ರೇಬಿಸ್ ನಿರ್ಮೂಲನೆಗೆ ಕರ್ನಾಟಕದ ಹೊಸ ಪ್ರಯತ್ನ | ವಿಶ್ವವಿದ್ಯಾಲಯದಿಂದ ಬೀದಿ ನಾಯಿಗಳಿಗೆ ಓರಲ್ ರೇಬಿಸ್ ಲಸಿಕೆ ಸಂಶೋಧನೆ

February 4, 2026
9:02 AM

ರೇಬಿಸ್ ರೋಗ ನಿರ್ಮೂಲನೆ ಹಾಗೂ ನಿಯಂತ್ರಣದತ್ತ ಕರ್ನಾಟಕವು ಹೊಸ ಸಂಶೋಧನಾ ಹೆಜ್ಜೆ ಇಟ್ಟಿದ್ದು, ಬೀದಿ ನಾಯಿಗಳಿಗೆ ನೀಡಬಹುದಾದ “ಓರಲ್ ರೇಬಿಸ್ ಲಸಿಕೆ” (Oral Vaccine) ಅಭಿವೃದ್ಧಿಪಡಿಸಲು ಅಧ್ಯಯನ ಆರಂಭಿಸಲಾಗಿದೆ.

ಬೀದರ್‌ನ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಜೊತೆಗೂಡಿ ಈ ಮಹತ್ವದ ಸಂಶೋಧನೆ ನಡೆಸುತ್ತಿದೆ.  ಈ ಲಸಿಕೆಯನ್ನು ಬೀದಿ ನಾಯಿಗಳಿಗೆ ಮಾಂಸ ಅಥವಾ ಮೊಟ್ಟೆ ಮೂಲಕ ಆಹಾರ ರೂಪದಲ್ಲಿ ನೀಡುವ ಯೋಜನೆ ರೂಪಿಸಲಾಗಿದ್ದು, ಇದರಿಂದ ನಾಯಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ರೇಬಿಸ್ ನಿಯಂತ್ರಣಕ್ಕೆ ಮಹತ್ತರ ನೆರವಾಗಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ವೀರಣ್ಣ ತಿಳಿಸಿದ್ದಾರೆ.

ಈ ಸಂಶೋಧನಾ ಯೋಜನೆಗೆ ಹೈದ್ರಾಬಾದ್‌ನ ರಾಷ್ಟ್ರೀಯ ಪ್ರಾಣಿ ಜೈವಿಕ ತಂತ್ರಜ್ಞಾನ ಸಂಸ್ಥೆ, ರಾಷ್ಟ್ರೀಯ ಪಶು ವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಮಾಹಿತಿ ಸಂಸ್ಥೆ, ರಾಷ್ಟ್ರೀಯ ಪ್ರಾಣಿ ಸಂಪನ್ಮೂಲ ಸೌಲಭ್ಯ – ICMR, ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆ ಸಹಕಾರ ನೀಡುತ್ತಿದೆ. ಈ ಓರಲ್ ಲಸಿಕೆ ಅಭಿವೃದ್ಧಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರೀಯ “ಒನ್ ಹೆಲ್ತ್ ಮಿಷನ್” ಅಡಿಯಲ್ಲಿ ₹2.89 ಕೋಟಿ ರೂಪಾಯಿ ಅನುದಾನ ನೀಡಿದೆ. ಬೀದಿ ನಾಯಿಗಳಲ್ಲಿನ ರೇಬಿಸ್ ನಿಯಂತ್ರಣದ ಮೂಲಕ ಮಾನವರಿಗೂ ಸೋಂಕು ಹರಡುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಹೀಗಾಗಿ ಈ ಓರಲ್ ವ್ಯಾಕ್ಸಿನ್ ಸಂಶೋಧನೆ ರೇಬಿಸ್ ನಿರ್ಮೂಲನೆಗೆ ದೊಡ್ಡ ಕೊಡುಗೆಯಾಗಬಹುದು ಎಂದು  ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಸುಬ್ರಾಯ ಚೊಕ್ಕಾಡಿ ಅವರಿಗೆ ‘ಮೋಹನ ಮುರಳಿ ಕವಿಸಮ್ಮಾನ’ ಪ್ರದಾನ
November 21, 2026
8:36 PM
by: ದ ರೂರಲ್ ಮಿರರ್.ಕಾಂ
ಕಲ್ಮಡ್ಕದಲ್ಲೂ ಶುರುವಾಯಿತು ಸ್ವಚ್ಛತಾ ಆಂದೋಲನ – ಯುವಶಕ್ತಿಗೆ ಗ್ರಾಮಸ್ಥರ ಸಾಥ್!
November 21, 2026
8:19 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22.11.2026 | ನವೆಂಬರ್ 23ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ | ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಿಗೆ ಹಿಂಗಾರು ಮಳೆ ಮುನ್ಸೂಚನೆ
November 21, 2026
1:59 PM
by: ಸಾಯಿಶೇಖರ್ ಕರಿಕಳ
Free notebook distribution for Karnataka government school students
ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ನೋಟ್‌ಬುಕ್ – ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ
November 21, 2026
11:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror