ಪ್ರಪಂಚದಲ್ಲಿ ಆಹಾರ ಭದ್ರತೆಯ ಬಗ್ಗೆ ಹೆಚ್ಚಿನ ಗಮನಹರಿಸುವ ಕೆಲಸ ಆರಂಭವಾಗಿದೆ. ಕೃಷಿ(Agriculture) ಕ್ಷೇತ್ರದ ಬೆಳವಣಿಗೆ, ಕೃಷಿ ಜಿಡಿಪಿ ಹೆಚ್ಚಳದ ಕಡೆಗೆ ಎಲ್ಲಾ ಒಕ್ಕೂಟಗಳೂ ಕೆಲಸ ಆರಂಭ ಮಾಡಿದೆ. ಇದೀಗ ಆಫ್ರಿಕಾದ ಕೃಷಿ ವಲಯದ ನೀತಿ ನಿರೂಪಕರು ಆಫ್ರಿಕಾ ಖಂಡದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು, ಪ್ರಾಯೋಗಿಕ ಕ್ರಮಗಳನ್ನು ಜಾರಿಗೆ ತರಲು ನಿರ್ಣಾಯಕವಾಗಿ ಕಾರ್ಯನಿರ್ವಹಿಸಲುನಿರ್ಧರಿಸಿದ್ದಾರೆ.
ಆಫ್ರಿಕಾದ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ನಡೆದ ಐದು ದಿನಗಳ ಆಫ್ರಿಕಾ ಗ್ರೀನ್ ರೆವಲ್ಯೂಷನ್ ಫೋರಮ್ ಶೃಂಗಸಭೆಯ ಸಮಾರೋಪದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಆಹಾರ ಭದ್ರತೆಯನ್ನು ನಿರ್ಮಿಸಲು ಮತ್ತು ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸಲು ಮತ್ತು ಆಫ್ರಿಕಾದಲ್ಲಿ ಸುಸ್ಥಿರ, ಲಾಭದಾಯಕ ಮತ್ತು ಕೃಷಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಚಾಲನೆ ಮಾಡಲು ಅಗತ್ಯ ಕ್ರಮಗಳ ಕಡೆಗೆ ಹೆಜ್ಜೆ ಇರಿಸಿದ್ದಾರೆ. ಕೃಷಿಗೆ ಹೆಚ್ಚಿನ ಸಂಪನ್ಮೂಲಗಳನ್ನು ನಿರ್ದೇಶಿಸುವ ತಮ್ಮ ಸಂಕಲ್ಪವನ್ನು ಅಲ್ಲಿನ ಕಾಯಕರು ಪ್ರಕಟಿಸಿದ್ದಾರೆ.
ಶೃಂಗಸಭೆಯಲ್ಲಿ ರುವಾಂಡಾದ ಕೃಷಿ ಸಚಿವ ಜೆರಾಲ್ಡಿನ್ ಮುಕೇಶಿಮಾನಾ ಅವರು ಮಾತನಾಡುತ್ತಾ, ಆಹಾರ ಭದ್ರತೆಯ ವಿಷಯದಲ್ಲಿ ಇನ್ನು ಮುಂದೆ ನಾವು ಮಾತನಾಡುವುದಿಲ್ಲ, ಕಾರ್ಯಗತಗೊಳಿಸುತ್ತೇವೆ ಎಂದು ಹೇಳಿದರು. ಅಲ್ಲದೆ, ಕಡಿಮೆ ಪದಗಳನ್ನು ಬಳಸುತ್ತೇವೆ ಮತ್ತು ಹೆಚ್ಚಿನ ಕ್ರಿಯೆಗಳನ್ನು ಮಾಡುತ್ತೇವೆ ಎನ್ನುವುದನ್ನು ಹೇಳಿದ್ದರು.
ಶೃಂಗ ಸಭೆಯಲ್ಲಿ ಕೃಷಿ ಅಭಿವೃದ್ಧಿಗೆ ಪ್ರಮುಖವಾಗಿ ರೈತರು ಕೈಗೆಟುಕುವ, ಉತ್ಪಾದಕ, ಹವಾಮಾನ/ಕೀಟ-ನಿರೋಧಕ ಬೀಜಗಳ ತಯಾರಿ ಅಗತ್ಯವಿದೆ ಎನ್ನುವುದನ್ನು ಚರ್ಚಿಸಲಾಯಿತು. ಅದರ ಜೊತೆಗೆ ಮಹಿಳಾ ನೇತೃತ್ವದ ಎಸ್‌ಎಂಇಗಳಿಗೆ 25 ಪ್ರತಿಶತದಷ್ಟು ಹಣವನ್ನು ನೀಡಬೇಕು. ಇದು ಮಹಿಳೆಯರು ಮತ್ತು ಯುವಕರಿಗೆ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎನ್ನುವುದು ಕೂಡಾ ಗಂಭೀರ ಚರ್ಚೆಯ ವಿಷಯವಾಯಿತು. ಕೃಷಿಯಲ್ಲಿ ಸುಧಾರಿತ ತಳಿಗಳು, ಸುಧಾರಿತ ಯಂತ್ರಗಳ ಬಳಕೆ, ಹೊಸ ಮಾದರಿಯ ಕೃಷಿಯನ್ನೂ ಪರಿಚಯ ಮಾಡಬೇಕು. ಒಟ್ಟಾರೆ ದೇಶದ ಆಹಾರ ಭದ್ರತೆಗೆ ದೇಶದಲ್ಲಿಯೇ ಸುದೃಢವಾಗಿ ಕೃಷಿ ಬೆಳವಣಿಗೆಯೇ ಪರಿಹಾರ ಎನ್ನುವುದನ್ನು ಈ ಶೃಂಗಸಭೆ ಕಂಡುಕೊಂಡಿತು.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…