ಕನ್ನಡ ಸಾಹಿತ್ಯ ಪರಿಷತ್ತು 2021 ನೇ ಸಾಲಿನ ವಿವಿಧ ದತ್ತಿಗಾಗಿ 49 ವಿಭಾಗಕ್ಕೆ 53 ಕೃತಿಗಳ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾ.12 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ. ಈ ಪ್ರಶಸ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಡಾ.ಚಂದ್ರಶೇಖರ ದಾಮ್ಲೆ, ಡಾ.ದೀಪಾ ಫಡ್ಕೆ, ಡಾ.ಮುರಳಿಮೋಹನ ಚೂಂತಾರು, ಸ್ಮಿತಾ ಅಮೃತ್‌ರಾಜ್, ಡಾ.ಎಚ್ ಜಿ ಶ್ರೀಧರ್ ಸೇರಿದಂತೆ ಹಲವು ಪ್ರಮುಖರು ಸೇರಿದ್ದಾರೆ.
2021 ಜನವರಿಯಿಂದ ಡಿಸೆಂಬರ್ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳನ್ನು ಈ ಸಾಲಿನ ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2000 ಕ್ಕೂ ಹೆಚ್ಚು ಲೇಖಕರು ಹಾಗೂ ಪ್ರಕಾಶಕರು ಕೃತಿಗಳನ್ನು ಕಳುಹಿಸಿದ್ದರು .ಅದರಲ್ಲಿ ಈ ಆಯ್ಕೆ ನಡೆದಿದೆ. ಈ ಬಹುಮಾನಕ್ಕೆ ಆಯ್ಕೆಯಾದವರಲ್ಲಿ ಡಾ.ಮುರಳಿಮೋಹನ ಚೂಂತಾರು ಅವರ ಸಂಗಾತಿ , ಡಾ.ಎಚ್ ಜಿ ಶ್ರೀಧರ್ ಅವರ ಚಪಡ(ಕಾದಂಬರಿ), ಡಾ.ಚಂದ್ರಶೇಖರ ದಾಮ್ಲೆ ಅವರ ನನ್ನ ಮಗಳು ತುಂಟಿ ಅಲ್ಲ, ಡಾ.ದೀಪಾ ಫಡ್ಕೆ ಅವರ ಮುಂದಣ ಹೆಜ್ಜೆ , ಸ್ಮಿತಾ ಅಮೃತ್‌ರಾಜ್ ಅವರ ನೆಲದಾಯ ಪರಿಮಳ, ಯಶಸ್ವಿನಿ ಕದ್ರಿ ಅವರ ಊರು ಹೇಳಿದ ಕಥೆ, ಬಿ ಸತ್ಯವತಿ ಎಸ್ ಭಟ್ ಕೊಳಚಿಪ್ಪು ಅವರ ನವಿಲಗರಿ ಕೃತಿ, ನಿರ್ಮಲ ಸುರತ್ಕಲ್ ಅವರ ನಿತ್ಯಪುಷ್ಪ ಮತ್ತು ಗೂಗಲ್ ಗುರು ಎಂಬ ಕೃತಿಗಳು ಆಯ್ಕೆಯಾಗಿದೆ.ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…