ನೀರಿಲ್ಲ, ನೀರಿಲ್ಲ.. ಬೆಂಗಳೂರಿನಲ್ಲಿ(Bengaluru) ನೀರಿಲ್ಲ(No water) ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಮಳೆ ಬರಲು ಇನ್ನು 2-3 ತಿಂಗಳು ಬಾಕಿ ಇದೆ. ಅಲ್ಲಿ ತನಕ ಬೆಂಗಳೂರಿಗೆ ನೀರಿನ ಕೊರತೆ ತೀವ್ರವಾಗಿ(Water crisis) ಕಾಡಲಿದೆ ಎಂದು ಭಾವಿಸಲಾಗಿದೆ. ಈ ಮಧ್ಯೆಯೂ ನೀರಿನ ನಿರ್ವಹಣೆಯಲ್ಲಿ(Water management) ಬೆಂಗಳೂರು ಟಾಪ್ 5 ರಲ್ಲಿ ಸ್ಥಾನ ಪಡೆದಿದೆ. ಬಳಸಿದ ನೀರು ನಿರ್ವಹಣೆಯಲ್ಲಿ ಸೂರತ್ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು (Bengaluru Water Crisis) 2ನೇ ಸ್ಥಾನದಲ್ಲಿದೆ. ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿ, ವಾಟರ್ ಆ್ಯಂಡ್ ಎನ್ವಿರಾನ್‌ಮೆಂಟ್ ನಡೆಸಿದ ಸರ್ವೇ(Survey) ಈ ಅಂಶ ಬೆಳಕಿಗೆ ಬಂದಿದೆ. ದೇಶದ 10 ರಾಜ್ಯಗಳ ಪೈಕಿ 500 ನಗರಗಳನ್ನು ಸರ್ವೇಗೆ ಒಳಪಡಿಸಲಾಗಿತ್ತು.
ಬಳಸಿದ ನೀರು ನಿರ್ವಹಣೆಯಲ್ಲಿ ಸೂರತ್ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಸಂಶೋಧನೆಗಳ ಆಧಾರದಲ್ಲಿ ಸೂರತ್‌ಗೆ 3.32 ಅಂಕಗಳ ಮೂಲಕ ಮೊದಲ ಸ್ಥಾನ ಇದೆ. ಬೆಂಗಳೂರು 5 ಅಂಕಗಳಿಗೆ 3.23 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಬಳಸಿದ ನೀರು ಮರುಬಳಕೆ ವಿಚಾರದಲ್ಲಿ ದೇಶದಲ್ಲೇ ಇದು ಗಮನಾರ್ಹ ಸಾಧನೆಯಾಗಿದೆ. ಬೇರೆ ಯಾವ ನಗರಗಳೂ ಕನಿಷ್ಠ 3 ಅಂಕ ಗಳಿಸಿಲ್ಲ.
ಸಂಸ್ಕರಿಸಿದ ಗೃಹ ತ್ಯಾಜ್ಯವನ್ನು ಮರುಬಳಕೆ ಮಾಡಲು ಸಂಸ್ಕರಿಸಿದ ಬಳಸಿದ ನೀರಿನ ನೀತಿಯನ್ನು ಅಳವಡಿಸಿಕೊಂಡಿರುವ 10 ರಾಜ್ಯಗಳು, ಬಳಸಿದ ನೀರಿನ ನಿರ್ವಹಣೆ ಎಂಬ ವಿಷಯಾಧಾರಿತವಾಗಿ ಅಧ್ಯಯನ ನಡೆಸಲಾಗಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 2021 ರಲ್ಲಿ ಪ್ರಕಟಿಸಿದ ಇತ್ತೀಚಿನ ರಾಷ್ಟ್ರೀಯ ಮಟ್ಟದ ಒಳಚರಂಡಿ ದಾಸ್ತಾನು ದತ್ತಾಂಶವನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗೆ (ತೋಟಗಾರಿಕೆ ಮತ್ತು ಕೈಗಾರಿಕೆಗಳಿಗೆ) ಸಂಸ್ಕರಿಸಿದ ನೀರು ಬಳಸಬಹುದಾಗಿದೆ. ಬೆಂಗಳೂರು ಜಲಮಂಡಳಿಯೂ ನೀರಿನ ಮರುಬಳಕೆಯನ್ನು ಉಲ್ಲೇಖಿಸಿತ್ತು.
Bangalore is ranked in the top 5 in water management. While Surat ranks first in water management, Bengaluru (Bengaluru Water Crisis) ranks second. A survey conducted by the think tank Council on Energy, Water and Environment has come to light. 500 cities out of 10 states of the country were included in the survey.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…