ಮಳೆ… ಮಳೆ… ಮಳೆ…! | ಎಲ್ಲೆಡೆಯೂ ನೀರೇ….ನೀರು | ಭೂಕುಸಿತ – ರಸ್ತೆ ಬ್ಲಾಕ್‌ – ನೀರಿನ ಮಟ್ಟ ಏರಿಕೆಯ ಸುದ್ದಿ |

July 10, 2022
2:35 PM

ಶನಿವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ಎಲ್ಲೆಡೆಯೂ ನೀರಿನ ಮಟ್ಟ ಏರಿಕೆಯಾಗಿದೆ. ನಿರಂತರವಾಗಿ ಸುರಿಯುವ ಮಳೆಯಿಂದ ಭೂಕುಸಿತ, ಬರೆ ಕುಸಿತಗಳು ಅಲ್ಲಲ್ಲಿ  ನಡೆಯುತ್ತಿದೆ. ಮಳೆಯ ಕಾರಣದಿಂದ ಹೊಳೆ, ನದಿಯ ನೀರಿನ ಮಟ್ಟ ಏರಿಕೆಯಾಗಿ ರಸ್ತೆ ಸಂಚಾರವೂ ಹಲವು ಕಡೆ ತೊಂದರೆಯಾಗಿದೆ. ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.

ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ನೀರಿನಿಂದ ಆವೃತವಾಗಿದೆ. ಕಳೆದ ದಿನದಿಂದ ಬಿಡದೆ ಸುರಿಯುತ್ತಿದೆ ಮಳೆ.
ದೇವಸ್ಥಾನದ ಸುತ್ತಮುತ್ತ ನೀರಿನಿಂದ ಆವರಿಸಿಕೊಂಡು ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ತೊಂದರೆಯಾಗುತ್ತಿದೆ. ಅರ್ಚಕರ ವಸತಿಗೃಹದ ಒಳಗೆ ನೀರು ತುಂಬಿಕೊಂಡಿದೆ.

ಕಾಸರಗೋಡು ಸುಳ್ಯ ರಾಜ್ಯ ಹೆದ್ದಾರಿಯಲ್ಲಿ ವಿಪರೀತ ಮಳೆ ಸುರಿತ್ತಿದ್ದು ಮಳೆಗೆ ನೀರಿನ ಮಟ್ಟ ಹೆಚ್ಚಾಗಿದೆ. ನೀರು ಹೊಳೆಯಲ್ಲಿ ತುಂಬಿ ರಸ್ತೆಗೆ  ಬಂದಿದೆ. ಪರಪ್ಪೆಯ ರಸ್ತೆ  ಕೆಸರುಮಯವಾಗಿದೆ.

ಕುಮಾರಧಾರಾ ಹಾಗೂ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟವನ್ನು ಸಮೀಪಿಸುತ್ತಿದೆ. ಬಂಟ್ವಾಳ ಸೇರಿದಂತೆ ನದಿ ಪ್ರದೇಶಗಳಲ್ಲಿ  ತೋಟಗಳಿಗೆ ನೀರು ನುಗ್ಗಿದೆ. ಮನೆಗಳಿಗೂ ನೀರು ನುಗ್ಗುವ ಭೀತಿ ಇದೆ.

ಶೃಂಗೇರಿ ಹೊರನಾಡು ರಸ್ತೆ ನಡುವೆಯೂ ಭೂಕುಸಿತ ಸಂಭವಿಸಿದೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲೂ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಆಗುಂಬೆ ಘಾಟಿ ಪ್ರದೇಶದಲ್ಲೂ ಭೂಕುಸಿತ ಸಂಭವಿಸಿದೆ.

ಕಾಸರಗೋಡು ಜಿಲ್ಲೆಯ ಮಧೂರು ಹೊಳೆಯೂ ತುಂಬಿ ಹರಿದಿದೆ. ಹೀಗಾಗಿ ಮಧೂರು ದೇವಸ್ಥಾನದ ಒಳಗೆ ನೀರು ಹರಿದಿದೆ.

ಮಾಹಿತಿ : ಅನನ್ಯ ಎಚ್‌ ಸುಬ್ರಹ್ಮಣ್ಯ

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ
ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ
August 25, 2026
10:30 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror