ಹೊಸರುಚಿ | ಹಲಸಿನ ಬೀಜದ ರೊಟ್ಟಿ

October 4, 2025
10:26 AM

ಹಲಸಿನ ಬೀಜದ ರೊಟ್ಟಿ ಬೇಕಾಗುವ ಸಾಮಗ್ರಿಗಳು:  ಹಲಸಿನ ಬೀಜ 1ಕಪ್, ಅಕ್ಕಿ ಹುಡಿ 2 ಕಪ್, ಕಾಯಿ ತುರಿ 4 ಸ್ಪೂನ್, ಹಸಿಮೆಣಸು 2 ( ಬೇಕಿದ್ದರೆ ಜಾಸ್ತಿ ಹಾಕಬಹುದು). ಹಸಿ ಶುಂಠಿ (ಚಿಕ್ಕದಾಗಿ ಕಟ್ ಮಾಡಿ)1 ಸ್ಪೂನ್, ನೀರುಳ್ಳಿ 1/2 ಕಪ್, ಕರಿಬೇವಿನ ಸೊಪ್ಪು 6 ಸ್ಪೂನ್, ಅರಶಿನ ಹುಡಿ ಸ್ವಲ್ಪ, ಕೊತ್ತಂಬರಿ ಸೊಪ್ಪು 1 ಸ್ಪೂನ್,ಕೊತ್ತಂಬರಿ ಹುಡಿ. ಸ್ವಲ್ಪ ಜೀರಿಗೆ ಸ್ವಲ್ಪ 1 ಚಮಚ, ತುಪ್ಪ ಅಥವಾ ಎಣ್ಣೆ.

ಮಾಡುವ ವಿಧಾನ: ಜಜ್ಜಿದ ಹಲಸಿನ ಬೀಜವನ್ನು ಮೆತ್ತಗೆ ಬೇಯಿಸಿಕೊಳ್ಳಿ.  ನಂತರ ಕಾಯಿ ತುರಿ, ಮೆಣಸು, ಶುಂಠಿ ಹಾಕಿ ರುಬ್ಬಿಕೊಳ್ಳಿ.. ಇದಕ್ಕೆ ಅಕ್ಕಿ ಹುಡಿ, ನೀರುಳ್ಳಿ, ಕರಿಬೇವಿನ ಸೊಪ್ಪು, ಅರಶಿನ ಹುಡಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಹುಡಿ, ಜೀರಿಗೆ, ಉಪ್ಪು ಎಲ್ಲವನ್ನೂ ಹಾಕಿ ಕಲಸಿಕೊಳ್ಳಿ. ಕಿತ್ತಳೆ ಗಾತ್ರದ ಉಂಡೆಯನ್ನು ಮಾಡಿ ಬಾಳೆಎಲೆಯ ತಳಭಾಗದಲ್ಲಿ ಕಿತ್ತಳೆ ಗಾತ್ರದ ಉಂಡೆಯನ್ನು ಹಾಕಿ ಇನ್ನೊಂದು ಎಲೆ ಇಂದ ಮುಚ್ಚಿ ಪೂರಿಯಂತೆ ಒತ್ತಿ. ಅಥವಾ ಕೈ ಯಲ್ಲಿ ತಟ್ಟ ಬಹುದು. ಕಾದ ಕಾವಲಿಯ ಮೇಲೆ ಹಾಕಿ ಬೇಯಿಸಿ ಬಾಳೆಎಲೆ ತೆಗೆದು ಎರಡು ಬದಿ ತುಪ್ಪ ಅಥವಾ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಮೊಬೈಲ್ ಟವರ್‌ಗಳ ನಡುವೆ ಹಕ್ಕಿಗಳ ಕಲರವ – ಬಸ್‌ ನಿಲ್ದಾಣದ ಬೇವಿನ ಮರದಲ್ಲಿ ನೂರಾರು ಹಕ್ಕಿಗಳ ವಾಸ
November 2, 2026
6:56 AM
by: ದ ರೂರಲ್ ಮಿರರ್.ಕಾಂ
ಮಳೆ ಕೈಕೊಟ್ಟರೂ ಬಗ್ಗದ ಛಲ – ಸೂರ್ಯಕಾಂತಿ ಬೆಳೆದು ಮಾದರಿಯಾದ ದಿವ್ಯಾಂಗ ರೈತ ಮಹಿಳೆ
November 2, 2026
6:43 AM
by: ದ ರೂರಲ್ ಮಿರರ್.ಕಾಂ
ನವೆಂಬರ್‌ 5ರಿಂದ ರಾಜ್ಯದಲ್ಲಿ ಬಸ್‌ ಪ್ರಯಾಣ ದರ ಏರಿಕೆ
November 2, 2026
6:33 AM
by: ದ ರೂರಲ್ ಮಿರರ್.ಕಾಂ
ರೈತರಿಗೆ ಕೃಷಿ ಯಂತ್ರೋಪಕರಣ ಸೌಲಭ್ಯ ಕಲ್ಪಿಸಲು ’ನೇಗಿಲಯೋಗಿ’ ಯೋಜನೆ ಜಾರಿ ಸಿದ್ಧತೆ
November 2, 2026
6:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror