ಮಾನವ ಕ್ರೂರಿಯಾಗುತ್ತಿದ್ದಾನೆ. ಆನೆ , ದನ ಹೀಗೆ ಎಲ್ಲಾ ಪ್ರಾಣಿಗಳನ್ನೂ ಕ್ರೂರವಾಗಿ ಸಾಯಿಸುತ್ತಿದ್ದಾನೆ. ಕೇರಳದಲ್ಲಿ ಗರ್ಭಿಣಿ ಕಾಡಾನೆ ಅನಾನಸಿನಲ್ಲಿ ಸ್ಫೋಟಕ ತಿಂದು ನರಳಿ ಸತ್ತರೆ, ಇದೀಗ ಹಿಮಾಚಲ ಪ್ರದೇಶದಲ್ಲೂ ಅದೇ ಮಾದರಿಯ ಹೃದಯ ವಿದ್ರಾವಕ ಘಟನೆ ನಡೆದಿದೆ. ಪಟಾಕಿ ಸುತ್ತಿದ ಗೋಧಿ ಉಂಡೆ ತಿಂದು ಹಸುವಿನ ದವಡೆ ಸ್ಫೋಟಗೊಂಡಿದೆ. ಈ ವರ್ಷದ ಮೊದಲು ಅಂದರೆ ಫೆಬ್ರವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಅಂತಹದ್ದೇ ಘಟನೆ ನಡೆದಿತ್ತು. ಸ್ಫೋಟಕ ತಿಂದು ದನದ ದವಡೆ ಸೀಳಿತ್ತು.
Advertisement Advertisement Advertisement
ನವದೆಹಲಿ: ಕೇರಳದಲ್ಲಿ ಸ್ಫೋಟಕ ತುಂಬಿಸಿದ್ದ ಅನಾನಸ್ ತಿಂದು ದವಡೆ ಸೀಳಿ ಆಹಾರ ಸೇವಿಸಲಾಗದೆ ನರಳಿ ಸತ್ತ ಘಟನೆ ಮರೆಯುವ ಮುನ್ನವೇ ಹಿಮಾಚಲ ಪ್ರದೇಶದಲ್ಲಿ ಗರ್ಭಿಣಿ ಹಸುವೊಂದು ಸ್ಫೋಟಕ ಸುತ್ತಿಟ್ಟ ಗೋಧಿ ಹಿಟ್ಟು ತಿಂದು ದವಡೆ ಸೀಳಿದ ಘಟನೆ ನಡೆದಿದೆ.
ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯ ಜಾಂಡುಟ್ಟಾ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿರುವ ಈ ಘಟನೆ ನಡೆದು ವಾರ ಕಳೆದಿದೆ. ಸೋಶೀಯಲ್ ಮೀಡಿಯಾಗಳಲ್ಲಿ ದನದ ವೀಡಿಯೋ ವೈರಸ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದೀಗ ಗೋಪ್ರೇಮಿಗಳು #JusticeforNandini ಎಂದು ಟ್ವಿಟ್ಟರ್ ನಲ್ಲಿ ಅಭಿಯಾನ ಶುರು ಮಾಡಿದ್ದು ದನದ ದವಡೆ ಸ್ಫೋಟಕ್ಕೆ ಕಾರಣವಾದವರ ಮೇಲೆ ಸೂಕ್ತ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಬಿಲಾಸ್ಪುರ್ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಗರ್ಭ ಧರಿಸಿದ ಹಸುವಿನ ಮಾಲೀಕರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೇ 26 ರಂದು ಬಿಲಾಸ್ಪುರ ಜಿಲ್ಲೆಯ ಜಾಂಡುಟ್ಟಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದರೂ ಶನಿವಾರ ಹಸುವಿನ ಮಾಲಕ ಗುರುದಯಾಲ್ ಸಿಂಗ್ ಅವರು ಗಾಯಗೊಂಡ ಗೋವಿನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದಾಗ ಬೆಳಕಿಗೆ ಬಂದಿದೆ
ಹಸುವಿನ ಮಾಲೀಕರ ನೆರೆಹೊರೆಯವರಾದ ನಂದಾ ಲಾಲ್ ಅವರು ಹಸುವಿಗೆ ಪಟಾಕಿ ತುಂಬಿದ ಗೋಧಿ ಹಿಟ್ಟಿನ ಚೆಂಡುಗಳನ್ನು ಆಹಾರಕ್ಕಾಗಿ ಹೊಲದಲ್ಲಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಲಾಸ್ಪುರ ಪೊಲೀಸ್ ಅಧೀಕ್ಷಕರು ಹಸುವಿಗೆ ಸ್ಥಳೀಯ ಭಾಷೆಯ ‘ಆಲು ಬಾಂಬ್’ ಎಂಬ ಸ್ಫೋಟಕ ತಿನ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹದ್ದೇ ಘಟನೆ ನಡೆದಿತ್ತು….!
ಕೇರಳದಲ್ಲಿ ಕಾಡಾನೆ ಸ್ಫೋಟಕ ತಿಂದು ನರಳಿ ಸತ್ತರೆ, ಹಿಮಾಚಲ ಪ್ರದೇಶದಲ್ಲೂ ಅಂತಹದ್ದೇ ಮಾದರಿ ಕಂಡು ದೇಶವೇ ದಂಗಾಗಿ ಹೋಗಿದೆ. ಇಂತಹದ್ದೇ ಘಟನೆ ಫೆಬ್ರವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ದೇರಾಜೆಯ ಬಲ್ಯದ ಸಂಪಡ್ಕ ಎಂಬಲ್ಲಿ ಸ್ಫೋಟಕ ತಿಂದು ಹಸುವಿನ ದವಡೆ ಕಿತ್ತುಹೋಗಿ ಗಂಭೀರ ಗಾಯಗೊಂಡಿತ್ತು. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅದಾದ ಬಳಿಕ ಸಂಘಟನೆಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಬಳಿಕ ಇಲಾಖೆಗಳು ಕಾರ್ಯಪ್ರವೃತ್ತವಾದರೂ ಸೂಕ್ತ ನ್ಯಾಯ ಸಿಗಲಿಲ್ಲ ಎಂಬ ಆರೋಪಗಳು ಕೇಳಿಬಂದಿತ್ತು. ಇದಕ್ಕಾಗಿ ಆರೋಪ-ಪ್ರತ್ಯಾರೋಪಗಳು ನಡೆದಿತ್ತು. ಬಳಿಕ ಪ್ರಕರಣ ತಣ್ಣಗಾಗಿತ್ತು.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?