Advertisement
MIRROR FOCUS

ಉಚಿತ ವಿದ್ಯುತ್ ಬೆನ್ನಲ್ಲೆ ರೈತರಿಗೆ ಪವರ್ ಶಾಕ್ | ಲಕ್ಷ ಲಕ್ಷ ಬಿಲ್ ನೀಡಿದ ವಿದ್ಯುತ್ ಇಲಾಖೆ

Share

ಒಂದೆಡೆ ಉಚಿತ ವಿದ್ಯುತ್ ( free electricity) ನೀಡುತ್ತಿದ್ದೇವೆ ಎನ್ನುತ್ತಿರುವ ಸರ್ಕಾರ ಮತ್ತೊಂದೆಡೆ ರೈತರಿಂದ ದುಪ್ಪಟ್ಟು ವಿದ್ಯುತ್ ಬಿಲ್ ( current bill) ವಸೂಲಿಗೆ ಇಳಿದಿದೆ.ಏನಿದು ಕತೆ.. ಇಲ್ಲಿದೆ ಓದಿ…

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹಜ್ಯೋತಿ ಯೋಜನೆ(gruhajyothi scheme) ಜಾರಿಗೊಳಿಸಿ 200 ಯೂನಿಟ್‍ವರೆಗೆ ಉಚಿತ ಕರೆಂಟ್ ನೀಡುವ ಕೊಟ್ಟ ಭರವಸೆ ಈಡೇರಿಸಿದೆ. ಆದ್ರೆ ಗ್ರಾಮೀಣ ಭಾಗಗಳಲ್ಲಿ ಬೇರೆ ರೀತಿಯ ಚಿತ್ರಣವಿದೆ. ತೀವ್ರ ಬರಗಾಲದಿಂದ ಬೆಳೆಗಳೆಲ್ಲಾ ನಾಶವಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಉಳಿದಿರೋ ಅಲ್ಪಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್‍ಸೆಟ್ ಹೊಂದಿರುವ ರೈತರು, ವಿದ್ಯುತ್ ಇಲಾಖೆ ನೀಡ್ತಿರೋ ಒಂದೆರಡು ಗಂಟೆ ಕರೆಂಟ್‍ನಲ್ಲೇ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಪಂಪ್‍ಸೆಟ್‍ಗಳನ್ನು ಹೊಂದಿರುವ ರೈತರಿಗೆ ವಿದ್ಯುತ್ ಇಲಾಖೆ ಶಾಕ್ ನೀಡಿದೆ. ಲಕ್ಷ ಲಕ್ಷ ಮೊತ್ತದ ಕರೆಂಟ್ ಬಿಲ್ ನೀಡಿದ್ದು, ಇನ್ನು 15 ದಿನಗಳಲ್ಲಿ ಬಿಲ್ ಪಾವತಿ ಮಾಡಬೇಕು ಎಂದು ವಾರ್ನಿಂಗ್ ನೀಡಿದೆ.
ಹಾಸನ (Hassan) ಜಿಲ್ಲೆಯಲ್ಲಿ ರೈತರು ಬಳಸುವ ಒಂದೂವರೆ ಲಕ್ಷಕ್ಕೂ ಅಧಿಕ ಪಂಪ್‍ಸೆಟ್‍ಗಳಿಗೆ ಸರ್ಕಾರ ಕರೆಂಟ್ ನೀಡುತ್ತಿದೆ. ಇದುವರೆಗೂ ಬಹುತೇಕ ಸರ್ಕಾರಗಳು ರೈತರ ಬೆಳೆಗಳಿಗೆ ಬಳಸುವ ವಿದ್ಯುತ್‍ಗೆ ಬಿಲ್ ನೀಡಿರಲಿಲ್ಲ. ಅದರಲ್ಲೂ ಕೃಷಿ ಬಳಕೆ ಪಂಪ್‍ಸೆಟ್‍ಗಳಿಗೆ ರೈತರು ಉಚಿತವಾಗಿಯೇ ಕರೆಂಟ್ ಬಳಕೆ ಮಾಡಿಕೊಳ್ಳುತ್ತಿದ್ದರು. ಕೆಲವು ರೈತರು ಇನ್ನೂ ಮೀಟರ್ ಅಳವಡಿಕೆ ಮಾಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಗೃಹಜ್ಯೋತಿ ಜಾರಿ ಮಾಡಿರುವ ಸರ್ಕಾರ ಸಣ್ಣ, ಅತಿಸಣ್ಣ ರೈತರು ತಮ್ಮ ಕೃಷಿ ಚಟುವಟಿಕೆಗೆ ಅಗತ್ಯಕ್ಕೆ ತಕ್ಕಂತೆ ಬಳಸುತ್ತಿರುವ ನೀರಾವರಿ ಪಂಪ್‍ಸೆಟ್‍ಗಳಿಗೆ ಲಕ್ಷ ಲಕ್ಷ ಬಿಲ್ ನೀಡಲು ಆರಂಭಿರುವುದು ರೈತರಿಗೆ ದೊಡ್ಡ ಆಘಾತ ಉಂಟು ಮಾಡಿದೆ.
ಸಕಲೇಶಪುರ, ಬೇಲೂರು ಸೇರಿದಂತೆ ಎಲ್ಲಾ ತಾಲೂಕುಗಳ ರೈತರಿಗೆ ದುಬಾರಿ ಬಿಲ್ ಮೂಲಕ ಬರೆ ಎಳೆಯುತ್ತಿದೆ. ಹತ್ತಾರು ವರ್ಷಗಳಿಂದ ಕೆಲ ರೈತರು ಬಿಲ್ ಪಾವತಿ ಮಾಡಿಲ್ಲ. ಅಂತಹವರನ್ನು ಸೇರಿಸಿ ಎಲ್ಲಾ ರೈತರ ಪಂಪ್‍ಸೆಟ್‍ಗಳಿಗೆ ಎರಡೂವರೆ ಲಕ್ಷ, ಒಂದು ಲಕ್ಷ, ಐವತ್ತು ಸಾವಿರ ಹೀಗೆ ಮನಬಂದಂತೆ ಬಿಲ್ ನೀಡಿದ್ದಾರೆ. ಈ ವರ್ಷ ಬರಗಾಲದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದೀವಿ. ಈ ವೇಳೆ ಹೇಗೆ ಬಿಲ್ ಕಟ್ಟೋದು ಎನ್ನುತ್ತಿದ್ದಾರೆ.
ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಈಡೇರಿಸಲು ಗೃಹಜ್ಯೋತಿ ಜಾರಿಗೊಳಿಸಿ ಮನೆಮನೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. 200 ಯೂನಿಟ್ ವಿದ್ಯುತ್ ಉಚಿತ ಸಿಗುತ್ತಿದೆ ಎಂದು ಜನರು ಖಷಿಯಲ್ಲಿರುವಾಗ ಪಂಪ್‍ಸೆಟ್‍ಗಳಿಗೆ ದುಬಾರಿ ಬಿಲ್ ನೀಡುವ ಮೂಲಕ ರೈತರಿಂದ ಹಣ ವಸೂಲಿ ಮಾಡಲು ಮುಂದಾಗಿರೋದು ರೈತರ ಕಣ್ಣು ಕೆಂಪಾಗಿಸಿದೆ.
– ಅಂತರ್ಜಾಲ ಮಾಹಿತಿ
The Congress Govt came to power on a whim. Among the five guarantees given during the election, Griha Jyoti, Grilahakshmi, Shakti and Annabhagya schemes have been implemented. But after the implementation of Griha Jyoti Yojana which gives free electricity, there are still many discussions going on. On the one hand, the government claims to be providing free electricity, on the other hand, it has come down to collecting double electricity bills from the farmers.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

16 hours ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

22 hours ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

1 day ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

1 day ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

2 days ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

2 days ago