ರಕ್ಷಾಬಂಧನ ಎನ್ನುವುದು ಪ್ರೀತಿಯ ಸಂಕೇತವೂ ಹೌದು ರಕ್ಷಣೆಯ ಸಂಕೇತವೂ ಹೌದು. ಹಿಂದೆಲ್ಲಾ ಯುದ್ಧಕ್ಕೆ ತೆರಳುವ ವೇಳೆ ರಕ್ಷಣೆ ಹಾಗೂ ಗೆಲುವಿಗಾಗಿ ರಕ್ಷೆ ತೊಟ್ಟು ಮುನ್ನುಗ್ಗಿದ ಬಗ್ಗೆಯೂ ಪುರಾಣಗಳಲ್ಲಿ ತಿಳಿದರೆ, ಈಚೆಗೆ ಪ್ರೀತಿ, ಸ್ನೇಹ, ಸಹೋದರತ್ವದ ಉದ್ದೇಶದಿಂದಲೂ ರಕ್ಷಾಬಂಧನ ಆಚರಿಸಲಾಗುತ್ತಿದೆ. ಆದರೆ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ರಕ್ಷಾ ಬಂಧನವನ್ನು ರಸ್ತೆ ದುರಸ್ತಿಯ ಜೊತೆಗೆ ಆಚರಿಸಿದರು.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲು – ಬೇಂಗತ್ತಮಲೆ- ಚಾಕೊಟೆ ರಸ್ತೆಯನ್ನು ಅಲ್ಲಿನ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಗ್ರಾ ಪಂ ಸದಸ್ಯರ ಸಹಕಾರದೊಂದಿಗೆ ಆ ಪ್ರದೇಶದ ಜನರ ಮೂಲಕ ದುರಸ್ತಿ ಮಾಡಲಾಯಿತು. ಅದರ ಜೊತೆಗೆ ರಕ್ಷಾಬಂಧನವನ್ನು ರಸ್ತೆಯಲ್ಲಿಯೇ ಕುಳಿತು ಆಚರಿಸಲಾಯಿತು. ಈ ಮೂಲಕ ರಸ್ತೆಯ ರಕ್ಷಣೆಯೂ ನಮ್ಮ ಜವಾಬ್ದಾರಿ ಎಂಬುದನ್ನು ಈ ಜನರು ಸಾಬೀತು ಮಾಡಿದರು. ಇದು ನಾಡಿನೆಲ್ಲೆಡೆಗೆ ಧನಾತ್ಮಕ ಸಂದೇಶ ಬೀರಿತು.
ಅನೇಕ ಸಮಯಗಳಿಂದ ಈ ಭಾಗದ ಜನರು ಈ ಗ್ರಾಮೀಣ ರಸ್ತೆ ದುರಸ್ತಿಯ ಬೇಡಿಕೆ ಇರಿಸಿದ್ದರು. ಅನುದಾನಗಳ ಕೊರತೆಯಿಂದ ಸಂಪೂರ್ಣ ದುರಸ್ತಿ ಆಗಿರಲಿಲ್ಲ. ಸಣ್ಣಪುಟ್ಟ ಕಾಂಕ್ರೀಟ್ ಕಾಮಗಾರಿಗಳಿಂದಲೇ ತೃಪ್ತಿ ಹೊಂದಬೇಕಾಗಿತ್ತು. ಹೀಗಾಗಿ ತಮ್ಮ ರಸ್ತೆಯ ರಕ್ಷಣೆಯನ್ನು ಗ್ರಾಪಂ ಸಹಕಾರದ ಮೂಲಕ ಈ ಬಾರಿ ಅಲ್ಲಿನ ಜನರೇ ವಹಿಸಿಕೊಂಡರು.
ಸಣ್ಣ ಹಿಡುವಳಿದಾರರಿಗೆ ಈಗ ಕಾಳುಮೆಣಸು ಕೃಷಿಯ ಬಗ್ಗೆ ಸಾಕಷ್ಟು ಗೊಂದಲ. ಇಂತಹ ಸಮಯದಲ್ಲಿ…
ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ತಿರುಗುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು…
ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ…
ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…
ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್ಡಿಎಂ ಶಾಲೆ, ಮಂಗಳೂರು…
ಮುಂದಿನ 2 ರಿಂದ 3 ದಿನಗಳಲ್ಲಿ ದೇಶದ ಪೂರ್ವ, ಪಶ್ಚಿಮ, ಮಧ್ಯ ಮತ್ತು…