ಪ್ರಕೃತಿ ಆರಾಧನೆಯೇ
ಪರಮಾರಾಧನೆ
ಪ್ರಕೃತಿಯೊಲ್ಮೆಯೇ
ಮುಕ್ತಿಯಾನಂದ ಸಾಧನೆ – ಕುವೆಂಪು Advertisement Advertisement
ಮಳೆ.. ಅಂದು..ಇಂದು
ಅಂದು.. : ನನ್ನ ಬಾಲ್ಯದ ದಿನಗಳು.. ಮಳೆಗಾಲದ ಸಮಯ ದಿನ ಗಟ್ಟಲೆ ಧೋ ಎಂದು ಮಳೆ ಸುರಿಯುತ್ತಿತ್ತು. ರವಿ ಕಾಣದ ದಿನಗಳು ಅದೆಷ್ಟೋ.. ಹಳ್ಳ ಕೊಳ್ಳ ದಾಟಿ ಶಾಲೆ ಸೇರುವುದೇ ಒಂದು ಸಾಹಸ ದ ಕೆಲಸವಾಗಿತ್ತು. ಇತ್ತ ಮನೆಯಲ್ಲೂ ..ಹಿರಿಯರಿಗೆ ಮಕ್ಕಳು ಶಾಲೆ ಬಿಟ್ಟು ಮನೆ ಸೇರುವವರೆಗೂ ಆತಂಕ. ಒಂದೆಡೆ ಕೃಷಿ ಚಟುವಟಿಕೆ ಗಳಿಗೂ ತೊಂದರೆ. ಅಡಿಕೆ ತೋಟಗಳಿಗೆ ಔಷಧಿ ಸಿಂಪಡಣೆಯೂ ಕಷ್ಟದ ಕೆಲಸವಾಗಿತ್ತು. ದಿನಕರ ಕಣ್ತೆರೆದರೆ, ಕೆಲಸದವರು ಲಭ್ಯವಿ ದ್ದರೆ ಔಷಧ ಸಿಂಪಡಣೆ ! ‘ ಈ ಬರ್ಸೊಗು ನಾಲ್ ಪೆಲತ್ತರಿ ಇತ್ತ್ ನಾಯೆ ಇಲ್ಲ್ ಪಿದಡಾಯೆ ‘ ಎಂಬ ಮಾತಿತ್ತು. ಅಂದರೆ ಹಲಸಿನ ಕಾಯಿಯ ನಾಲ್ಕು ಬೇಳೆ ತನ್ನ ಸಂಗ್ರಹದಲ್ಲಿ ಇದ್ದಾತ ಕೂಲಿ ಕೆಲಸ ಕ್ಕಂತ ಮನೆ ಹೊರಡಲಾರ, ಅದನ್ನೇ ಅಂದಿನ ಆಹಾರವಾಗಿಸಿ ಕೊಳ್ಳಬಲ್ಲ… ಎಂಬುದು ಆ ರೂಢಿ ಮಾತಿನ ಅರ್ಥ. ‘ಒಂದು ಮಳೆ ಬಂದರೆ ಎತ್ತಿನ ಎರಡೂ ಕೊಂಬು ಒದ್ದೆಯಾಗಬೇಕಿಲ್ಲ ‘.. ಎಂಬ ಹಿರಿಯರ ಮಾತಿದ್ದರೂ ಮಳೆಯ ಹಂಚಿಕೆಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಾರೀ ವ್ಯತ್ಯಾಸವೇನೂ ಇರುತ್ತಿರಲಿಲ್ಲ. ಅಪರೂಪದಲ್ಲಿ ಆಟಿ ತಿಂಗಳಲ್ಲಿ (ಜುಲೈ ತಿಂಗಳ 15/16 ರ ಬಳಿಕ) ಬಿಸಿಲು ಕಾದರೆ ಅದು ಕೃಷಿ ಚಟುವಟಿಕೆಗೆ ಪೂರಕ ಆಗ್ತಿತ್ತು. “ಆಟಿತ ದೊಂಬುಗು ಆನೆತ ಬೆರಿ ಪುಡಾವು” .ಅಂದರೆ ಆಟಿ ತಿಂಗಳ ಬಿಸಿಲ ಪ್ರಖರತೆಗೆ ಆನೆಯ ಬೆನ್ನು ಒಡೆದೀತು..ಎಂಬುದು ಹಿರಿಯ ರ ಮಾತಾಗಿತ್ತು.
ಇಂದು : ಮಳೆ ಸುರಿವ ಕ್ರಮ ಬದಲಾಗಿದೆ. ದಿನಗಟ್ಟಲೆ ಮಳೆ ಸುರಿಯುವುದು ಅಪರೂಪವಾಗಿದೆ. ಕನಿಷ್ಟ ಅವಧಿಯಲ್ಲಿ ಗರಿಷ್ಟ ಮಳೆ ಸುರಿವ ಮೇಘಸ್ಪೋಟದಂತಹ ವಿದ್ಯಮಾನವನ್ನು ಹೆಚ್ಚು ಹೆಚ್ಚು ಕಾಣುತ್ತಿದ್ದೇವೆ. ಆವಿಯಾದ ನೀರು ಮಳೆಯಾಗಿ ಸುರಿಯಲೇ ಬೇಕು ! ಈಗೀಗ, ಎಲ್ಲೋ ನಗರ ಪ್ರದೇಶದಲ್ಲೋ, ಗುಡ್ಡಗಾಡು ಪ್ರದೇಶಗಳಲ್ಲೋ ಹೆಚ್ಚಿನ ಮಳೆ ಸುರಿಯುತ್ತಿದೆ.
ಸರಾಸರಿ ಮಳೆಯ ಪ್ರಮಾಣ :
1976 ರಿಂದ 2000 = 4611 ಮಿ.ಮೀ. 2001 ರಿಂದ 2025 = 4536 ಮಿ.ಮೀ. ತುಲನಾತ್ಮಕವಾಗಿ ದೀರ್ಘಾವಧಿ ಸರಾಸರಿ ಕಳೆದ ಶತಮಾನದ ಕೊನೆಯ 25 ವರ್ಷ ಹಾಗೆ, ಈ ಶತಮಾನದ ಆರಂಭ ದ 25 ವರ್ಷಗಳ ಸರಾಸರಿ ಕೂಡಾ ಹೆಚ್ಚು ಕಡಿಮೆ ಒಂದೇ ರೀತಿ (4535ಮಿ.ಮೀ.) ಇರುವುದು ಇಲ್ಲಿ ಗಮನಿಸಬಹುದಾದ ಅಂಶ. ವಾರ್ಷಿಕ ಸರಾಸರಿ ಮಳೆ ಸುರಿವ ದಿನಗಳು 165. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಅಂದಿನ “ಮಳೆ ನಾಡ” ವೈಭವ ಇಂದಿಲ್ಲ !.. ಮುಂದೆ..?. ಕೇಳಿ ಬಿಡಬಹುದಿತ್ತು ವರುಣನನ್ನು ಇದೆಂತಹ ಉದ್ಧಟತನವೆಂದು…
ಆದರೆ ಪ್ರಶ್ನಿಸುವ ಯೋಗ್ಯತೆ ನಾವು ಉಳಿಸಿಕೊಂಡಿಲ್ಲವಲ್ಲ…. …… ಮುಂದೆ ಓದಿ……
(ಅಂಕಿ ಅಂಶಗಳು *ಬಾಳಿಲದಲ್ಲಿ ದಾಖಲಾದ ಮಳೆಯ ಪ್ರಮಾಣ)
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…
ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…