ಹಳೆ ಕಾರ್ ಗಳ ಮಾರಾಟಕ್ಕೆ ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಡಿಸೆಲ್ಲರ್ ಗಳ ನೋಂದಣಿ ಕಡ್ಡಾಯವಾಗಿದ್ದು, ಮಧ್ಯವರ್ತಿಗಳು ಲೈಸೆನ್ಸ್ ಪಡೆದುಕೊಳ್ಳಬೇಕಿದೆ. ಈ ಮೂಲಕ ಗ್ರಾಹಕರ ರಕ್ಷಿಸುವ ಮತ್ತು ವಾಹನಗಳ ಮರು ಮಾರಾಟ ನಿಯಂತ್ರಿಸಲು ಸರ್ಕಾರ ಹೊಸ ನಿಯಮ ಜಾರಿಗೆ ಸರ್ಕಾರ ನಿರ್ಧರಿಸಿದೆ.
ಮಧ್ಯವರ್ತಿಗಳು ವಾಹನಗಳ ಮರು ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ತಾವು ವ್ಯವಹಾರ ನಡೆಸುವ ಸಂಸ್ಥೆಯ ಹೆಸರನ್ನು ಸಾರಿಗೆ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಧ್ಯವರ್ತಿಗಳು ರಾಜ್ಯ ಸಾರಿಗೆ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ನಂತರ ಮರು ಮಾರಾಟಗಾರರಿಗೆ ಲೈಸೆನ್ಸ್ ನೀಡಲಾಗುವುದು.
ರೀಸೆಲ್ಲರ್ ಡೀಲರ್ ಶಿಪ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಲೈಸೆನ್ಸ್ ರದ್ದುಗೊಳಿಸಿ ದಂಡ ವಿಧಿಸಲಾಗುವುದು. ವಾಹನ ಮಾರಾಟಕ್ಕೆ ನೋಂದಾಯಿಸಿದ ನಂತರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಡೀಲರ್ ಮಾತ್ರ ಜವಾಬ್ದಾರಿಯಾಗಿರುತ್ತಾರೆ. ಬಳಸಿದ ವಾಹನಗಳ ಖರೀದಿದಾರರು ಮತ್ತು ಮಾರಾಟಗಾರರ ರಕ್ಷಣೆಯ ಉದ್ದೇಶ ಹಾಗೂ ಪಾರದರ್ಶಕತೆ ಕಾಪಾಡುವ ಹಿನ್ನೆಲೆ ಹೊಸ ಮಾರ್ಗ ಸೂಚಿ ಜಾರಿಗೆ ತರಲಾಗುತ್ತದೆ.
ಹಳೆ ಕಾರು ಖರೀದಿಸಿದ ಮಾಲೀಕರು ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ವಾಹನಗಳ ಹಿಂದಿನ ಮಾಲೀಕನಿಗೆ ದಂಡ ನೀಡುತ್ತಿರುವ ದೂರುಗಳು ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಮುಂದಿನ 2 ರಿಂದ 3 ದಿನಗಳಲ್ಲಿ ದೇಶದ ಪೂರ್ವ, ಪಶ್ಚಿಮ, ಮಧ್ಯ ಮತ್ತು…
ರೈತರು ಹೊಲಗಳಲ್ಲಿ ಬಳಕೆ ಮಾಡುತ್ತಿರುವ ರಸಗೊಬ್ಬರಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ವೈಜ್ಞಾನಿಕ…
ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮತ್ತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ದೂರಶಿಕ್ಷಣದ ಮೂಲಕ ತರಬೇತಿ…
ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ…
ಮಯೂರ.ಕೆ, 7ನೇ ತರಗತಿ, ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ | -…