ಪ್ರಚಲಿತ ಪ್ರಬಂಧ | “ಮಾಲಿನ್ಯ ಮಾರಾಟಕ್ಕಿದೆ….”

May 31, 2024
9:05 AM
ಎಲ್ಲೆಲ್ಲಿ ಸಾದ್ಯವೋ ಅಲ್ಲೆಲ್ಲಾ ಪ್ಲಾಸ್ಟಿಕ್ ಬಳಸು ವುದರಿಂದ ಹೊರಬಂದು ಈ ಭೂಮಿಯ ಮೇಲೆ ಬಾಳಲು ಈ ನಿಸರ್ಗ ಒಂದು ಅವಕಾಶವನ್ನು ಮಾಡಿಕೊಟ್ಟದ್ದಕ್ಕೆ ಒಂದು ಕೃತಜ್ಞತೆ ಸಲ್ಲಿಸೋಣ.

ಇದು ದೇಶದ ಅತಿ ದೊಡ್ಡ ಸಮಸ್ಯೆಯಾಗಿ ದೆ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಮಹಾ ನಗರ , ನಗರ , ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರಗಳು ಬಡವಾಣೆಗಳ ಮೂಲಕ ಮತ್ತೆ ಪುಟ್ಟ ಪುಟ್ಟ ಮರಿ ಹಾಕುತ್ತಾ ಪಟ್ಟಣ ನಗರ ಮಹಾನಗರ ವಾಗಿಸುತ್ತಿದೆ ಮನುಷ್ಯರ ಸಂಸಾರದಂತೆ….!!ಎಲ್ಲಾ ನಗರವೂ ಸ್ವಚ್ಛ ಭಾರತದ ಯೋಜನೆಯಡಿಯಲ್ಲಿ ಸ್ವಚ್ಛವಾಗುವತ್ತ ಸಾಗಿದೆ. ಆದರೆ ಈ ನಗರಗಳ ಕಕ್ಕ ನೈರ್ಮಲ್ಯ ಗಳಿಗೆ ಎಲ್ಲಿದೆ ಜಾಗ…?

Advertisement

ಭಾರತದಂತಹ ಪ್ರತಿ ಹಂತದಲ್ಲೂ ಪರ್ಸೆಂಟೇಜ್ ಶಾಪ ಅಂಟಿಕೊಂಡ ಶಾಪ ಗ್ರಸ್ತ ವ್ಯವಸ್ಥೆ ಈ ತ್ಯಾಜ್ಯ ಎಲ್ಲಿಗೆ ವಿಲೇವಾರಿ ಮಾಡುವುದೆಂಬ ಪೆಡಂಭೂತ ದಂರಹ ಪ್ರಶ್ನೆ ಗೆ ಉತ್ತರ ಇಲ್ಲದಂತಾಗಿದೆ. ನಮ್ಮ ಗ್ರಾಮ ನಿರ್ಮಲ ಗ್ರಾಮದ ಅಡಿ ಯಲ್ಲಿ ಎಲ್ಲಾ ಊರಿನಲ್ಲೂ ಘನ ಹಸಿ ತ್ಯಾಜ್ಯ ಸಂಸ್ಕರಣ ಘಟಕಗಳು ನಿರ್ಮಾಣವಾಗಿದ್ದು ಒಂದು ವಾಹನ ಕೂಡ ಊರೂರ ಗ್ರಾಮ ಪಂಚಾಯತಿ ಗೆ ಬಂದಿದೆ. ಅದಕ್ಕೆ ಮಹಿಳಾ ಚಾಲಕಿಯರು , ಮಹಿಳಾ ಸಹಾಯಕಿಯರು ಸೇವೆ ಸಲ್ಲಿಸಲು ಸಿದ್ದವಾಗಿದ್ದಾರೆ‌‌.
ಆದರೆ ಮುಕ್ಕಾಲು ಪಾಲು ಎಲ್ಲೂ ಈ ಘಟಕ ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ…!!ಬಹಳಷ್ಟು ಸಂಸ್ಕರಣ ಘಟಕಗಳು ಒಳಗೆ ಪ್ಲಾಸ್ಟಿಕ್ ಚೀಲ ತುಂಬಿ ಹೌಸ್ ಫುಲ್ ಆಗಿದೆ.

ಹಸಿ ಕಸ ಹೇಗೋ ಕರಗುತ್ತದೆ. ನಂತರದ ರೀಸೈಕಲ್ ಪ್ಲಾಸ್ಟಿಕ್ ಗೆ ಗುಜರಿ ಮಾರುಕಟ್ಟೆ ಇದೆ… ಆದರೆ ಕಡಿಮೆ ಮೈಕ್ರಾನ್ ಪ್ಲಾಸ್ಟಿಕ್ ಕವರ್ ಗಳು (ಹೆಚ್ಚಾಗಿ ಪ್ಯಾಕೇಜಿಂಗ್ ಕವರ್ ಗಳು ಮತ್ತು ಅಗ್ಗದ ಕ್ಯಾರಿ ಬ್ಯಾಗುಗಳು) ಬಳಸಿದ ಮೇಲೆ ಬಳಸಿದ ಮನುಷ್ಯನನ್ನೇ ತಿನ್ನಲು ಸಜ್ಜಾಗಿ ನಿಂತಂತಿದೆ…!!.

ಗ್ರಾಮೀಣ ಪ್ರದೇಶಗಳಲ್ಲಿ ಈ ಕಡಿಮೆ ಮೈಕ್ರಾನ್ ನ ಪ್ಲಾಸ್ಟಿಕ್ ಕವರ್ ಗಳನ್ನು ಕಟ್ಟಿಗೆ ಬಳಸಿ ಅಡಿಗೆ ಮಾಡುವಾಗ , ಬಚ್ಚಲೊಲೆಗೆ ಉರಿಸುವಾಗ ಆಹುತಿಯಾ ಗಿ ಒಂದು ಹಂತದ ಮುಕ್ತಿ (ಬೂದಿಯಲ್ಲಿ ಕೊಂಚಮಟ್ಟಿನ ಪ್ಲಾಸ್ಟಿಕ್ ಕಿಟ್ಟ ಇರುತ್ತದೆ) ಪಡೆಯುತ್ತದೆ.
ಆದರೆ ಈ ಒಲೆಗೆ ಪ್ಲಾಸ್ಟಿಕ್ ಹಾಕಿ ಬೆಂಕಿ ಹಚ್ಚಿದಾಗ ಹೊಗೆ ಅಥವಾ ಜ್ವಾಲೆ ಬರುವಾಗ ಮನುಷ್ಯರು ಹತ್ತಿರ ಇದ್ದಲ್ಲಿ ಅವರ ಆರೋಗ್ಯಕ್ಕೆ ಈ ಪ್ಲಾಸ್ಟಿಕ್ ಹೊಗೆ ತೀವ್ರ ಹಾನಿ ಮಾಡುತ್ತದೆ. ಇದು ಕ್ಯಾನ್ಸರ್ ಕಾರಕ. ಪ್ಲಾಸ್ಟಿಕ್ ಸುಡುವಾಗ ಬಹಳ ಜಾಗೃತೆ ಬೇಕು‌ . ಗೂಡಿನಂತಹ , ಹೊಗೆ ತುಂಬಿಕೊಳ್ಳುವ ಜಾಗದಲ್ಲಿ ಪ್ಲಾಸ್ಟಿಕ್ ಗೆ ಬೆಂಕಿ ಕೊಡಬಾರದು.

Advertisement

ಆದರೆ ಪಟ್ಟಣ ದಲ್ಲಿ ಈ ಅಗ್ಗದ ಕಡಿಮೆ ಮೈಕ್ರಾನ್ ನ ಪ್ಲಾಸ್ಟಿಕ್ ಕವರ್ ಗಳನ್ನು ಒಲೆಗೆ ಹಾಕದೇ ಅಥವಾ ಒಲೆಗೆ ಹಾಕಿ ಸುಡಲು ಅವಕಾಶ ಇಲ್ಲದೇ ಎಲ್ಲೆಂದರೆಲ್ಲಿ ಬಿಸಾಡಿ , ಆ ಪ್ಲಾಸ್ಟಿಕ್ ಮಣ್ಣಡಿಯಾಗಿ, ನೀರಿನ ಮೋರಿ , ಚೆರಂಡಿ, ರಾಜ ಕಾಲುವೆ ಸೇರಿ , ಎಲ್ಲಾ ಪ್ಲಾಸ್ಟಿಕ್ ಕವರ್ ಗಳು ಮಳೆಗಾಲ ಬಂದಾಗ ಒಂದೆಡೆ ಸೇರಿ ಹಳ್ಳಿ ಗಳಲ್ಲಿ ಮಳೆ ಬಂದಾಗ ಹಳ್ಳಗಳಲ್ಲಿ ಮಹಾ ಪೂರ ಬಂದಂತೆ ಪ್ಲಾಸ್ಟಿಕ್ ಪ್ರವಾಹ ಉಂಟಾಗಿ ನೆರೆ ಉಂಟಾಗಿ ಪಟ್ಟಣ ಗಳೇ ಜಲಾವೃತವಾಗುತ್ತದೆ.

Advertisement

ನಂತರ ನಗರ ಸಭೆಗಳು ಇದನ್ನು ತೆಗದು ಅಥವಾ ಬಿಡಿಸಿ ಬಿಟ್ಟಾಗ ಈ ಪ್ಲಾಸ್ಟಿಕ್ ಮಾಲಿನ್ಯ ಹರಿದು ಹೋಗಿ ಸಮೀಪದ ಕೆರೆ ನದಿ ಸೇರಿ ನಂತರ ಸಮುದ್ರ ಸೇರುತ್ತದೆ.ಭಾರತದಲ್ಲಿ ಐವತ್ತು ಕೋಟಿ ಕುಟುಂಬ ಅಥವಾ ಮನೆಗಳಿವೆ. ಪ್ರತಿ ಕುಟುಂಬ ವಾರ್ಷಿಕವಾಗಿ ತಲಾ ಐದು ಕೆಜಿ ಯಂತೂ ಪ್ಲಾಸ್ಟಿಕ್ ಬಳಸಿ ಬಿಸಾಡುತ್ತದೆ. ಅಂದಾಜು‌ ನೂರಿಪ್ಪತ್ತೈದು ಕೋಟಿ ಕೆಜಿ ಪ್ಲಾಸ್ಟಿಕ್ ಬಳಸಿದರೆ ಅದರಲ್ಲಿ ಒಂದು ಹತ್ತು ಪ್ರತಿಶತ ಸರಿಯಾಗಿ ಸಂಸ್ಕರಣೆ ಯಾಗಿ ಸದ್ಗತಿ ದೊರಕಿದರೆ ಉಳಿದ ಸುಮಾರು ನೂರು ಕೋಟಿ ಕೆಜಿ ಪ್ಲಾಸ್ಟಿಕ್ ಮನೆಗಳ ಕಾಂಪೌಂಡ್ ಆಚೆಯಿಂದ ಮೋರಿ ಸೇರಿ , ನದಿ , ಕೆರೆ , ಕೃಷಿ ಭೂಮಿ , ಅಂತರ್ಜಲ, ಸಮುದ್ರ, ಜಲಚರ , ಮನುಷ್ಯ ತಿನ್ನುವ ಪ್ರಾಣಿಗಳು ಕೊನೆಯಲ್ಲಿ ಮನುಷ್ಯನನ್ನೇ ಪ್ಲಾಸ್ಟಿಕ್ ತಿಂದು ಹಾಕುತ್ತದೆ.

ಮನುಷ್ಯ ಆಧುನಿಕ ಅನುಕೂಲತೆಯ ಹೆಸರಿನಲ್ಲಿ ಸೃಷ್ಟಿಸಿಕೊಂಡ ಎಲ್ಲಾ ವಸ್ತುಗಳೂ ಮನುಷ್ಯನನ್ನೇ ತಿಂದು ಹಾಕು ತ್ತಿರುವುದು ಅತ್ಯಂತ ವಿಷಾಧನೀಯ ಸಂಗತಿಯಾಗಿದೆ…‌!! ಸರ್ಕಾರದ ಉದ್ಯಮಿಗಳು ತಮ್ಮ ಉತ್ಪನ್ನ ಗಳನ್ನು ಜನರಿಗೆ ಸೆಳೆಯುವ ಉದ್ದೇಶದಿಂದ ಅನಗತ್ಯ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮಾಡುವುದನ್ನ ನಿಯಂತ್ರಣ ಮಾಡಬೇಕು. ಕಡಿಮೆ ಮೈಕ್ರಾನ್ ನ ಪ್ಲಾಸ್ಟಿಕ್ ಉತ್ಪಾದನೆ ಯನ್ನು ನೂರಕ್ಕೆ ನೂರರಷ್ಟು ನಿಲ್ಲಿಸ ಬೇಕು.

ಆಹಾರೋತ್ಪನ್ನಗಳ ಪ್ಯಾಕಿಂಗ್ ಗೆ ಬಯೋ ಡಿಗ್ರೇಡಬಲ್ ಪ್ಯಾಕೇಜಿಂಗ್ ಬಳಸುವು ದನ್ನ ಕಡ್ಡಾಯ ಮಾಡಲೇ ಬೇಕು.
ಆಹಾರ ಉತ್ಪನ್ನಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಅದರಲ್ಲಿ ಉಳಿದ ಆಹಾರ ತಿನ್ನಲು ಊರ ಪ್ರಾಣಿಗಳು ಕಾಡು ಪ್ರಾಣಿ ಗಳು ತಿಂದು ಸಾವಿಗೀಡುತ್ತಿವೆ.

ಪಟ್ಟಣದ ಹೋಟೆಲ್ ನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಆಹಾರಗಳನ್ನು ಕಟ್ಟಿ ಕೊಡುವುದನ್ನ ನಿಲ್ಲಿಸಲೇಬೇಕು.
ಸರ್ಕಾರ ಬಯೋಡಿಗ್ರೇಡಬಲ್ ಪ್ಯಾಕೇಜಿಂಗ್ ವಸ್ತುಗಳನ್ನು ಪ್ಲಾಸ್ಟಿಕ್ ಗಿಂತ ಕಡಿಮೆ ಅಥವಾ ಉಚಿತವಾಗಿ ಜನರಿಗೆ ಮತ್ತು ಉದ್ಯಮಿಗಳಿಗೆ ನೀಡುತ್ತಾ ಅನಗತ್ಯ ಪ್ಲಾಸ್ಟಿಕ್ ತಯಾರಿಕೆಯ ಮೇಲೆ ಒತ್ತಡ ಹೇರಿ ಅಂತಹ ಪ್ಲಾಸ್ಟಿಕ್ ತಯಾರಿಕೆಯ ಘಟಕಗಳನ್ನು ಮುಚ್ಚಬೇಕು.‌ ಇಂತಹ ಅನಗತ್ಯ ಮತ್ತು ಕಡಿಮೆ ಮೈಕ್ರಾನ್ ಪ್ಲಾಸ್ಟಿಕ್ ತಯಾರಿಕೆಯ ಹಂತದಲ್ಲೇ ನಿಷೇಧಿಸಿದರೆ ತನ್ನಂತಾನೇ ಪ್ಲಾಸ್ಟಿಕ್ ಕಸ ಕಡಿಮೆ ಆಗುತ್ತದೆ. ‌

ಮೊದಲೆಲ್ಲ ಜನರು ಸಿಕ್ಕ ಸಿಕ್ಕಲ್ಲಿ ಬೇಕಾ ಬಿಟ್ಟಿಯಾಗಿ ಪ್ಲಾಸ್ಟಿಕ್ ಬಿಸಾಡುತ್ತಿದ್ದರು. ಇದೀಗ ಜನರು ಆ ಮಟ್ಟಿಗೆ ಬೇಜವಾಬ್ದಾರಿಯಿಂದ ಪ್ಲಾಸ್ಟಿಕ್ ಕಸ ಬಿಸಾಡುತ್ತಿಲ್ಲ ಎಂಬುದು ಚಿಕ್ಕ ಸಮಾಧಾನದ ವಿಚಾರ. ಪ್ಲಾಸ್ಟಿಕ್ ಮೇಲ್ನೋಟಕ್ಕೆ ಶುದ್ದ ಮತ್ತು ಉಪಕಾರಿ ಎನಿಸಿದರೂ ಮನುಷ್ಯ ಅಂತರ್ಜಲ ಮತ್ತು ನಿಸರ್ಗ ಕ್ಕೆ ಅಪಾಯಕಾರಿ ಎಂಬ ವಿಚಾರವನ್ನು ಹೃದಯಕ್ಕೆ ತುಂಬಿಕೊಂಡು ಪ್ರಜ್ಞಾ ಪೂರ್ವಕವಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುತ್ತಾ ಹೋದರೆ ಭೂಮಿ ಯಲ್ಲಿ ಮನುಷ್ಯ ಇನ್ನೊಂದಷ್ಟು ಕಾಲ ಬದುಕಿ ಬಾಳಬಹುದು…

Advertisement

ಈ ಪ್ಲಾಸ್ಟಿಕ್ ನಿಂದ ನಮ್ಮ ದೇಶದ ಬಹುತೇಕ ಎಲ್ಲ ಪಟ್ಟಣ ನಗರ ಮಹಾ ನಗರಗಳ ತ್ಯಾಜ್ಯ ವಿಲೇವಾರಿ ಸಮಸ್ಯೆ ಬೃಹದಾಕಾರವಾಗಿ ಬೆಳೆದು ನಿಂತು ಈ ಪ್ಲಾಸ್ಟಿಕ್ ಬೆರೆತ ಕಸವನ್ನು ಏನು ಮಾಡು ವುದೆಂದು ಅರಿಯದೇ ಕಸ ವಿಲೇವಾರಿ ಘಟಕಗಳಲ್ಲಿ ಪರ್ವತ ದಂತೆ ಪ್ಲಾಸ್ಟಿಕ್ ಕಸ ಎದ್ದು ನಿಂತಿದೆ‌.. ಚಿಕ್ಕ ಊರು ಪಟ್ಟಣ ಗಳಾಗುತ್ತಿದೆ , ಚಿಕ್ಕ ಪಟ್ಟಣ ಗಳು ನಗರ ಗಳಾಗುತ್ತಿವೆ , ನಗರಗಳು ಮಹಾ ನಗರ ವಾಗುತ್ತಿದೆ. ಆದರೆ ಈ ಎಲ್ಲಾ ಪಟ್ಟಣ ನಗರ ಮಹಾ ನಗರದ ಪ್ಲಾಸ್ಟಿಕ್ ತ್ಯಾಜ್ಯ ಗಳ ವಿಲೇವಾರಿ ಮಾತ್ರ ದಿನದಿಂದ ದಿನಕ್ಕೆ ಮೌಂಟ್ ಎವರೆಸ್ಟ್ ಪರ್ವತ ದಷ್ಡು ಎತ್ತರಕ್ಕೆ ಏರುತ್ತಿದೆ….

ಪ್ಲಾಸ್ಟಿಕ್ ತಯಾರಕಾ ,ಪ್ಲಾಸ್ಟಿಕ್ ಪ್ಯಾಕೇಜಿಂಗ್ ಗೆ ಬಳಸಿದವನು , ಆಕರ್ಷಕ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಇದ್ದರೆ ಮಾರಾಟಕ್ಕೆ ಸುಲಭ ಎಂಬ ಭಾವನೆ ಯಿಂದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಗೆ ಒತ್ತಾಯ ಮಾಡುವ ಮಾರುಕಟ್ಟೆ ವ್ಯವಸ್ಥೆ ಮತ್ತು ಇಂತಹ ಆಕರ್ಷಕ ಪ್ಯಾಕೇಜಿಂಗ್ ಮರುಳಾಗಿ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಗೆ ಮತ್ತಷ್ಟು ಪ್ರಚೋದಿಸುವ ಎಲ್ಲಾ ಬಳಕೆ ದಾರರೂ ಈ ಪ್ಲಾಸ್ಟಿಕ್ ಪರ್ವತ ದ ಸೃಷ್ಟಿ ಗೆ ಬಲು ಮುಖ್ಯ ಕಾರಣೀಭೂತರು.

ಪ್ರತಿಯೊಬ್ಬರು ಅನಗತ್ಯ ಮತ್ತು ಕಡಿಮೆ ಮೈಕ್ರಾನ್ ನ ಪ್ಲಾಸ್ಟಿಕ್ ನ್ನ ಬಳಸುವುದನ್ನು ಕಡಿಮೆ ಮಾಡಬೇಕು ಮತ್ತು ಬಳಸಿದ ಪ್ಲಾಸ್ಟಿಕ್ ನ್ನ ಸೂಕ್ತ ವಿಲೇವಾರಿ ಗೆ ಕಳಿಸುವ ಜವಾಬ್ದಾರಿ ಹೊಂದಿದರೆ ಮಾತ್ರ ಮುಂದಿನ ದಿನಗಳಲ್ಲಿ ಈ ಭೂಮಿಯಲ್ಲಿ ಪ್ಲಾಸ್ಟಿಕ್ ಸೃಷ್ಟಿ ಕರ್ತ ಮನುಷ್ಯನಿಗೇ ಜಾಗ ಕೊಡುತ್ತದೆ.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ… ಪ್ಲಾಸ್ಟಿಕ್ ಇಲ್ಲದ ಕಾಲದಲ್ಲೂ ಜನ ಜೀವನ ನೆಮ್ಮದಿಯಿಂದ ಕಳೆದಿತ್ತು ಎಂಬುದನ್ನು ಜ್ಞಾಪಕ ಮಾಡಿಕೊಂಡರೆ ಒಳ್ಳೆಯದು.‌ ನಾವು ಜನ ಸಾಮಾನ್ಯರು ಎಲ್ಲೆಲ್ಲಿ ಸಾದ್ಯವೋ ಅಲ್ಲೆಲ್ಲಾ ಪ್ಲಾಸ್ಟಿಕ್ ಬಳಸು ವುದರಿಂದ ಹೊರಬಂದು ಈ ಭೂಮಿಯ ಮೇಲೆ ಬಾಳಲು ಈ ನಿಸರ್ಗ ಒಂದು ಅವಕಾಶವನ್ನು ಮಾಡಿಕೊಟ್ಟದ್ದಕ್ಕೆ ಒಂದು ಕೃತಜ್ಞತೆ ಸಲ್ಲಿಸೋಣ…

ಬರಹ :
ಪ್ರಬಂಧ ಅಂಬುತೀರ್ಥ

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ
ಸ್ವಾತಂತ್ರ್ಯಕ್ಕಾಗಿ ಮದುವೆ
August 14, 2025
8:43 PM
by: ಡಾ.ಚಂದ್ರಶೇಖರ ದಾಮ್ಲೆ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ

ಪ್ರಮುಖ ಸುದ್ದಿ

MIRROR FOCUS

ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ
ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ

Editorial pick

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ

ವಿಡಿಯೋ

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ಇದು ಬರೀ ಚಿಪ್ಪಿಯಲ್ಲ..!
June 14, 2025
8:17 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ನಾಡಿಗೆ ಬೇಕು ತರಕಾರಿ
April 5, 2025
8:14 AM
by: ದ ರೂರಲ್ ಮಿರರ್.ಕಾಂ
ಪಪ್ಪಾಯಿ ಕೃಷಿ ಕಲಿಸಿದ ಪಾಠ
March 30, 2025
11:29 PM
by: ದ ರೂರಲ್ ಮಿರರ್.ಕಾಂ

ಸುದ್ದಿಗಳು

ಹವಾಮಾನ ವರದಿ | 16-08-2025 | ಮಲೆನಾಡು-ಕರಾವಳಿಯಲ್ಲಿ ಉತ್ತಮ ಮಳೆ | ಆ.20 ರ ನಂತರ ಮಳೆ ಹೇಗೆ..?
August 16, 2025
3:30 PM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಹಲಸಿನ ಹಣ್ಣಿನ ಬಜ್ಜಿ
August 16, 2025
11:33 AM
by: ದಿವ್ಯ ಮಹೇಶ್
ಎತ್ತಿನಹೊಳೆ ಯೋಜನೆಯಡಿ ವಿವಿಧ ಜಿಲ್ಲೆಗಳಿಗೆ ನೀರು ತುಂಬಿಸುವ ಚಿಂತನೆ
August 16, 2025
11:25 AM
by: The Rural Mirror ಸುದ್ದಿಜಾಲ
ದೇಶದ ಉತ್ಪನ್ನಗಳನ್ನು ಬಳಸಲು ರೈತರ ಸಂಕಲ್ಪ
August 16, 2025
11:17 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ
August 15, 2025
2:23 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ
August 15, 2025
6:54 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ

ವಿಶೇಷ ವರದಿ

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಈ ಬಾರಿಯ ಮಳೆಯಿಂದ ಅಡಿಕೆಗೆ ಕೊಳೆರೋಗ | ಮರ ಏರಿ ಔಷಧಿ ಸಿಂಪಡಿಸಿದ ಮಹಿಳೆ |
August 6, 2025
7:16 AM
by: ವಿಶೇಷ ಪ್ರತಿನಿಧಿ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ

OPINION

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group