Advertisement
MIRROR FOCUS

ಟರ್ಕಿ ದೇಶದ ತಳಿಯ ಸಜ್ಜೆ  ಬಿತ್ತನೆ | ರಾಸಾಯನಿಕ ಸಿಂಪಡಿಸದೆಯೇ ಉತ್ತಮ ಬೆಳೆ..!

Share

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಿರೇನಗನೂರು ಗ್ರಾಮದ ರೈತ ಪ್ರದೀಪ್ ಗೌಡ ಟರ್ಕಿ ದೇಶದ ತಳಿಯ ಸಜ್ಜೆ  ಬಿತ್ತನೆ ಮಾಡಿ, ಉತ್ತಮ ಇಳುವರಿ ಬಂದಿದ್ದು ಲಾಭದ ನಿರೀಕ್ಷೆಯಲ್ಲಿದ್ದಾರೆ.  ಸ್ಥಳೀಯವಾಗಿ ದೊರೆಯುವ ಸಜ್ಜೆಯನ್ನು ಬಿತ್ತನೆ ಮಾಡದೇ ಹೊಸದಾಗಿ ಟರ್ಕಿ ದೇಶದ ಸಜ್ಜೆಯನ್ನು ಬಿತ್ತನೆ ಮಾಡಿದ್ದಾರೆ.

ಟರ್ಕಿ ದೇಶದ ಸಜ್ಜೆಯು ಅಧಿಕ ಇಳುವರಿಯೊಂದಿಗೆ 12 ಅಡಿ ಎತ್ತರ ಹಾಗೂ  3.5 ಅಡಿ ತೆನೆ ಬೆಳೆಯುತ್ತದೆ. ತೆನೆಯಲ್ಲಿ ಸಜ್ಜೆ ಕಾಳು ಜಾಸ್ತಿ ಇರಲಿದ್ದು,  ಪ್ರತಿ ಎಕರೆಗೆ 10 ರಿಂದ 15 ಕ್ವಿಂಟಾಲ್ ನಷ್ಟು ಫಸಲು ನೀಡಲಿದೆ. ಯಾವುದೇ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಸಿಂಪಡಿಸದೇ ಕೊಟ್ಟಿಗೆ ಗೊಬ್ಬರದಿಂದ ಸಾಮಾನ್ಯವಾಗಿ ಬೆಳೆಯುವ ಸಜ್ಜೆಯ ರೀತಿ ಈ ಬೆಳೆಯನ್ನು ಬೆಳೆಯಬಹುದಾಗಿದೆ.

ಸುಮಾರು  ನಾಲ್ಕು ತಿಂಗಳ ನಂತರ ಕಟಾವಿಗೆ ಬರುವ ಬೆಳೆ ಇದಾಗಿದ್ದು, ಸ್ಥಳೀಯವಾಗಿ ಬೆಳೆಯುವ ಸಜ್ಜೆಗಿಂತ  ಟರ್ಕಿ  ಸಜ್ಜೆ  ಹೆಚ್ಚುವ ಇಳುವರಿ  ನೀಡಲಿದೆ. ಜೊತೆಗೆ  ಯಾವುದೇ ಕೀಟಬಾಧೆ ಇರುವುದಿಲ್ಲ. ರೈತರಿಗೆ   ಕೃಷಿ ಅಧಿಕಾರಿಗಳು  ಸರಿಯಾದ  ಮಾಹಿತಿ ಒದಗಿಸಿ, ಈ ತಳಿಯನ್ನು ಹೆಚ್ಚು ಬೆಳೆಯುವಂತೆ  ಪ್ರೋತ್ಸಾಹಿಸುವ ಅಗತ್ಯವಿದೆ ಎನ್ನುತ್ತಾರೆ ರೈತರು.

ಈ ಬಗ್ಗೆ ಮಾತನಾಡಿದ ಪ್ರದೀಪ್‌ ಗೌಡ, ಟರ್ಕಿ ಸಜ್ಜೆಯನ್ನು ಒಂದು ಎಕರೆಯಲ್ಲಿ ಬಿತ್ತನೆ ಮಾಡಲಾಗಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ. ಸಜ್ಜೆ ತೆನೆ ಕನಿಷ್ಠ  ಮೂರೂವರೆ ಅಡಿ ಇರಲಿದ್ದು, ಇಳುವರಿಯೂ  ಹೆಚ್ಚಾಗಲಿದೆ. ಸಾಮಾನ್ಯ ಸಜ್ಜೆ  ಪ್ರತಿ ಎಕರೆಗೆ  5ರಿಂದ  8 ಕ್ವಿಂಟಾಲ್  ಇಳುವರಿ ನೀಡಿದರೆ,  ಟರ್ಕಿ ಸಜ್ಜೆ  10ರಿಂದ 15 ಕ್ವಿಂಟಾಲ್  ನೀಡಲಿದೆ.ಇದರಿಂದ ಹೆಚ್ಚು ಅನುಕೂಲವಾಗಲಿದೆ   ಎನ್ನುತ್ತಾರೆ.

ಟರ್ಕಿ ಸಜ್ಜೆ ಒಂದು ಕೆ ಜಿಗೆ 2 ಸಾವಿರ ರೂಪಾಯಿ ಬೆಲೆಯಿದ್ದು, ಸಾಮಾನ್ಯ ಸಜ್ಜೆಗಿಂತ ಉತ್ತಮ ಇಳುವರಿ ಬರಲಿದ್ದು, ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ರೈತ ಅಂಬರೀಶ್. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬಿಸಿ ಆಹಾರ ಪಾರ್ಸೆಲ್‌ಗೆ ಪ್ಲಾಸ್ಟಿಕ್‌, ಪತ್ರಿಕೆ ನಿಷೇಧ…! : ಸಾರ್ವಜನಿಕ ಧೂಮಪಾನಕ್ಕೆ ₹1000 ದಂಡ ಎಚ್ಚರಿಕೆ

ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ…

2 hours ago

ಅಡಿಕೆ ಬೆಳೆಗಾರರೇ ಗಾಬರಿ ಬೇಡ | ಮಾರುಕಟ್ಟೆಯ ‘ತಾತ್ಕಾಲಿಕ ತಿದ್ದುಪಡಿ’ಯ ಹಿಂದಿದೆ ಆರ್ಥಿಕ ಲೆಕ್ಕಾಚಾರ

ಅಡಿಕೆ ಮಾರುಕಟ್ಟೆಯ ಇತ್ತೀಚಿನ ಕುಸಿತ ಜಾಗತಿಕ ರಾಜಕೀಯ ಅನಿಶ್ಚಿತತೆ ಹಾಗೂ ಹಣದ ಹರಿವು…

4 hours ago

ಕಾಂಪೌಂಡ್ ರಬ್ಬರ್ ಆಮದು ಹೆಚ್ಚಳ : 10 ವರ್ಷಗಳ ವಿವರ ಲೋಕಸಭೆಯಲ್ಲಿ ಬಹಿರಂಗ

ಕಾಂಪೌಂಡ್ ರಬ್ಬರ್ ಆಮದು ಕುರಿತು ಕಳೆದ 10 ವರ್ಷಗಳ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ…

16 hours ago

ದಾಖಲೆಯ ಆಹಾರಧಾನ್ಯ ಉತ್ಪಾದನೆ | 10 ವರ್ಷಗಳಲ್ಲಿ 357 ಮಿಲಿಯನ್ ಟನ್

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 357 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆಯಾಗಿ ಹೊಸ…

16 hours ago

ಒಂದೇ ತೋಟದಲ್ಲಿ ಹಲವು ಬೆಳೆ – ವರ್ಷಪೂರ್ತಿ ಆದಾಯ | ಗದಗದ ರೈತ ಸಹೋದರರ ಸಮಗ್ರ ಕೃಷಿ ಮಾದರಿ

ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಹೋದರರು ತಮ್ಮ 10 ಎಕರೆ ಜಮೀನಿನಲ್ಲಿ…

24 hours ago

ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ

ಅಡಿಕೆ ಬೆಳೆಗಾರರ ವಾಸ್ತವ ಪರಿಸ್ಥಿತಿಯನ್ನು ಅರಿಯಲು ದ ರೂರಲ್ ಮಿರರ್.ಕಾಂ ನಡೆಸಿದ ಸಮೀಕ್ಷೆಯಲ್ಲಿ…

1 day ago