ಹೊಸರುಚಿ | ಹರಿವೆ ಸೊಪ್ಪು ಹಲಸಿನ ಬೀಜದ ಪಲ್ಯ

November 29, 2025
7:48 PM

ಹರಿವೆ ಸೊಪ್ಪು ಹಲಸಿನ ಬೀಜದ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು :  ಹರಿವೆ ಸೊಪ್ಪು 2ಕಪ್, ಹಲಸಿನ ಬೀಜ 8, ಬೆಲ್ಲ ರುಚಿಗೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಅರಸಿನ ಹುಡಿ.1/4ಚಮಚ, ಮೆಣಸಿನ ಪುಡಿ 1/4ಚಮಚ, ಕಾಯಿತುರಿ.  ಒಗ್ಗರಣೆ ಗೆ : ಸಾಸಿವೆ, ಉದ್ದಿನ ಬೇಳೆ,ಎಣ್ಣೆ ,ಕೆಂಪು ಮೆಣಸು.ಕರಿಬೇವಿನ ಸೊಪ್ಪು.

ಮಾಡುವ ವಿಧಾನ :  ಮೊದಲು ಹರಿವೆ ಸೊಪ್ಪನ್ನ ಚೆನ್ನಾಗಿ ತೊಳೆದು ಕ್ಲಿನ್ ಮಾಡಿ. ಆ ನಂತರ ಚಿಕ್ಕದಾಗಿ ಕಟ್ ಮಾಡಿ ಅದರ ದಂಟನ್ನ ಕಟ್ ಮಾಡಿ ಹಾಕಿ ಸ್ವಲ್ಪ ನೀರು ಚಿಟಿಕೆ ಉಪ್ಪು ಹಾಕಿ ಇಡಿ. 10 ನಿಮಿಷದ ಬಳಿಕ ಉಪಯೋಗಿಸಿ.  ಹಲಸಿನ ಬೀಜದ ಸಿಪ್ಪೆ ತೆಗೆದು ತುಂಡು ಮಾಡಿ ಇಡಿ.  ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ,ಕೆಂಪು ಮೆಣಸು, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ.  ಹಲಸಿನ ಬೀಜವನ್ನು ಹಾಕಿ ಫ್ರೈ ಮಾಡಿ ನೀರು ಹಾಕಿ ಬೇಯಲುಬಿಡಿ. ನಂತರ ಸೊಪ್ಪು ಹಾಕಿ, ಉಪ್ಪು ,ಬೆಲ್ಲ ಅರಸಿನ, ಕೆಂಪು ಮೆಣಸಿನ ಪುಡಿ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೆಂದನಂತರ ಕಾಯಿ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.  ಪಲ್ಯ ರೆಡಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಮೊಬೈಲ್ ಟವರ್‌ಗಳ ನಡುವೆ ಹಕ್ಕಿಗಳ ಕಲರವ – ಬಸ್‌ ನಿಲ್ದಾಣದ ಬೇವಿನ ಮರದಲ್ಲಿ ನೂರಾರು ಹಕ್ಕಿಗಳ ವಾಸ
November 2, 2026
6:56 AM
by: ದ ರೂರಲ್ ಮಿರರ್.ಕಾಂ
ಮಳೆ ಕೈಕೊಟ್ಟರೂ ಬಗ್ಗದ ಛಲ – ಸೂರ್ಯಕಾಂತಿ ಬೆಳೆದು ಮಾದರಿಯಾದ ದಿವ್ಯಾಂಗ ರೈತ ಮಹಿಳೆ
November 2, 2026
6:43 AM
by: ದ ರೂರಲ್ ಮಿರರ್.ಕಾಂ
ನವೆಂಬರ್‌ 5ರಿಂದ ರಾಜ್ಯದಲ್ಲಿ ಬಸ್‌ ಪ್ರಯಾಣ ದರ ಏರಿಕೆ
November 2, 2026
6:33 AM
by: ದ ರೂರಲ್ ಮಿರರ್.ಕಾಂ
ರೈತರಿಗೆ ಕೃಷಿ ಯಂತ್ರೋಪಕರಣ ಸೌಲಭ್ಯ ಕಲ್ಪಿಸಲು ’ನೇಗಿಲಯೋಗಿ’ ಯೋಜನೆ ಜಾರಿ ಸಿದ್ಧತೆ
November 2, 2026
6:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror