ಕರ್ನಾಟಕದ ಕರಾವಳಿ ಭಾಗದ ಆರ್ಥಿಕತೆಯ ನಾಡಿ ಎಂದೇ ಪರಿಗಣಿಸಲ್ಪಡುವ ಮಂಗಳೂರು ಅಡಿಕೆ ಮಾರುಕಟ್ಟೆ ಕಳೆದ ಐದು ವರ್ಷಗಳಲ್ಲಿ ಗಮನಾರ್ಹ ಏರುಪೇರುಗಳನ್ನು ಕಂಡಿದೆ. 2020 ರಿಂದ 2025 ರವರೆಗಿನ ಜನವರಿ–ಮಾರ್ಚ್ ಅವಧಿಯ ದರಗಳ ವಿಶ್ಲೇಷಣೆ ಮಾರುಕಟ್ಟೆಯ ಚಲನೆಗಳು ಕೇವಲ ಆವಕ–ಬೇಡಿಕೆಗಳಿಗೆ ಸೀಮಿತವಲ್ಲದೆ, ಜಾಗತಿಕ ಹಾಗೂ ದೇಶೀಯ ಅಂಶಗಳ ಸಂಕೀರ್ಣ ಪರಿಣಾಮವನ್ನೂ ತೋರಿಸುತ್ತದೆ.
2020 – ಸ್ಥಿರತೆಯ ಆರಂಭಿಕ ಹಂತ : 2020ರಲ್ಲಿ ಹೊಸ ಅಡಿಕೆ ದರಗಳು ₹253–₹267 ನಡುವೆಯೇ ಇದ್ದರೆ, ಹಳೆಯ ಅಡಿಕೆ ₹300–₹320 ಮಟ್ಟದಲ್ಲಿ ಇತ್ತು. ಕೋವಿಡ್ ಪೂರ್ವ ಹಾಗೂ ಆರಂಭಿಕ ಅವಧಿಯಲ್ಲಿ ಮಾರುಕಟ್ಟೆ ಸಮತೋಲನದಲ್ಲಿದ್ದು, ದೊಡ್ಡ ಮಟ್ಟದ ಅಸ್ಥಿರತೆ ಕಾಣಿಸಲಿಲ್ಲ.
2021 – ಏರಿಕೆಯ ಶಿಖರ : 2021 ಜನವರಿಯಲ್ಲಿ ಹೊಸ ಅಡಿಕೆ ₹410 ಮತ್ತು ಹಳೆಯದು ₹430 ತಲುಪಿದ್ದು, ಮಾರುಕಟ್ಟೆ ಮಹತ್ವದ ಏರಿಕೆಯ ಹಂತ ಕಂಡಿತು. ಆದರೆ ಫೆಬ್ರವರಿ–ಮಾರ್ಚ್ ವೇಳೆಗೆ ಹೊಸ ಅಡಿಕೆ ₹360–₹370 ಮಟ್ಟಕ್ಕೆ ಇಳಿದರೆ, ಹಳೆಯ ಅಡಿಕೆ ₹410–₹420 ನಡುವೆ ಸರಿದಿದೆ. ಇದು ಮಾರುಕಟ್ಟೆಯ ತಕ್ಷಣದ correction ಹಂತವನ್ನು ಸೂಚಿಸುತ್ತದೆ.
2022 – ಅತಿ ಹೆಚ್ಚು ಅಸ್ಥಿರತೆ : 2022 ರಲ್ಲಿ ಮಾರುಕಟ್ಟೆ ಅತ್ಯಂತ ಸಂವೇದನಾಶೀಲವಾಗಿ ವರ್ತಿಸಿತು. ಜನವರಿಯಲ್ಲಿ ಹಳೆಯ ಅಡಿಕೆ ₹540 ಎಂಬ ಗರಿಷ್ಠ ಮಟ್ಟ ತಲುಪಿದರೆ, ಫೆಬ್ರವರಿಯಲ್ಲಿ ಅದು ₹510ಕ್ಕೆ ಕುಸಿತ ಕಂಡಿತು. ಮಾರ್ಚ್‌ನಲ್ಲಿ ಮತ್ತೆ ₹525ಕ್ಕೆ ಜಿಗಿತ ಕಂಡಿದ್ದು, ಈ ವರ್ಷ ಅಡಿಕೆ ಧಾರಣೆ ಅಸ್ಥಿರತೆಯಾಗಿ ಉಳಿಸಯಿತು. ಹೊಸ ಅಡಿಕೆ ದರಗಳು ₹437–₹445 ನಡುವೆ ಇದ್ದರೂ, ಹಳೆಯ ಅಡಿಕೆಯ ಏರುಪೇರುಗಳು ಮಾರುಕಟ್ಟೆಯ ಅಪಾಯ ಮಟ್ಟವನ್ನು ತೋರಿಸುತ್ತವೆ.
2023 – ಸಮತೋಲನದ ಹಂತ : ಹಿಂದಿನ ವರ್ಷದ ತೀವ್ರ ಅಸ್ಥಿರತೆಯ ನಂತರ 2023ರಲ್ಲಿ ಮಾರುಕಟ್ಟೆ ಸ್ಥಿರ ಹಾದಿ ಹಿಡಿದಿದೆ. ಹೊಸ ಅಡಿಕೆ ₹370–₹378 ಹಾಗೂ ಹಳೆಯ ಅಡಿಕೆ ₹453–₹480 ನಡುವೆ ಇದ್ದು, ಮಾರುಕಟ್ಟೆ ಸಮತೋಲನ ಸ್ಥಿತಿಗೆ ಬಂದಿರುವುದು ಗೋಚರಿಸುತ್ತದೆ.
2024 – ಮೃದುವಾದ ಕುಸಿತ : 2024 ರಲ್ಲಿ ಹೊಸ ಅಡಿಕೆ ₹347–₹370 ನಡುವೆ ಇಳಿಕೆಯ ಹಾದಿ ಹಿಡಿದರೆ, ಹಳೆಯ ಅಡಿಕೆ ₹398–₹424 ಮಟ್ಟಕ್ಕೆ ಕುಸಿತ ಕಂಡಿತು.
ಇದು ಬೇಡಿಕೆಯ ಕುಂದಿಕೆ ಅಥವಾ ಆವಕ ಹೆಚ್ಚಳದ ಸೂಚಕವಾಗಿರಬಹುದು.
2025 – ಪುನರುಜ್ಜೀವನದ ಸಂಕೇತ : 2025 ರಲ್ಲಿ ಮತ್ತೆ ಚೇತರಿಕೆಯ ಲಕ್ಷಣಗಳು ಗೋಚರಿಸುತ್ತವೆ. ಮಾರ್ಚ್‌ನಲ್ಲಿ ಹೊಸ ಅಡಿಕೆ ₹408 ಮತ್ತು ಹಳೆಯ ಅಡಿಕೆ ₹475 ತಲುಪಿದ್ದು, ಮಾರುಕಟ್ಟೆ ಪುನಃ ಏರಿಕೆಯ ಹಾದಿಗೆ ಮರಳುತ್ತಿರುವ ಸೂಚನೆ ನೀಡಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಅಡಿಕೆ ಮಾರುಕಟ್ಟೆಯ ಪ್ರಮುಖ ಟ್ರೆಂಡ್‌ಗಳು:
ಕಾರಣ ಏನು..? : ಅಡಿಕೆ ಮಾರುಕಟ್ಟೆಯಲ್ಲಿನ ಈ ಟ್ರೆಂಡ್‌ಗಳಿಗೆ ಪ್ರಮುಖ ಕಾರಣವೇನು ಎಂದು ವಿಶ್ಲೇಷಿಸಿದಾಗ, ಹವಾಮಾನ ಬದಲಾವಣೆ, ಉತ್ಪಾದನೆ ಹಾಗೂ ಸಂಗ್ರಹಣೆಯ ವ್ಯತ್ಯಾಸ, ಪಾನ್ ಮಾರುಕಟ್ಟೆ, ರಫ್ತು ಹಾಗೂ ಸ್ಥಳೀಯ ಬಳಕೆಯಲ್ಲಿನ ವ್ಯತ್ಯಾಸ, ಆಮದು ನಿಯಂತ್ರಣಗಳು ಮತ್ತು ತೆರಿಗೆ ವ್ಯವಸ್ಥೆಗಳ ಪರಿಣಾಮ ಹಾಗೂ ವ್ಯಾಪಾರಿಗಳ ನಿರೀಕ್ಷೆಗಳು ದರಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ ಹಾಗೂ ಅನೇಕ ಸಂದರ್ಭ ಅಡಿಕೆ ಮಾರುಕಟ್ಟೆಯ ಊಹಾಪೋಹಗಳೇ ಕಾರಣವಾಗಿದೆ.
ಹೀಗಾಗಿ 2020 ರಿಂದ 2025 ರವರೆಗಿನ ಅಡಿಕೆ ಧಾರಣೆಯ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಸ್ಥಿರತೆ- ಏರಿಕೆ – ಅಸ್ಥಿರತೆ – ಸಮತೋಲನ – ಕುಸಿತ – ಪುನರುಜ್ಜೀವನ ಎಂಬ ಹಂತಗಳನ್ನು ಮಾರುಕಟ್ಟೆ ಅನುಭವಿಸಿದೆ. 2025ರ ಮಾರ್ಚ್ ದರಗಳು ಮುಂದಿನ ತಿಂಗಳಲ್ಲಿ ಮತ್ತಷ್ಟು ಏರಿಕೆಯ ಸಾಧ್ಯತೆಯನ್ನು ಸೂಚಿಸುತ್ತಿದ್ದು, ಬೆಳೆಗಾರರು ಮತ್ತು ವ್ಯಾಪಾರಿಗಳು ಮಾರುಕಟ್ಟೆಯ ಚಲನೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ದೇಶದ ವಿವಿದೆಡೆ ಮಾರ್ಚ್ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ವಿಶೇಷವಾಗಿ ರಾಜ್ಕೋಟ್‌ನಲ್ಲಿ ಅಸಾಮಾನ್ಯ ಹವಾಮಾನದಿಂದ…
ಹೋರ್ಮುಜ್ ಜಲಸಂಧಿ ಸಂಕಷ್ಟದಿಂದ ಭಾರತಕ್ಕೆ ಗೊಬ್ಬರ ಮತ್ತು ಇಂಧನ ಪೂರೈಕೆ ಮೇಲೆ ಒತ್ತಡ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮಧ್ಯಾಹ್ನ ನಂತರ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಒಳನಾಡಿನ…
ಪುತ್ತೂರಿನ DCR ಸಂಸ್ಥೆ ಗೇರುಹಣ್ಣು ಮೌಲ್ಯವರ್ಧನೆ ಕುರಿತು ಉಚಿತ CA-VA ತರಬೇತಿ ನೀಡುತ್ತಿದೆ.…
ಹವಾಮಾನ ಬದಲಾವಣೆಯಿಂದ ಉಷ್ಣತೆ ಏರಿಕೆ ಕೃಷಿ ಉತ್ಪಾದನೆಗೆ ಗಂಭೀರ ಸವಾಲಾಗಿ ಪರಿಣಮಿಸಿದೆ. ರಬಿ…
ಪೀಕ್ ಹಾರ್ವೆಸ್ಟ್ ನಿರೀಕ್ಷೆಯಿಂದ ಏಷ್ಯಾದಲ್ಲಿ ರಬ್ಬರ್ ಬೆಲೆ ಇಳಿಕೆ. ವಾಹನ ಉದ್ಯಮ ಬೇಡಿಕೆ…