ನಮ್ಮ ದೇಹದಲ್ಲಿ ಇರುವ ಗ್ರಂಥಿಗಳು ಮತ್ತು ಅವು ಸ್ರವಿಸುವ ಹಾರ್ಮೋನುಗಳು ಪಿಟ್ಯುಟರಿ ಗ್ರಂಥಿಯ ನಿಯಮಕ್ಕೆ ಒಳಪಟ್ಟಿರುತ್ತವೆ. ಈ ಹಾರ್ಮೋನುಗಳು ಹೆಚ್ಚಿನ ಪ್ರಮಾಣದಲ್ಲಿದ್ದಾಗ, ಪಿಟ್ಯುಟರಿ ಗ್ರಂಥಿಯು ನಿರ್ದಿಷ್ಟ ಗ್ರಂಥಿಗೆ ಹಾರ್ಮೋನಿನ ಸ್ರವಿಕೆಯನ್ನು ನಿಲ್ಲಿಸುವಂತೆ ತಿಳಿಸುತ್ತದೆ. ಅದೇ ಹಾರ್ಮೋನಿನ ಪ್ರಮಾಣ ರಕ್ತದಲ್ಲಿ ಕಡಿಮೆ ಇದ್ದಾಗ ಹಾರ್ಮೋನಿನ ಸ್ರವಿಕೆಯನ್ನು ಮತ್ತೆ ಪ್ರಾರಂಭಿಸುವಂತೆ ತಿಳಿಸುತ್ತದೆ. ಇದಕ್ಕೆ negative feedback mechanism ಎನ್ನುತ್ತಾರೆ.
ಹೈಪೋಥೈರಾಯಿಡ್ ಸಮಸ್ಯೆ ಇರುವವರಲ್ಲಿ ಥೈರಾಯಿಡ್ ಗ್ರಂಥಿಯ ಹಾರ್ಮೋನುಗಳು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿರುತ್ತವೆ. ಅದನ್ನು ಸರಿದೂಗಿಸಲು ವೈದ್ಯರು ಅವೇ ಹಾರ್ಮೋನಿನ ಮಾತ್ರೆಗಳನ್ನು ಕೊಡುತ್ತಾರೆ. ಈ ಮಾತ್ರೆಗಳನ್ನು ಸೇವಿಸಿದಾಗ ಥೈರಾಕ್ಸಿನ್ ಹಾರ್ಮೋನಿನ ಪ್ರಮಾಣವು ದೇಹದಲ್ಲಿ ಹೆಚ್ಚಾಗಿ ಸಮಸ್ಯೆ ಪರಿಹಾರವಾಗುತ್ತದೆ. ಇಲ್ಲ! ಹೊಸ ಸಮಸ್ಯೆ ಪ್ರಾರಂಭವಾಗುತ್ತದೆ.
ದೇಹದಲ್ಲಿ ಥೈರಾಕ್ಸಿನ್ ಹಾರ್ಮೋನಿನ ಪ್ರಮಾಣವು ಕೃತಕ ರೀತಿ ಹೆಚ್ಚಾದಾಗ ಪಿಟ್ಯುಟರಿ ಗ್ರಂಥಿಯು ಅದನ್ನು ಗ್ರಹಿಸಿ, ಥೈರಾಯಿಡ್ ಗ್ರಂಥಿಗೆ ಈ ಹಾರ್ಮೋನನ್ನು ಸ್ರವಿಸದಿರುವಂತೆ ಸೂಚಿಸುತ್ತದೆ. ಮರುದಿನ ಮತ್ತೆ ಮಾತ್ರೆ ತೆಗೆದುಕೊಂಡಾಗ ಮತ್ತೆ ಪಿಟ್ಯುಟರಿ ಗ್ರಂಥಿಯು ಈ ಹಾರ್ಮೋನನ್ನು ಸ್ರವಿಸದಿರುವಂತೆ ಸೂಚಿಸುತ್ತದೆ. ಅಂದರೆ ಅಲ್ಪಸ್ವಲ್ಪ ಕೆಲಸ ಮಾಡುತ್ತಿದ್ದ ಥೈರಾಯ್ಡ್ ಗ್ರಂಥಿಯು ಈಗ ತನ್ನ ಕೆಲಸ ಸಂಪೂರ್ಣ ನಿಲ್ಲಿಸಿ ಬಿಡುತ್ತದೆ. ಹಲವಾರು ವರ್ಷಗಳ ಕಾಲ ಮಾತ್ರೆಗಳನ್ನೇ ತೆಗೆದುಕೊಂಡಾಗ, ಪಿಟ್ಯುಟರಿ ಗ್ರಂಥಿಯು ಥೈರಾಯ್ಡ್ ಗ್ರಂಥಿಗೆ ಹಾರ್ಮೋನಿನ ಉತ್ಪಾದನೆಯನ್ನು ಪ್ರಾರಂಭಿಸುವಂತೆ ತಿಳಿಸುವುದನ್ನೇ…. ಮರೆತುಬಿಡುತ್ತದೆ. ಥೈರಾಯ್ಡ್ ಗ್ರಂಥಿ ಪಿಟ್ಯುಟರಿಯ ಆದೇಶವಿಲ್ಲದೆ ಥೈರಾಕ್ಸಿನ್ ಹಾರ್ಮೋನನ್ನು ಉತ್ಪಾದಿಸುವುದಿಲ್ಲ. ಹೀಗೆ ಹಲವಾರು ವರ್ಷಗಳ ಕಾಲ ಈ ಹಾರ್ಮೋನಿನ ಮಾತ್ರೆ ತೆಗೆದುಕೊಂಡವರು, ತಮ್ಮ ಥೈರಾಯ್ಡ್ ಗ್ರಂಥಿಯ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಿಕೊಂಡಿರುತ್ತಾರೆ. ಅಂದರೆ ಅದು ಹೆಚ್ಚೂ ಕಡಿಮೆ ಸತ್ತು ಹೋಗಿರುತ್ತದೆ.
ಹೀಗಾಗಿ ಅವರು ಜೀವನದುದ್ದಕ್ಕೂ ಮಾತ್ರೆಗಳನ್ನೇ ಅವಲಂಬಿಸುವ ಪರಿಸ್ಥಿತಿಗೆ ಸಿಲುಕಿ ಕೊಳ್ಳುತ್ತಾರೆ. ಈ ಮಾತ್ರೆಗಳ ಪ್ರಮಾಣವನ್ನು ಕೂಡ ಕ್ರಮ ಕ್ರಮೇಣ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಅವುಗಳ ಅಡ್ಡ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ.
ಇದು ವೈದ್ಯರಿಗೆ ತಿಳಿದಿಲ್ಲವೇ? ಖಂಡಿತವಾಗಿಯೂ ತಿಳಿದಿದೆ. ಆದರೆ ನೈಸರ್ಗಿಕ ವಿಧಾನಗಳು ಅವರಿಗೆ ಗೊತ್ತಿಲ್ಲ! ಹೀಗಾಗಿ ಮಾತ್ರೆಗಳನ್ನೇ ಅವರು ಪುರಸ್ಕರಿಸುತ್ತಾರೆ. ಮಾತ್ರೆಗಳು ಹೈಪೋಥೈರಾಯ್ಡ್ ಸಮಸ್ಯೆಗೆ ಪರಿಹಾರವಲ್ಲ. ನೈಸರ್ಗಿಕ ವಿಧಾನಗಳಿಂದ ಥೈರಾಯ್ಡ್ ಗ್ರಂಥಿಯನ್ನು ಮತ್ತೆ ಉತ್ತೇಜಿಸಿ, ಮಾಮೂಲಿಯಾಗಿ ಅದು ತನ್ನ ಹಾರ್ಮೋನುಗಳನ್ನು ಸ್ರವಿಸುವಂತೆ ಮಾಡುವುದು ಅತ್ಯುತ್ತಮ. ನಿಮ್ಮ ಥೈರಾಯಿಡ್ ಗ್ರಂಥಿಯನ್ನು ರಕ್ಷಿಸಿಕೊಳ್ಳಿ. ಖಂಡಿತವಾಗಿಯೂ ನೀವು ಮಾತ್ರೆಗಳನ್ನು ಬಿಟ್ಟುಬಿಡಬಹುದು. ಹಲವಾರು ಜನರಿಗೆ ಈ ವಿಧಾನಗಳು ಅನುಕೂಲವಾದ ಉದಾಹರಣೆಗಳು ನಮ್ಮಲ್ಲಿವೆ. ನಿಮ್ಮ ಥೈರಾಯಿಡ್ ಗ್ರಂಥಿ ಹಾಳಾಗಲು ನೀವು ಬಳಸುತ್ತಿರುವ ಟೂತ್ ಪೇಸ್ಟ್ ಮತ್ತು ಬ್ರಷ್ ಕಾರಣ. ನಾಳೆಯಿಂದಲೇ ಈ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ. ಹಲ್ಲು ಪುಡಿ ಬಳಸಿ.
ಡಾ. ಶ್ರೀಶೈಲ ಬದಾಮಿ, ಧಾರವಾಡ