ಮಾಡುವ ಮರಗಳೇ ನಾಶವಾಗಿರುವುದು ಕಂಡುಬಂದಿದೆ.

Advertisement

ಏಕೆ ಮರಗಳು ನಾಶವಾಯಿತು ಎಂದು ಸಂಶೋಧಕರು ಮತ್ತಷ್ಟು ಗಮನಹರಿಸಿದಾಗ,  ಕೃಷಿ ವಿಧಾನಗಳಲ್ಲಿನ ಬದಲಾವಣೆಯೇ ಪ್ರಾಥಮಿಕ ಕಾರಣ ಎಂದು ಹೇಳಿದ್ದಾರೆ. ನೀರಾವರಿ ಸಂಪನ್ಮೂಲಗಳು ಹೆಚ್ಚಾದಂತೆ, ಹೆಚ್ಚಿನ ಮರಗಳು ಕೃಷಿಗೆ ಹಾನಿಯಾಗುತ್ತದೆ, ನೆರಳಿನ ಕಾರಣದಿಂದ ಇಳುವರಿ ಕಡಿಮೆಯಾಗುತ್ತದೆ ಎಂದು ಕಡಿದು ಹಾಕಲಾಗಿದೆ.

ಸ್ಥಳೀಯರ , ಗ್ರಾಮೀಣ ಭಾಗದ ಕೃಷಿಕರ ಪ್ರಕಾರ, ಹವಾಮಾನ ಬದಲಾವಣೆಯ ಕಾರಣದಿಂದ ಮರಗಳ  ನಾಶವಾಗಲು ಮುಖ್ಯ ಕಾರಣವಲ್ಲ. ಕೃಷಿ ಪದ್ಧತಿಯಲ್ಲಿನ ಬದಲಾವಣೆಯೇ ಮುಖ್ಯ ಕಾರಣ. ಈಗ ಸ್ಥಳೀಯ ಮರಗಳು ಹೊಲಗಳಲ್ಲಿ ಅಪರೂಪವಾಗಿವೆ ಎನ್ನುತ್ತಾರೆ.

Advertisement

ಮರಗಳ ಸಂಖ್ಯೆ ಕಡಿಮೆಯಾದಂತೆಯೇ ಹವಾಮಾನ ಪರಿಸ್ಥಿತಿಯೂ ಬದಲಾಗುತ್ತಿದೆ. ಹೀಗಾಗಿ ನೀರಿನ ಲಭ್ಯತೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಕೃಷಿಯ ಮೇಲೆಯೇ ಮತ್ತೆ ಪರಿಣಾಮ ಬೀರುತ್ತಿದೆ.  ಕೃಷಿ ವಿಸ್ತರಣೆ ಹಾಗೂ ಅವೈಜ್ಞಾನಿಕವಾದ ಬೆಳವಣಿಗೆಯ ಕಾರಣದಿಂದ ಅರಣ್ಯ ನಾಶ ಹಾಗೂ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಪರಿಗಣಿಸಲಾಗಿದೆ.

ಪರಿಸರವನ್ನು, ಜೀವವೈವಿಧ್ಯತೆಯನ್ನು ಉತ್ತೇಜಿಸುವ ಕೆಲಸ ನಡೆಯಬೇಕಿದೆ. ಸದ್ಯ ಕೃಷಿಯ ಮೂಲಕವೇ ಅರಣ್ಯ ಉಳಿಸುವ, ಬೆಳೆಸುವ ಕಾರ್ಯ ಮತ್ತೆ ಆಗಬೇಕಿದೆ.

Advertisement

( ಈ ಸುದ್ದಿಯ ಹೆಡ್ಡಿಂಗ್‌ ಹಾಗೂ ಚಿತ್ರವನ್ನು ಮಾತ್ರಾ ದ ರೂರಲ್‌ ಮಿರರ್.ಕಾಂ ಮಾಡಿದೆ. ಉಳಿದ ವಿಷಯಗಳು ಸುದ್ದಿಮೂಲಗಳಿಂದ ಪಡೆಯಲಾಗಿದೆ ) 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror