ಗಾಡ್ಗೀಳ್ ವರದಿ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯ ಬಿತ್ತರ | ಪಶ್ಚಿಮಘಟ್ಟದ ಉಳಿವಿಗಾಗಿ ಈಗಲೂ ವರದಿ ಜಾರಿಗೊಳಿಸಬಹುದು – ಮಾಧವ್ ಗಾಡ್ಗೀಳ್ 

August 12, 2024
11:54 AM

ಪಶ್ಚಿಮಘಟ್ಟ(western Ghat) ಸಂರಕ್ಷಣೆಗೆ(Save) ಸಂಬಂಧಿಸಿದಂತೆ  ಗಾಡ್ಗೀಳ್ ವರದಿ(Gadgil Report) ಜಾರಿ ಮಾಡಿದ್ದೆವು. ಆದರೆ ಅದನ್ನು ಸರಿಯಾಗಿ ಅಧ್ಯಯನ(study) ಮಾಡದೇ ತಪ್ಪು ಅಭಿಪ್ರಾಯಗಳನ್ನು ಜನರಲ್ಲಿ ಭಿತ್ತಿದ್ದರಿಂದ ವರಿ ಜಾರಿಗೊಳಿಸುವುದು ಹಿನ್ನಡೆಯಾಗಿದೆ. ಕಾಲ ಮಿಂಚಿಲ್ಲ. ಇನ್ನು ಸಮಯ ಇದೆ. ಈಗಲೂ ಮನಸು ಮಾಡಿದರೆ ಈ ವರದಿಯನ್ನು ಜಾರಿಮಾಡಬಹದು. ಈಗ ಜಾರಿ ಮಾಡಿದರು ಪಶ್ಚಿಮಘಟ್ಟದ ಪರಿಸ(Environment)ರ ಮತ್ತು ಜನಜೀವನಕ್ಕೆ ರಕ್ಷಣೆ ಸಿಗಲಿದೆ ಎಂದು ಪರಿಸರ ತಜ್ಞ ಮಾಧವ್ ಗಾಡ್ಗೀಳ್  ಸೂಚನೆ ನೀಡಿದರು.

Advertisement

ಬೆಂಗಳೂರಿನಲ್ಲಿ ‘ಪರಿಸರಕ್ಕಾಗಿ ನಾವು’ ಸಂಘಟನೆ ‘ಗಾಡೀಳ್ ವರದಿ ಜಾರಿ ಮಾಡಲು ಇನ್ನೂ ಎಷ್ಟು ಬಲಿ ಬೇಕು?’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಏರ್ಅಪಡಿಸಿದ್ದರು. ಅಲ್ಲಿ ಮಾತನಾಡಿದ ಅವರು ಪಶ್ಚಿಮಘಟ್ಟದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಬೇಕೆಂದು ವರದಿಯಲ್ಲಿ ಹೇಳಿಲ್ಲ.  ನಾವು ವರದಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳನ್ನು ಸಾಮಾನ್ಯ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಎಂದು 3 ವಲಯಗಳಾನ್ನಾಗಿ ಗುರುತಿಸಿದ್ದೆವು. ಸಾಮಾನ್ಯ ವಲಯದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡುವ ಬಗ್ಗೆ ವರದಿಯಲ್ಲಿ ನಿರ್ಬಂಧವನ್ನು ಹೇಳಿರಲಿಲ್ಲ. ಕೇವಲ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ವಲಯದಲ್ಲಿ ಮಾತ್ರ ಅಭಿವೃದ್ಧಿ ಚಟುವಟಿಕೆಗಳನ್ನು ನಿಲ್ಲಿಸಿ ಎಂದು ಮಾಹಿತಿ ನೀಡಲಾಗಿತ್ತು. ಆದರೆ, ಆ ವರದಿಯನ್ನು ಸರಿಯಾಗಿ ಓದದೇ ಕೇವಲ ಊಹಾಪೋಹ ಮತ್ತು ತಪ್ಪು ವರದಿಗಳನ್ನು ಹರಡಿ ಅದನ್ನು ಮೂಲೆಗೆ ತಳ್ಳಲಾಯಿತು. ಜನರಲ್ಲಿ ಬೇಡದ ವಿಚಾರಗಳನ್ನು ತುಂಬಿ ಭಯ ಹುಟ್ಟಿಸಲಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆ ಕೈಬಿಡಿ: ಸಂವಾದದಲ್ಲಿ ಪರಿಸರ ವಿಜ್ಞಾನಿ ಟಿ ವಿ ರಾಮಚಂದ್ರ ಅವರು ಮಾತನಾಡಿ, ಬೆಂಗಳೂರು ನಗರಕ್ಕೆ ನೀರು ತರಲು ಐದು ಸಾವಿರ ಹೆಕ್ಟೇರ್ ಕಾಡು ನಾಶ ಮಾಡಿ ಮೇಕೆದಾಟು ಅಣೆಕಟ್ಟು ಕಟ್ಟುವುದು ಅನಾಹುತಕಾರಿ. ಇದು 100 ಟಿಎಂಸಿ ನೀರು ಇಂಗಿಸುವ ಕಾಡು ಮುಳುಗಿಸಿ 65 ಟಿಎಂಸಿ ನೀರು ತರುವ ಮೂರ್ಖತನ ಎಂದು ಹೇಳಿದರು. ಬೆಂಗಳೂರಿಗೆ ವರ್ಷಕ್ಕೆ 18 ಟಿಎಂಸಿ ಅಡಿ ನೀರು ಬೇಕಿದೆ. ಬೆಂಗಳೂರಿನಲ್ಲಿ ವಾರ್ಷಿಕ ಬೀಳುವ ಮಳೆ ನೀರು ಸಂಗ್ರಹದ ಮೂಲಕವೇ 15 ಟಿಎಂಸಿ ನೀರು ಪಡೆಯಬಹುದು. ಮತ್ತು ಅದೇ ನೀರನ್ನು ಮರು ಬಳಕೆ ಮಾಡುವ ಮೂಲಕ ಇಡೀ ಬೆಂಗಳೂರಿನ ನೀರಿನ ಅಗತ್ಯವನ್ನೇ ಪೂರೈಕೆ ಮಾಡಬಹುದು. ಅದಕ್ಕಾಗಿ ಪರಿಸರಕ್ಕೆ ತೀರಾ ಮಾರಕವಾಗಿ ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತಿರುವುದು ಅನಾಹುತಕಾರಿ ಎಂದು ಅವರು ಅಭಿಪ್ರಾಯಪಟ್ಟರು.

ಸಂವಾದ ಸಭೆಯಲ್ಲಿ ಮಂಡಿಸಲಾದ ಹಕ್ಕೊತ್ತಾಯಗಳು:

  •  ಮಾಧವ್ ಗಾಡ್ತೀಳ್ ಅವರು ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತು ನೀಡಿರುವ ವರದಿಯ ಕುರಿತ ತಪ್ಪುಗ್ರಹಿಕೆ ಮತ್ತು ವದಂತಿಗಳನ್ನು ಹೋಗಲಾಡಿಸಲು ವರದಿಯ ಸಂಕ್ಷಿಪ್ತ ಸರಳ ಅನುವಾದ ಮಾಡಬೇಕು. ಅದಕ್ಕಾಗಿ ಒಂದು ಸಮಿತಿ ರಚಿಸಬೇಕು.
  • ಘಟ್ಟ ವ್ಯಾಪ್ತಿಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸೌರಶಕ್ತಿ ಬಳಕೆ ಮತ್ತು ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಬೇಕು
  • ಹೊರ ರಾಜ್ಯ ವಲಸಿಗರ ನಿಯಂತ್ರಣಕ್ಕೆ ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆಯನ್ನು ಪಶ್ಚಿಮಘಟ್ಟದಲ್ಲಿಯೂ ಜಾರಿಗೆ ತರಬೇಕು.
  • ಪಂಜಾಬ್‌ನಲ್ಲಿ ಜಾರಿಯಲ್ಲಿರುವ ಮರ ಕಡಿಯದೇ ಉಳಿಸುವವರಿಗೆ ಕಾರ್ಬನ್ ಕ್ರೆಡಿಟ್ ನೀಡುವ ಪ್ರೋತ್ಸಾಹಧನ ಯೋಜನೆಯನ್ನು ಪಶ್ಚಿವ ಪ್ರದೇಶದಲ್ಲೂ ಜಾರಿಗೆ ತರಬೇಕು
  • ಕರಾವಳಿ ನಿಯಂತ್ರಿತ ವಲಯ(ಸಿಆರ್ಝಡ್) ಮಾದರಿಯಲ್ಲಿ ಪಶ್ಚಿಮಘಟ್ಟದ ನದಿಗಳ ತಟಗಳಿಗೂ ನಿಯಂತ್ರಣ ವಲಯ ಗುರುತು ಮಾಡಿ ಪರಿಸರ ವಿರೋಧಿ ಚಟುವಟಿಕೆ ನಿಷೇಧಿಸಬೇಕು
  • ಶೇ.21ರಷ್ಟು ಇರುವ ರಾಜ್ಯದ ಅರಣ್ಯ ಪ್ರದೇಶದ ಪ್ರಮಾಣ ಶೇ.33ಕ್ಕೆ ಏರಿಕೆಯಾಗುವವರೆಗೆ ಪಶ್ಚಿಮಘಟ್ಟ ವಲಯ ಅರಣ್ಯದಲ್ಲಿ ಅರಣ್ಯ= ಚಟುವಟಿಕೆಗಳಿಗೆ ಅವಕಾಶ ನೀಡಬಾರದು
  • ಪಶ್ಚಿಮಘಟ್ಟದಲ್ಲಿ ಲಂಟಾನ, ಯುಪಟೋರಿಯಂ, ಪಾರ್ಥೇನಿಯಂ ಮತ್ತು ಜಲಕಳೆಗಳನ್ನು ನಿಯಂತ್ರಿಸಬೇಕು.
  • ಕೊಳವೆ ಬಾವಿಗಳ ಅಗತ್ಯವೇ ಇಲ್ಲದಷ್ಟು ವ್ಯಾಪಕ ಮಳೆ ನೀರು ಇಂಗಿಸಬೇಕು.

ಅಂತರ್ಜಾಲ ಮಾಹಿತಿ

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group