ಶನಿವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ಎಲ್ಲೆಡೆಯೂ ನೀರಿನ ಮಟ್ಟ ಏರಿಕೆಯಾಗಿದೆ. ನಿರಂತರವಾಗಿ ಸುರಿಯುವ ಮಳೆಯಿಂದ ಭೂಕುಸಿತ, ಬರೆ ಕುಸಿತಗಳು ಅಲ್ಲಲ್ಲಿ ನಡೆಯುತ್ತಿದೆ. ಮಳೆಯ ಕಾರಣದಿಂದ ಹೊಳೆ, ನದಿಯ ನೀರಿನ ಮಟ್ಟ ಏರಿಕೆಯಾಗಿ ರಸ್ತೆ ಸಂಚಾರವೂ ಹಲವು ಕಡೆ ತೊಂದರೆಯಾಗಿದೆ. ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.
ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ನೀರಿನಿಂದ ಆವೃತವಾಗಿದೆ. ಕಳೆದ ದಿನದಿಂದ ಬಿಡದೆ ಸುರಿಯುತ್ತಿದೆ ಮಳೆ.
ದೇವಸ್ಥಾನದ ಸುತ್ತಮುತ್ತ ನೀರಿನಿಂದ ಆವರಿಸಿಕೊಂಡು ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ತೊಂದರೆಯಾಗುತ್ತಿದೆ. ಅರ್ಚಕರ ವಸತಿಗೃಹದ ಒಳಗೆ ನೀರು ತುಂಬಿಕೊಂಡಿದೆ.
ಕಾಸರಗೋಡು ಸುಳ್ಯ ರಾಜ್ಯ ಹೆದ್ದಾರಿಯಲ್ಲಿ ವಿಪರೀತ ಮಳೆ ಸುರಿತ್ತಿದ್ದು ಮಳೆಗೆ ನೀರಿನ ಮಟ್ಟ ಹೆಚ್ಚಾಗಿದೆ. ನೀರು ಹೊಳೆಯಲ್ಲಿ ತುಂಬಿ ರಸ್ತೆಗೆ ಬಂದಿದೆ. ಪರಪ್ಪೆಯ ರಸ್ತೆ ಕೆಸರುಮಯವಾಗಿದೆ.
ಕುಮಾರಧಾರಾ ಹಾಗೂ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟವನ್ನು ಸಮೀಪಿಸುತ್ತಿದೆ. ಬಂಟ್ವಾಳ ಸೇರಿದಂತೆ ನದಿ ಪ್ರದೇಶಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಮನೆಗಳಿಗೂ ನೀರು ನುಗ್ಗುವ ಭೀತಿ ಇದೆ.
ಶೃಂಗೇರಿ ಹೊರನಾಡು ರಸ್ತೆ ನಡುವೆಯೂ ಭೂಕುಸಿತ ಸಂಭವಿಸಿದೆ. ಚಾರ್ಮಾಡಿ ಘಾಟಿ ಪ್ರದೇಶದಲ್ಲೂ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಆಗುಂಬೆ ಘಾಟಿ ಪ್ರದೇಶದಲ್ಲೂ ಭೂಕುಸಿತ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯ ಮಧೂರು ಹೊಳೆಯೂ ತುಂಬಿ ಹರಿದಿದೆ. ಹೀಗಾಗಿ ಮಧೂರು ದೇವಸ್ಥಾನದ ಒಳಗೆ ನೀರು ಹರಿದಿದೆ.
ಮಾಹಿತಿ : ಅನನ್ಯ ಎಚ್ ಸುಬ್ರಹ್ಮಣ್ಯ
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.