Advertisement
The Rural Mirror ವಾರದ ವಿಶೇಷ

ಕಾಳುಮೆಣಸು ಬೆಳೆಗಾರರಿಗೆ ಸಿಹಿ ಸುದ್ದಿ – ಜೂನ್ ಅಂತ್ಯದೊಳಗೆ ಪೆಪ್ಪರ್ ಫ್ಯೂಚರ್ಸ್ ಮರುಪ್ರಾರಂಭಕ್ಕೆ NCDEX ಸಜ್ಜು

Share

ರಾಷ್ಟ್ರೀಯ ಸರಕು ಮತ್ತು ಉತ್ಪನ್ನ ವಿನಿಮಯ ಕೇಂದ್ರ (NCDEX) ಸುಮಾರು ಒಂದು ದಶಕದ ಬಳಿಕ ಕಾಳುಮೆಣಸು ಫ್ಯೂಚರ್ಸ್ ವಹಿವಾಟನ್ನು ಮರುಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಜೂನ್ ಅಂತ್ಯದೊಳಗೆ ಹೊಸ ಒಪ್ಪಂದ ಆರಂಭವಾಗುವ ಸಾಧ್ಯತೆ ಇದೆ. ಇದಕ್ಕೆ ಅಗತ್ಯವಾದ ಅನುಮೋದನೆಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಈಗಾಗಲೇ ನೀಡಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಸರಕು ಮತ್ತು ಉತ್ಪನ್ನ ವಿನಿಮಯ ಕೇಂದ್ರ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅರುಣ್ ರಸ್ತೆ ಅವರ ಪ್ರಕಾರ, ಕೇರಳದಲ್ಲಿ ವಿತರಣಾ ಕೇಂದ್ರ  ಆಗಿ ಕಾರ್ಯನಿರ್ವಹಿಸುವ ಗೋದಾಮನ್ನು ಅಂತಿಮಗೊಳಿಸಲಾಗಿದೆ. ಕಾಳುಮೆಣಸು ಫ್ಯೂಚರ್ಸ್ ಮರುಪ್ರಾರಂಭವು ಭಾರತದ ಮಸಾಲೆ ಮಾರುಕಟ್ಟೆಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.

ಈ ಹಿಂದೆ 10 ರಿಂದ 15 ವರ್ಷಗಳ ಹಿಂದೆ ಪೆಪ್ಪರ್ ಫ್ಯೂಚರ್ಸ್ ವಹಿವಾಟು ನಡೆಯುತ್ತಿತ್ತು. ಆದರೆ ಗುಣಮಟ್ಟದ ವಿವಾದಗಳು ಮತ್ತು ಕಾನೂನು ಸಮಸ್ಯೆಗಳ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಹೆಚ್ಚಿನ ವಿವಾದಗಳು ಬಗೆಹರಿದಿರುವುದರಿಂದ ಮತ್ತೆ ಮಾರುಕಟ್ಟೆಗೆ ತರಲು ರಾಷ್ಟ್ರೀಯ ಸರಕು ಮತ್ತು ಉತ್ಪನ್ನ ವಿನಿಮಯ ಕೇಂದ್ರ  ಮುಂದಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತವು ವಿಶ್ವದ ಪ್ರಮುಖ ಕಾಳುಮೆಣಸು ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದ್ದರೂ, ಜಾಗತಿಕ ಬೆಲೆ ನಿರ್ಧಾರದಲ್ಲಿ ವಿಯೆಟ್ನಾಂ ಮಾರುಕಟ್ಟೆಯೇ ಪ್ರಮುಖ ಮಾನದಂಡವಾಗಿದೆ. ಫ್ಯೂಚರ್ಸ್ ವಹಿವಾಟು ಪುನರಾರಂಭವಾದರೆ ಭಾರತದಲ್ಲಿಯೇ ಬೆಲೆ ನಿಗದಿಯ ವ್ಯವಸ್ಥೆ ಬಲಗೊಳ್ಳಲಿದೆ ಮತ್ತು ರೈತರು, ವ್ಯಾಪಾರಿಗಳು, ರಫ್ತುದಾರರು ಹಾಗೂ ಸಂಸ್ಕರಣಾ ಘಟಕಗಳಿಗೆ ಹೆಚ್ಚು ಪಾರದರ್ಶಕ ಮಾರುಕಟ್ಟೆ ಲಭ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಕಾಳುಮೆಣಸು ಬೆಲೆಗಳು ಏರಿಕೆಯ ಹಾದಿಯಲ್ಲಿದ್ದು, ಫ್ಯೂಚರ್ಸ್ ಮಾರುಕಟ್ಟೆಯ ಮರುಪ್ರವೇಶದಿಂದ ಬೆಲೆ ಸ್ಥಿರತೆ, ಅಪಾಯ ನಿರ್ವಹಣೆ ಹಾಗೂ ಮಾರುಕಟ್ಟೆ ಮಾಹಿತಿ ಲಭ್ಯತೆ ಇನ್ನಷ್ಟು ಸುಧಾರಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಕಾಳುಮೆಣಸು ಫ್ಯೂಚರ್ಸ್ ಮರುಪ್ರಾರಂಭ: ರೈತರಿಗೆ ಏನು ಲಾಭ.? :  ರಾಷ್ಟ್ರೀಯ ಸರಕು ಮತ್ತು ಉತ್ಪನ್ನ ವಿನಿಮಯ ಕೇಂದ್ರದಲ್ಲಿ ಕಾಳುಮೆಣಸು ಫ್ಯೂಚರ್ಸ್ ವಹಿವಾಟು ಮರುಪ್ರಾರಂಭವಾಗುವುದು ಕೇವಲ ವ್ಯಾಪಾರಿಗಳಿಗೆ ಮಾತ್ರವಲ್ಲ, ರೈತರಿಗೆ ಸಹ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಕಾಳುಮೆಣಸು ಬೆಲೆ ಮಾಹಿತಿ ಮುಂಚಿತವಾಗಿ ಲಭ್ಯವಾಗುತ್ತದೆ.  ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳುಗಳ ಬೆಲೆ ಹೇಗಿರಬಹುದು ಎಂಬ ಸೂಚನೆ ಸಿಗುವುದರಿಂದ ರೈತರು ತಕ್ಷಣ ಮಾರಾಟ ಮಾಡಬೇಕೇ ಅಥವಾ ಸ್ವಲ್ಪ ಕಾಲ ದಾಸ್ತಾನು ಮಾಡಿ ಕಾಯಬೇಕೇ ಎಂಬ ನಿರ್ಧಾರವನ್ನು ಉತ್ತಮವಾಗಿ ತೆಗೆದುಕೊಳ್ಳಬಹುದು.  ಕಟಾವು ಸಮಯದಲ್ಲಿ ಏಕಾಏಕಿ ಬೆಲೆ ಕುಸಿದರೆ ರೈತರಿಗೆ ನಷ್ಟವಾಗುತ್ತದೆ. ಫ್ಯೂಚರ್ಸ್ ಮಾರುಕಟ್ಟೆ ಬೆಲೆ ನೆರವಾಗುತ್ತದೆ. ದೊಡ್ಡ ರೈತರು, ರೈತ ಉತ್ಪಾದಕರ ಸಂಘಗಳು (FPO) ಮತ್ತು ವ್ಯಾಪಾರಿಗಳು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು.

ಇಂದು ದೇಶೀಯ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಬೆಲೆ ಮೇಲೆ ವಿಯೆಟ್ನಾಂ ಮಾರುಕಟ್ಟೆಯ ಪ್ರಭಾವ ಹೆಚ್ಚಾಗಿದೆ. ಫ್ಯೂಚರ್ಸ್ ಆರಂಭವಾದರೆ ಭಾರತದ ಮಾರುಕಟ್ಟೆಯೂ ಸ್ವತಂತ್ರ ಬೆಲೆ ಸೂಚಕವಾಗಿ ಬೆಳೆಯುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸೂಚನೆ ಇದ್ದರೆ ರೈತರು ಆತುರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಅಗತ್ಯ ಕಡಿಮೆಯಾಗುತ್ತದೆ. ಇದರಿಂದ ವ್ಯಾಪಾರಿಗಳೊಂದಿಗೆ ಉತ್ತಮ ಬೆಲೆಗೆ ಮಾತುಕತೆ ನಡೆಸಲು ಸಾಧ್ಯವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಹಾಗಿದ್ದರೂ ಕೂಡಾ ಕೆಲವು ಸಮಸ್ಯೆಗಳು ಇರಬಹುದು. ದೇಶದಲ್ಲಿ ಎಲ್ಲಾ ರೈತರಿಗೂ ಈ ಮಾಹಿತಿ ತಲಪುವುದು ಕಷ್ಟವಿದೆ.  ಸಣ್ಣ ರೈತರು ನೇರವಾಗಿ ಫ್ಯೂಚರ್ಸ್ ವಹಿವಾಟಿನಲ್ಲಿ ಭಾಗವಹಿಸುವುದು ಕಷ್ಟವಿದೆ.  ಬೆಲೆ ಏರಿಳಿತಗಳಿಂದ ಕೆಲವೊಮ್ಮೆ ಗೊಂದಲ ಉಂಟಾಗಬಹುದು. ಅಷ್ಟೇ ಅಲ್ಲ ಈ ಬಗ್ಗೆ ಸರಿಯಾದ ಅರಿವು ಕೂಡಾ ಬೇಕಾಗುತ್ತದೆ. ಮಾತ್ರವಲ್ಲ ಇದು ರೈತರಿಗೆ ಹೆಚ್ಚುವರಿ ಲಾಭ ತರದು. ಆದರೆ ಉತ್ತಮ ಬೆಲೆಗೆ ಮಾರಾಟ ಮಾಡುವ ಅವಕಾಶ ಸಿಗುತ್ತದೆ.

NCDEX is preparing to relaunch pepper futures trading by the end of June after receiving SEBI approval. The move is expected to improve price discovery, transparency, and risk management for pepper farmers, traders, exporters, and processors in India.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

4 hours ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

19 hours ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

1 day ago

ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ

ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…

1 day ago