ನಿಮ್ಮ ಹೃದಯವು ರಕ್ತವನ್ನು ಪಂಪು ಮಾಡಲು ಹೆಚ್ಚು ಶ್ರಮಿಸಬೇಕಾದರೆ ಮತ್ತು ನಿಮ್ಮ ಅಪಧಮನಿಗಳು ಕಿರಿದಾಗುತ್ತಿದ್ದರೆ, ರಕ್ತದೊತ್ತಡ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ರಕ್ತದೊತ್ತಡ 120/ 80 ಇರುತ್ತದೆ. ರಕ್ತದೊತ್ತಡ ಇದು ಎರಡು ಸಂಖ್ಯೆಗಳನ್ನು ಒಳಗೊಂಡಿರುತ್ತದೆ. ಅಗ್ರ ಸಂಖ್ಯೆ ನಿಮ್ಮ ಸಂಕೋಚನದ ರಕ್ತದೊತ್ತಡವಾಗಿದೆ ನಿಮ್ಮ ಹೃದಯ ಬಡಿತ ಮತ್ತು ದೇಹದಾದ್ಯಂತ ರಕ್ತವನ್ನು ತಳ್ಳಿದಾಗ ಆಗುವ ಹೆಚ್ಚಿನ ಒತ್ತಡ ಕೆಳಭಾಗವು ನಿಮ್ಮ ಡಯಸ್ಟೋಲಿಕ್ ಬಡಿತಗಳ ನಡುವೆ ನಿಮ್ಮ ಹೃದಯ ಸಡಿಲಗೊಂಡಾಗ ಆಗುವ ಕಡಿಮೆ ಒತ್ತಡ.
ಅಧಿಕ ರಕ್ತದೊತ್ತಡಕ್ಕೆ ಕಾರಣಗಳು:
* ಅಧಿಕ ತೂಕ
* ಮಾನಸಿಕ ಒತ್ತಡ
* ನಿದ್ರಾಹೀನತೆ
* ಅತಿಯಾದ ಕೊಬ್ಬಿನಂಶ ಅತಿಯಾದ ಉಪ್ಪು ಹಾಗೂ ನಾರಿನ ಅಂಶವಿಲ್ಲದ ಆಹಾರ ಸೇವನೆ
* ಮಧ್ಯಪಾನ / ಧೂಮಪಾನ
* ನೋವು ನಿವಾರಕ ಔಷಧಿಗಳ ದೀರ್ಘಾವಧಿ ಪ್ರಯೋಗ
* ಚಟುವಟಿಕೆ ಇಲ್ಲದ ಅನಿಮಿಯತ ಜೀವನ ಶೈಲಿ
* ಅನುವಂಶಿಕ
* ವಯಸ್ಸಿನ ಅಂಶ
* ಟೈಪ್ 2ಮಧುಮೇಹ,ಹೃದಯ ಸಂಬಂಧಿ ಹಾಗೂ ಮೂತ್ರಪಿಂಡ ಕಾಯಿಲೆಗಳು ನರ ಮತ್ತು ಮಾನಸ ರೋಗ ಕಾಯಿಲೆಗಳು
ಲಕ್ಷಣಗಳು :-
*ತಲೆನೋವು
* ಮಂದದ್ರಷ್ಟಿ
* ತಲೆ ತಿರುಗುವಿಕೆ
* ಉಸಿರಾಟ ತೊಂದರೆ
* ಎದೆ ಮತ್ತು ತಲೆಯ ಭಾಗದಲ್ಲಿ ಬಡಿತದ ಭಾವನೆ
* ಅತಿಯಾದ ಆಯಾಸ ಹಾಗೂ ವಾಕರಿಕೆ
ರಕ್ತದ ಒತ್ತಡ ಪತ್ತೆ ಹಚ್ಚದೆ ಹೋದಲ್ಲಿ ಹೃದಯಘಾತ ಪಾರ್ಶ್ವ ವಾಯು ಮತ್ತು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯಕರ ಆಹಾರ ವ್ಯಾಯಾಮ ಮತ್ತು ಉತ್ತಮ ಒತ್ತಡ ನಿರ್ವಹಣೆಯ ಜೀವನ ಶೈಲಿ ಬದಲಾವಣೆಗಳು ಅಧಿಕ ರಕ್ತದ ಒತ್ತಡವನ್ನು ನಿಭಾಯಿಸಲು ಉತ್ತಮ ಮಾರ್ಗಗಳಾಗಿವೆ ಅಧಿಕ ರಕ್ತದೊತ್ತಡವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಔಷಧಿ ಮತ್ತು ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ನಿಯಂತ್ರಿಸಬಹುದು ಇದಕ್ಕೆ ಸಾಮಾನ್ಯವಾಗಿ ನಿಯಮಿತ ವೈದ್ಯಕೀಯ ಆರೈಕೆ ಅಗತ್ಯ.
ಆಯುರ್ವೇದ ಔಷಧಿ ಯಾದ ಸರ್ಪಗಂಧವು ರಕ್ತದೊತ್ತಡಕ್ಕೆ ಉತ್ತಮ ಚಿಕಿತ್ಸೆಯಾಗಿದೆ ಪಂಚಕರ್ಮ ಚಿಕಿತ್ಸೆ ಯಲ್ಲಿ ಒಂದಾದ ಶಿರೋದಾರವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ ದಿನನಿತ್ಯವೂ ಯೋಗಾಸನ ವ್ಯಾಯಾಮ ಇವುಗಳಿಂದಲೂ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಬರಹ :ಡಾ. ಜ್ಯೋತಿ ಕೆ, ಆಯುರ್ವೇದ ವೈದ್ಯರು, ಮಂಗಳೂರು, 94481 68053
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…
ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…
ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…
ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…
ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…