ಕುಮಾರಧಾರಾ ನದಿಯಲ್ಲಿ ಯುವಕ ನಾಪತ್ತೆ | ನಾಲ್ಕು ದಿನದ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ |

August 24, 2022
6:16 PM

ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆಂದು ಹಾರಿದ್ದ ಬೆಂಗಳೂರು ಯುವಕ ಸ್ವಾಮಿ ಅವರು ಶವವಾಗಿ ಪತ್ತೆಯಾಗಿದ್ದಾರೆ. ಸತತವಾಗಿ ನಾಲ್ಕು ದಿನದ ಕಾರ್ಯಚರಣೆ ಬಳಿಕ ಬುಧವಾರ ಸಂಜೆ ಮೃತದೇಹ ಪತ್ತೆಯಾಗಿದೆ.

ಪ್ರವಾಸಿಗರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಬೆಂಗಳೂರು ದೀಪಾಂಜಲಿ ನಗರದ ತಂಡದಲ್ಲಿದ್ದ ಯುವಕ ಸ್ವಾಮಿ ಕುಕ್ಕೆ ಸುಬ್ರಹ್ಮಣ್ಯದಿಂದ ಹಿಂತಿರುಗುವ ವೇಳೆ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆಂದು ನದಿಗೆ ಹಾರಿದ್ದ. ಆ ಬಳಿಕ  ನಾಪತ್ತೆಯಾಗಿದ್ದ. ಸತತ ಕಾರ್ಯಾಚರಣೆ ಬಳಿಕ ಬುಧವಾರ ಸಂಜೆ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಸುಮಾರು 15 ಜನ ನುರಿತ ಈಜುಗಾರರು, ಸಮಾಜ ಸೇವಕ ರವಿಕಕ್ಕೆಪದವು,ಅಗ್ನಿಶಾಮಕ ದಳ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು ಕಂದಾಯ ಅಧಿಕಾರಿಗಳು, ಗ್ರಹರಕ್ಷಕ ದಳ,ಸ್ಥಳೀಯ ಜನನಾಯಕರು ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.

ಸ್ಥಳದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಗ್ರಾ. ಪಂಚಾಯತ್ ಪಿಡಿಒ ಯು. ಡಿ ಶೇಖರ್, ಸುಬ್ರಹ್ಮಣ್ಯ ಗ್ರಾ. ಪಂಚಾಯತ್ ಸದಸ್ಯರು,ಅಗ್ನಿಶಾಮಕದಳದ ಸಿಬಂದಿಗಳು, ಸ್ಥಳೀಯರು ಇದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಘಾತಕಾರಿ ವರದಿ- ಮೇ-ಜೂನ್‌ನಲ್ಲಿ ಭಾರತದ 10 ಮಕ್ಕಳಲ್ಲಿ 7 ಮಂದಿ ಶಾಲೆ ತಪ್ಪಿಸಿದರು..!
July 9, 2026
2:37 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ..! ಜುಲೈ 11 ರಿಂದ ಮಳೆ ಮತ್ತಷ್ಟು ಇಳಿಕೆ, ಬಿಸಿಲಿನ ಅವಧಿ ಹೆಚ್ಚಳ ಸಾಧ್ಯ
July 9, 2026
1:18 PM
by: ಸಾಯಿಶೇಖರ್ ಕರಿಕಳ
ಜುಲೈ ಮಳೆಯಿಂದ ದೇಶಕ್ಕೆ ನೆಮ್ಮದಿ…! ಮಳೆ ಕೊರತೆ 12%ಕ್ಕೆ ಇಳಿಕೆ
July 9, 2026
1:04 PM
by: ದ ರೂರಲ್ ಮಿರರ್.ಕಾಂ
ಇಂಧನಕ್ಕೂ ರೈತನೇ ಆಧಾರ…! ಇಥೆನಾಲ್‌ ಯೋಜನೆಯಿಂದ ರೈತರಿಗೆ ₹1.6 ಲಕ್ಷ ಕೋಟಿ ಹೆಚ್ಚುವರಿ ಆದಾಯ
July 9, 2026
12:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror