ಪೆಟ್ರೋಲ್,ಡೀಸೆಲ್ ಅಬಕಾರಿ ಸುಂಕ 2 ರೂ. ಹೆಚ್ಚಳ | ಗ್ರಾಹಕರ ಮೇಲೆ ಹೆಚ್ಚಳ ವರ್ಗಾವಣೆ ಇಲ್ಲ

April 8, 2025
10:19 AM
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂಪಾಯಿ ಅಬಕಾರಿ ಸುಂಕ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವುದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂಪಾಯಿ ಅಬಕಾರಿ ಸುಂಕ ಏರಿಕೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವುದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ  ಸ್ಪಷ್ಟಪಡಿಸಿದ್ದಾರೆ.……..ಮುಂದೆ ಓದಿ…..

ಏರಿಕೆ ಕುರಿತು ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗದು.  ಕಚ್ಚಾ ತೈಲದ ಮೇಲಿನ ಅಂತಾರಾಷ್ಟ್ರೀಯ ದರ ಬ್ಯಾರಲ್ ವೊಂದಕ್ಕೆ 60 ಡಾಲರ್ ಗೆ ಇಳಿದಿದೆ. ಜನವರಿಯಲ್ಲಿ ಕಚ್ಚಾ ತೈಲ ಬೆಲೆ 83 ಡಾಲರ್ ಗೆ ಏರಿದ್ದು, ನಂತರ 75 ಡಾಲರ್ ಗೆ ಇಳಿದಿತ್ತು ಎಂದು ಹೇಳಿದರು. ಅಡುಗೆ ಅನಿಲ ಸಿಲೆಂಡರ್ ಮೇಲಿನ 50 ರೂಪಾಯಿ ಏರಿಕೆಯು ಉಜ್ವಲ ಫಲಾನುಭವಿಗಳಿಗೆ ಮತ್ತು ಒಟ್ಟಾರೆ ಉಜ್ವಲ ಫಲಾನುಭವಿಗಳಲ್ಲದವರಿಗೆ ಅನ್ವಯಿಸಲಿದೆ. ಈ ಏರಿಕೆಯನ್ನು ಪ್ರತಿ 15ರಿಂದ 30 ದಿನಗಳ ನಂತರ ಪರಿಶೀಲಿಸಲಾಗುವುದು. ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ಪರಿಸ್ಥಿತಿ ಇದೇ ರೀತಿ ಇದ್ದರೆ, ದರವನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದರು. ಈ ಮಧ್ಯೆ, ತೈಲ ಮಾರಾಟ ಕಂಪನಿಗಳು ಪ್ರತಿಕ್ರಿಯಿಸಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ 2 ರೂಪಾಯಿ ಅಬಕಾರಿ ಸುಂಕ ಏರಿಕೆಯಿಂದ ಚಿಲ್ಲರೆ ದರಗಳ ಮೇಲೆ ವ್ಯತ್ಯಾಸವಾಗುವುದಿಲ್ಲ ಎಂದು ತಿಳಿಸಿವೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಲ್ಫ್ಯೂರಿಕ್ ಆಸಿಡ್ ಕೊರತೆ – ಕಾಪರ್‌ಸಲ್ಪೇಟ್‌ ಮೇಲೂ ಹೊಡೆತ – ಕೃಷಿಕರು ಗಮನಿಸಬೇಕಾದ ವಿಷಯ…
June 4, 2026
10:30 PM
by: ಮಿರರ್‌ ಡೆಸ್ಕ್
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಜಾಲದ ಮೇಲೆ ಇಡಿ ಭಾರೀ ದಾಳಿ – ₹337 ಕೋಟಿ ನಕಲಿ ಇ-ವೇ ಬಿಲ್ ಜಾಲದ ತನಿಖೆ
June 4, 2026
9:15 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 03-06-2026 | ಕರಾವಳಿಯಲ್ಲಿ ಮುಂಗಾರು ಚುರುಕು – ಜೂನ್ 8 ರಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಸಾಧ್ಯತೆ
June 3, 2026
1:54 PM
by: ಸಾಯಿಶೇಖರ್ ಕರಿಕಳ
ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಸಾಧ್ಯತೆ – ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ
June 3, 2026
6:54 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror