ಹವಾಮಾನ ವೈಪರೀತ್ಯದ ಕಾರಣದಿಂದ ನಾಶವಾಗುವ ಕೃಷಿಗೆ ಪರಿಹಾರವಾಗಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ ಈ ಬಾರಿ ಕೃಷಿಕರಲ್ಲಿ ಸಾಕಷ್ಟು ಗೊಂದಲಗಳು ಇದೆ. ಅದರಲ್ಲೂ ಅಡಿಕೆ ಬೆಳೆಗಾರರಿಗೆ ತಮ್ಮ ಬೆಳೆಗೆ ವಿಮೆ ಈ ಬಾರಿ ಇಲ್ಲ ಎನ್ನುವ ಗೊಂದಲ ಇತ್ತು. ಈಗಲೂ ಗೊಂದಲ ಮುಗಿದಿಲ್ಲ. ಆದರೆ ಅಡಿಕೆಗೂ ವಿಮೆ ಬರುತ್ತದೆ ಎನ್ನುವುದು ಅಧಿಕಾರಿಗಳ ಭರವಸೆ.
ಅಡಿಕೆಗೆ ಹವಾಮಾನ ಆಧಾರಿತ ಫಸಲು ವಿಮಾ ಯೋಜನೆ ಜಾರಿಯಲ್ಲಿದೆ. ಈ ಬಾರಿ ಜೂನ್ ಅಂತ್ಯವಾದರೂ ಈ ಯೋಜನೆ ಜಾರಿಯಾಗಿಲ್ಲ. ಇದೀಗ ಅಡಿಕೆ ಹೊರತುಪಡಿಸಿ ಇತರ 36 ಬೆಳೆಗಳಿಗೆ ಫಸಲ್ ಭೀಮಾ ಯೋಜನೆಗೆ ಚಾಲನೆ ದೊರೆತಿದೆ. ಈ ಬಾರಿ ಅಡಿಕೆಯನ್ನು ಈ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆತಂಕ ಕೃಷಿಕರಲ್ಲಿತ್ತು. ಹವಾಮಾನ ವೈಪರೀತ್ಯದ ಕಾರಣದಿಂದ ಕೃಷಿಗೆ ಹಾನಿಯಾದರೆ ಸರ್ಕಾರದ ಮುಂದೆ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಬೇಕಾಗಿಲ್ಲ, ಬೆಳೆವಿಮೆಯ ಹಣ ನಿಶ್ಚಿತವಾಗಿಯೂ ಬರುವುದರಿಂದ ಕೃಷಿಕರು ಬೆಳೆ ನಷ್ಟವನ್ನು ಸುಧಾರಿಸಿಕೊಳ್ಳುತ್ತಿದ್ದರು. ಹೀಗಾಗಿ ಬೆಳೆ ವಿಮೆಯ ಕಡೆಗೆ ಈಚೆಗೆ ಹೆಚ್ಚಿನ ಕೃಷಿಕರು ಆಸಕ್ತರಾಗಿದ್ದರು. ಇದೀಗ ಸರ್ಕಾರಕ್ಕೆ ಇಲ್ಲಿ ಆಗಿರುವ ವಿಳಂಬ ಹಾಗೂ ಲೋಪದ ಬಗ್ಗೆ ಮನವರಿಕೆ ಮಾಡುವ ಕೆಲಸಗಳು ನಡೆಯುತ್ತಿದೆ. ಈ ನಡುವೆಯೇ ವಿಮಾ ಕಂಪನಿಯ ಗುರುತು ಮಾಡಲಾಗಿದ್ದು, ಮುಂದಿನ ತಿಂಗಳ ಒಳಗೆ ಪ್ರೀಮಿಯಂ ಕಟ್ಟಲು ಅವಕಾಶ ಇರುತ್ತದೆ ಎನ್ನುವುದು ಅಧಿಕಾರಿಗಳ ವಿಶ್ವಾಸ.
ಕಳೆದ ಎರಡು ವರ್ಷಗಳಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಈ ವಿಮೆ ಉಪಯುಕ್ತವಾಗಿತ್ತು. ಒಂದು ಹೆಕ್ಟೇರ್ ಅಡಿಕೆ ಬೆಳೆ ವಿಮೆಗೆ ರೈತರು ರೂ.6400,ರಾಜ್ಯ ಸರ್ಕಾರ 75% ಮತ್ತು ಕೇಂದ್ರ ಸರ್ಕಾರ 25% ಒಟ್ಟು ಮೊತ್ತ ರೂ 65,202 ಪಾವತಿಸುತ್ತದೆ.ರೈತರ ಆಪತ್ತಿಗೆ ಸರಕಾರ ತಂದ ಬೆಳೆ ವಿಮಾ ಯೋಜನೆ ನೆರವಾಗಿತ್ತು.
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…