ರಾಜ್ಯದಲ್ಲಿ ಸಿಡಿಲು ಮಿಂಚಿನ ಆರ್ಭಟ – 14 ವರ್ಷಗಳಲ್ಲಿ 1,026 ಸಾವು | ‘ದಾಮಿನಿ’ ಆ್ಯಪ್ ಬಳಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ

April 19, 2026
11:26 PM
ರಾಜ್ಯದಲ್ಲಿ ಸಿಡಿಲು ಬಡಿತದಿಂದ 1,026 ಸಾವುಗಳು ದಾಖಲಾಗಿದೆ. ‘ದಾಮಿನಿ’ ಆ್ಯಪ್ ಬಳಸಿ ಮುನ್ನೆಚ್ಚರಿಕೆ ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿಡಿಲು ಮತ್ತು ಮಿಂಚಿನ ಆರ್ಭಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಕಳೆದ 14 ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವುದು ಆತಂಕ ಮೂಡಿಸಿದೆ.

ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಆಯುಕ್ತ ಎಸ್. ಹೊನ್ನಾಂಬ ಅವರು ನೀಡಿದ ಮಾಹಿತಿಯಂತೆ, 2011ರಿಂದ 2025ರ ಜುಲೈವರೆಗೆ ಒಟ್ಟು 1,026 ಮಂದಿ ಸಿಡಿಲು ಬಡಿತಕ್ಕೆ ಬಲಿಯಾಗಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವತಿಯಿಂದ ಆಯೋಜಿಸಲಾದ ಆನ್‌ಲೈನ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಿಡಿಲಿನಿಂದ ಸಂಭವಿಸುವ ಮರಣ ಪ್ರಮಾಣವನ್ನು ‘ಶೂನ್ಯ’ಕ್ಕೆ ಇಳಿಸುವುದು ಸರ್ಕಾರದ ಗುರಿಯಾಗಿದೆ. ಆದರೆ ಸಾರ್ವಜನಿಕರ ಅಸಡ್ಡೆ ಮತ್ತು ಮುನ್ನೆಚ್ಚರಿಕೆಯ ಕೊರತೆಯಿಂದ ದುರ್ಘಟನೆಗಳು ನಡೆಯುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾವಾರು ಅಂಕಿಅಂಶಗಳನ್ನು ನೀಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ 86, ಕಲಬುರಗಿ 80, ವಿಜಯಪುರ 79, ಬೀದರ್ 75 ಹಾಗೂ ಹಾಸನ ಜಿಲ್ಲೆಯಲ್ಲಿ 56 ಸಾವುಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.

ಸಿಡಿಲು ಬಡಿಯುವ 30 ರಿಂದ 45 ನಿಮಿಷಗಳ ಮುಂಚೆಯೇ ಎಚ್ಚರಿಕೆ ನೀಡುವ Damini App ಅನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಅಲ್ಲದೆ ಮಳೆಯ ಸಂದರ್ಭದಲ್ಲಿ ತೆರೆಯಾದ ಜಾಗಗಳಲ್ಲಿ ನಿಲ್ಲುವುದು, ಮರಗಳ ಕೆಳಗೆ ಆಶ್ರಯ ಪಡೆಯುವುದು, ಲೋಹ ವಸ್ತುಗಳನ್ನು ಹಿಡಿದುಕೊಳ್ಳುವುದು ಮುಂತಾದವುಗಳನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Lightning strikes in Karnataka have caused 1,026 deaths between 2011 and July 2025, with Belagavi reporting the highest fatalities. Authorities urge people to use the Damini mobile app for early warnings and follow safety measures to reduce deaths to zero.

ರಕ್ಷಾ ಸ್ವರ್ಣಪ್ರಾಶನ | ಮಕ್ಕಳ ರೋಗ ನಿರೋಧಕ ಶಕ್ತಿಗೆ ವಿಶೇಷ ಔಷಧಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 13-05-2026| ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಗುಡುಗು ಸಹಿತ ಮಳೆ| ಮೇ 20-25ರೊಳಗೆ ಮುಂಗಾರು ಪ್ರವೇಶ ಸಾಧ್ಯತೆ!
May 13, 2026
12:40 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 12-05-2026 | ಮೇ 20ರ ಸುಮಾರಿಗೆ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ..! |
May 12, 2026
1:01 PM
by: ಸಾಯಿಶೇಖರ್ ಕರಿಕಳ
ರೋಸ್ಟೆಡ್‌ ಅಡಿಕೆ- ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | “ರೋಸ್ಟೆಡ್‌ ಅಡಿಕೆ” ವರ್ಗೀಕರಣಕ್ಕೆ ಮುದ್ರೆ, ಜಪ್ತಿ ಸರಕುಗಳಿಗೆ ಮಾರ್ಗಸೂಚಿ
May 12, 2026
7:37 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 11-05-2026 | ವಾಯುಭಾರ ಕುಸಿತದ ಲಕ್ಷಣ…? – ಸದ್ಯ ಗುಡುಗು ಮಳೆ ಮುಂದುವರಿಕೆ – ಕರಾವಳಿ-ಮಲೆನಾಡಿನಲ್ಲಿ ಸಂಜೆ ಮಳೆಯ ಅಬ್ಬರ ಸಾಧ್ಯ
May 11, 2026
2:25 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror