“ನೀವು ಕೃಷಿಗೆ ಇಳಿಯುವ ಪ್ಲಾನ್ ಇದ್ದರೆ ಬೇಗನೆ ಇಳಿದು ಬಿಡಿ. ಹಿರಿಯರು ಮನೆಯಲ್ಲಿ ಮಾರ್ಗದರ್ಶನ ಮಾಡುವಾಗಲೇ ಕೃಷಿಯಲ್ಲಿ ಇದ್ದು ಬಿಡಿ…” ಹೀಗೆಂದು ಸಲಹೆ ನೀಡುವವರು ಯುವ ಕೃಷಿಕ ಶ್ರೀನಂದನ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಣ್ಮೂರಿನ ಶ್ರೀನಂದನ ಅವರು ಈಗ ಯುವ ಕೃಷಿಕ. ಎಣ್ಮೂರಿನ ಪ್ರಸನ್ನ ಕುಂಞಹಿತ್ಲುಹಾಗೂ ಭಾಗ್ಯ ಅವರ ಪುತ್ರನಾಗಿರುವ ಶ್ರೀನಂದನ ಅವರು ಪದವಿಯ ಬಳಿಕ ಉದ್ಯೋಗಕ್ಕಾಗಿ ಬೆಂಗಳೂರು ಬಸ್ಸು ಹತ್ತಿದವರು. ಕೃಷಿಯಲ್ಲಿಯೇ ನೆಲೆಯೂರುವ ಉದ್ದೇಶ ಹೊಂದಿದ್ದ ಅವರು ಬೆಂಗಳೂರಿನ ಕೆಲಸಕ್ಕೆ ಗುಡ್‌ಬೈ ಹೇಳಿ ಕೃಷಿ ಕೆಲಸಕ್ಕೆ ಇಳಿದರು.
ತಂದೆ ಮಾಡಿರುವ ಕೃಷಿ ಕಾಯಕವನ್ನು ಮುಂದುವರಿಸುತ್ತಾ ಅಭಿವೃದ್ಧಿ ಪಡಿಸಿದ ಶ್ರೀನಂದನ್ ಅವರು ಕೃಷಿಗೆ ಬಂದ ವರ್ಷ ಕೊಳೆರೋಗದಿಂದ ಅಡಿಕೆ ವ್ಯಾಪಕವಾಗಿ ನಷ್ಟವಾಗಿತ್ತು. ಈ ಸಂದರ್ಭ ತಂದೆಯ ಬೆಂಬಲದ ಮಾತುಗಳಿಂದ ಧೈರ್ಯ ಬಂದಿತ್ತು ಎನ್ನುವ ಶ್ರೀನಂದನ, ಕೃಷಿಯಲ್ಲಿಎಳೆಯ ಪ್ರಾಯದಲ್ಲಿ ಅಂದರೆ ಬಹುಬೇಗನೆ ತೊಡಗಿಸಿಕೊಂಡಾಗ ಕೃಷಿ ಸವಾಲುಗಳು ತಿಳಿದು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ.
ಒಂದು ಸಮಯದಲ್ಲಿ ತೋಟದ ಕಾಳುಮೆಣಸು ಕೊಯ್ಯಲು ಜನ ಸಿಗದೇ ಇದ್ದಾಗ ನಾನೇ ಸ್ವತ: ಆರಂಭಿಸಿದೆ, ಈಗ ಅಭ್ಯಾಸವಾಗಿದೆ ಎನ್ನುತ್ತಾರೆ ಶ್ರೀನಂದನ.
ಮನೆಯಲ್ಲೂ ಮನೆಯಾಕೆಗೂ ಕೃಷಿ, ಹಳ್ಳಿ ಪ್ರದೇಶ ಇಷ್ಟವಾದ ಕಾರಣ ಕೃಷಿ ಬದುಕು ಸಂತೃಪ್ತವಾಗಿದೆ, ನಾನು ಕೃಷಿಕ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳುತ್ತಾರೆ.
ಇಂದಿನ ಜಗತ್ತಿನಲ್ಲಿ ನಿರ್ದಿಷ್ಟ ಜೀವನ ದೃಷ್ಠಿಯನ್ನು ಹೊಂದಿರಲು ಸಾಧ್ಯವಿಲ್ಲ. ಅದು ಆಗಾಗ ಬದಲಾಗುವ…
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮೀನುಗಾರಿಕೆ ವಲಯದ ಪ್ರಗತಿ ಹಾಗೂ ಭವಿಷ್ಯದ…
ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರಸ್ತುತ ಕೃಷಿ ಉತ್ಪಾದನೆಯ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490