Advertisement
Opinion

#Obesity | ಅತಿಬೊಜ್ಜು ನಿಯಂತ್ರಣಕ್ಕೆ ಏನು ಪರಿಹಾರ…? |

Share

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಈ ಆಧುನಿಕ ಜೀವನ ಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಬಹುದು. ಅತಿಯಾದ ಕೆಲಸದ ಒತ್ತಡ ಹಾಗೂ ಅನಿಮಿಯಿತ, ಅಸಮತೋಲನ ಆಹಾರ ಕ್ರಮವು ಅತಿ ಬೊಜ್ಜಿನ ಸಮಸ್ಯೆಗೆ ಒಂದು ಮೂಲ ಕಾರಣವಾಗಿದೆ.

ಅತಿಯಾದ ದೇಹ ತೂಕಕ್ಕೆ ಕಾರಣಗಳು: ಅತಿಯಾದ ಕೊಬ್ಬಿನ ಆಹಾರ ಸೇವನೆ, ಹಾರ್ಮೋನ್#Harmon ವ್ಯತ್ಯಾಸ #pcos, #Thyroid diseases ), ವ್ಯಾಯಾಮ, ವಾಕಿಂಗ್ ಮಾಡದೇ ಇರುವುದು, ಮಾನಸಿಕ ಒತ್ತಡ ಇತ್ಯಾದಿ.

ಆಯುರ್ವೇದ ಶಾಸ್ತ್ರವು ಆರೋಗ್ಯಕರ ಆಹಾರ ವಿಹಾರ, ದಿನಚರ್ಯ, ಋತುಚರ್ಯ, ಊಟದ ಸಮಯದ ಬಗ್ಗೆ ನಿರ್ದಿಷ್ಟ ಶಿಫಾರಸ್ಸುಗಳನ್ನು ಒದಗಿಸಿರುತ್ತದೆ. ಸ್ಥೂಲಕಾಯ ಸಮಸ್ಯೆಯ ಮೂಲವು ಆಹಾರದಲ್ಲಿ ಮಾತ್ರ ಅಲ್ಲ, ಆಹಾರ ಬಳಕೆಯ ವಿಧಾನ ಮತ್ತು ಮನಸ್ಸಿನ ಸ್ಥಿತಿಯನ್ನು ಅವಲಂಬಿಸಿದೆ. ಸಂಸ್ಕರಿಸಿದ/ ಫಾಸ್ಟ್ ಫುಡ್, ಅತಿಯಾದ ಕೊಬ್ಬಿನ ಆಹಾರ ಇವುಗಳನ್ನು ನಿರ್ಬಂಧಿಸಬೇಕು. ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಪೌಷ್ಟಿಕಾಂಶಗಳು ಒಳಗೊಂಡಿರಬೇಕು.ನಮ್ಮ ಪ್ರಕೃತಿಯನ್ನು ರೂಪಿಸುವ ವಿವಿಧ ಶಕ್ತಿಗಳು ಅಥವಾ ದೋಷಗಳನ್ನು ಅರಿತು ಅದಕ್ಕೆ ಅನುಗುಣವಾಗಿ ತಿನ್ನುವುದು ಸಹ ಮುಖ್ಯ. ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಆಮ ಹೆಚ್ಚಾಗಿ ಅಗ್ನಿ ದರ್ಬಲಗೊಂಡು ದೋಷಗಳು ಉಲ್ಬಣಗೊಳ್ಳುವುದು. ಇದರಿಂದ ತೂಕ ಹೆಚ್ಚಳ ವಾಗುವುದು ಹಾಗೂ ಜಡತ್ವ ಉಂಟಾಗಿ ಅನೇಕ ಆರೋಗ್ಯ.ಸಮಸ್ಯೆ ಕಾಡಬಹುದು

ಆಹಾರ ಸೇವಿಸುವಾಗ ಟಿವಿ ವೀಕ್ಷಣೆ, ಪುಸ್ತಕ ಮೊಬೈಲ್‌ಗಳ ಬಳಕೆ ಮುಂತಾದ ಗೊಂದಲಮಯ ವಾತಾವರಣದಿಂದ ದೂರವಿರಬೇಕು. ನಾವು ತಿನ್ನುವ ಆಹಾರದ ಮೇಲೆ ಕೇಂದ್ರೀಕರಿಸಿ ಮನಸ್ಸನ್ನು ಶಾಂತಗೊಳಿಸಿ ತಿನ್ನುವುದರಿಂದ ದೇಹದ ತೂಕವನ್ನು ಸಮತೋಲನದಲ್ಲಿರಿಸಬಹುದು.. ಆಯುರ್ವೇದದ ಅನೇಕ ಔಷಧಿಗಳು ಮತ್ತು ಆಹಾರ ಪದ್ಧತಿಯಲ್ಲಿ ಬಳಸಲಾಗುವ ಗಿಡಮೂಲಿಕೆಗಳಿಂದ ತೂಕ ಕಡಿಮೆ ಮಾಡಬಹುದು. ಅವುಗಳಲ್ಲಿ ಬೆಳ್ಳುಳ್ಳಿ, ಮೆಂತೆ, ಅರಿಶಿನ, ನೆಲ್ಲಿಕಾಯಿ, ಗುಗ್ಗುಲು, ತ್ರಿಫಲ, ಚಕ್ಕೆಇತ್ಯಾದಿ ಗಿಡಮೂಲಿಕೆಗಳು

ಅತಿಯಾದ ತೂಕದಿಂದ ಆಗುವ ಕೆಲವು ಸಮಸ್ಯೆಗಳು:ದೇಹದ ತೂಕ ಹೆಚ್ಚಾದಾಗ ಅನೇಕ ಲಕ್ಷಣಗಳನ್ನು ಕಾಣಬಹುದು – ಅತಿಯಾದ ಆಯಾಸ, ಆಲಸ್ಯ, ಅತಿಯಾದ ನಿದ್ರೆ, ಕೀಲುಗಳಲ್ಲಿ ನೋವು ಮುಟ್ಟಿನ ಸಮಸ್ಯೆ, ಗರ್ಭಧಾರಣೆಯಲ್ಲಿ ಸಮಸ್ಯೆ ಇತ್ಯಾದಿ.

ಅತಿಯಾದ ಬೊಜ್ಜು ಅಥವಾ ಸ್ಥೂಲಕಾಯ ಸರಿಯಾದ ಸಮಯದಲ್ಲಿ ತಡೆಗಟ್ಟದೆ ಹೋದಲ್ಲಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ.. ಹೃದಯಾಘಾತ ಸಂಭವಿಸಬಹುದು ಮಧುಮೇಹ, ರಕ್ತದೊತ್ತಡ, ಮಾನಸಿಕ ರೋಗಗಳಾದ ಖಿನ್ನತೆ ಆತಂಕ, ಸಂಧಿವಾತ, ಗರ್ಭಕೋಶ ಸಮಸ್ಯೆ ಇತ್ಯಾದಿ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ.

ನಿಯಮಿತ ವ್ಯಾಯಾಮ, ದಿನನಿತ್ಯ ಯೋಗಾಭ್ಯಾಸ, ಸಮತೋಲಿತ ಆಹಾರ, ಇವುಗಳ ಜೊತೆಗೆ ಆಯುರ್ವೇದ ಔಷಧಿ ಮತ್ತು ಪಂಚಕರ್ಮ ಚಿಕಿತ್ಸೆಗಳಾದ ಉದ್ವರ್ತನ, ವೀರೇಚನ, ಲೇಖನ ಬಸ್ತಿ ಇತ್ಯಾದಿ. ಇವುಗಳನ್ನು ನುರಿತ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬನ್ನು ತೆಗೆದು ಹಾಕಿ ದೇಹದ ತೂಕವನ್ನು ಕಡಿಮೆ ಮಾಡಬಹುದು.

ಬರಹ :
ಡಾ.ಜ್ಯೋತಿ ಕೆ., ಲಕ್ಷ್ಮೀ ಕ್ಲಿನಿಕ್ ಮಂಗಳೂರು. 94481 68053
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 24-09-2026 | ಸೆ.29ರಿಂದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಸೆಪ್ಟೆಂಬರ್ 28–29ರಿಂದ ಹಲವು ಭಾಗಗಳಲ್ಲಿ ಮತ್ತೆ…

9 hours ago

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ಕೃಷಿಗೆ ಬ್ರೇಕ್‌? ಹೆಬ್ಬೇವು, ಅಗ್ರೋಫಾರೆಸ್ಟ್ರಿಯತ್ತ ಗಮನ

ತ್ರಿಪುರಾದಲ್ಲಿ ರಬ್ಬರ್‌ ಏಕಬೆಳೆ ತೋಟಗಳ ವಿಸ್ತರಣೆಯಿಂದ ಜೀವವೈವಿಧ್ಯ, ಮಣ್ಣು ಮತ್ತು ನೀರಿನ ಮೇಲೆ…

15 hours ago

ವಿಶ್ವದ ಶೇ.79ರಷ್ಟು ನದಿಗಳಲ್ಲಿ ಆಮ್ಲಜನಕ ಕುಸಿತ- ಉಷ್ಣವಲಯದ ನದಿಗಳಿಗೆ ಹೆಚ್ಚು ಅಪಾಯ

ವಿಶ್ವದ 21,439 ನದಿ ತೋಡುಗಳ ಅಧ್ಯಯನದಲ್ಲಿ ಶೇ.78.8ರಷ್ಟು ನದಿಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ…

1 day ago

ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!

ಕರ್ನಾಟಕದಲ್ಲಿ ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.26 ರವರೆಗೆ ಅಲ್ಲಲ್ಲಿ ತುಂತುರು…

1 day ago

ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?

ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ ಚುರುಕಾಗಲಿದ್ದು,…

2 days ago

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’

₹1.65 ಲಕ್ಷದಿಂದ ಬೆಲೆ ಆರಂಭವಾಗುವ ಐಫೋನ್‌ 18 ಪ್ರೊ ಖರೀದಿಗಾಗಿ ದೇಶದ ಹಲವು…

3 days ago