Advertisement
MIRROR FOCUS

ಜ.26 : ರೂರಲ್‌ ಮಿರರ್‌ ಪ್ರಕಾಶನ ವತಿಯಿಂದ “ಮುಸ್ಸಂಜೆಯ ಹೊಂಗಿರಣ” ಪುಸ್ತಕ ಬಿಡುಗಡೆ

Share
ರೂರಲ್‌ ಮಿರರ್‌ ಹೊಸ ಹೆಜ್ಜೆ ಇರಿಸಿದೆ. ಕೊರೋನಾ ಕೃಪೆಯ ವರಗಳತ್ತ ಇಣುಕು ನೋಟದ ಮುಸ್ಸಂಜೆಯ ಹೊಂಗಿರಣ
ಎಂಬ ಕೃತಿಯನ್ನು ಪ್ರಕಾಶನ ಮಾಡುತ್ತಿದೆ. ಹಿರಿಯ ಬರಹಗಾರ, ಪತ್ರಕರ್ತ ನಾ.ಕಾರಂತ ಪೆರಾಜೆ ಅವರು ಬರೆದಿರುವ ಈ ಕೃತಿಯನ್ನು ರೂರಲ್‌ ಮಿರರ್‌ ಪ್ರಕಾಶಿಸಿದೆ. ರೂರಲ್‌ ಮಿರರ್‌ ಈ ಚೊಚ್ಚಲ  ಕೃತಿಯು ಜ.26 ರಂದು ಬಿಡುಗಡೆಗೊಳ್ಳಲಿದೆ.

ಪಾಸಿಟಿವ್‌ ಬರಹಗಳ ಕಡೆಗೆ ಗಮನ ಸೆಳೆಯುತ್ತಾ, ರಚನಾತ್ಮಕ ಸುದ್ದಿಗಳ ಕಡೆಗೆ ಆದ್ಯತೆ ನೀಡುತ್ತಾ ಬಂದಿದ್ದ ರೂರಲ್‌ ಮಿರರ್‌ ಇದೀಗ ಕೊರೋನಾ ಸಮಯದ ಪಾಸಿಟಿವ್‌ ಬೆಳವಣಿಗೆಗಳ ಬರಹಗಳುಳ್ಳ ಕೃತಿಯನ್ನು ಪ್ರಕಾಶನ ಮಾಡುತ್ತಿದೆ. ಕೊರೋನಾ ಸಮಯದಲ್ಲಿ ಸಾಕಷ್ಟು ನೆಗೆಟಿವ್‌ ಸುದ್ದಿಗಳೇ ಬಂದವು. ಆದರೆ ಕೊರೋನಾ ನೆಗೆಟಿವ್‌ ಆಗಿದ್ದರೆ ಸಂತಸ ಪಟ್ಟರೆ ಬದುಕಿನಲ್ಲಿ ಈ ಸಂದರ್ಭ ಅನೇಕ ಪಾಸಿಟಿವ್‌ ಸಂಗತಿಗಳು ನಡೆದಿದ್ದವು.ಇಡೀ ವರ್ಷ ಈ ಭಯಾನಕ ದಿನಗಳು ಮರೆತು ಹೋಗುವ ಈ ಸಂದರ್ಭ ಅದರ ದಾಖಲಾತಿ ಇಲ್ಲಿ ನಡೆದಿದೆ.

ಈ ಕೃತಿಯ ಮುಸ್ಸಂಜೆಯ ಹೊಂಗಿರಣ ವು ಜ.26 ರಂದು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಗ್ರಾಮೀಣ ಭಾಗದಲ್ಲಿ ಬಿಡುಗಡೆಗೊಳ್ಳಲಿದೆ. ಸಾಹಿತಿ, ಚಿಂತಕ ಅರವಿಂದ ಚೊಕ್ಕಾಡಿ ಬಿಡುಗಡೆಗೊಳಿಸುವರು. ಈ ಸಂದರ್ಭ ವಿಧಾನಪರಿಷತ್‌ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಬರಹಗಾರ ನಾ.ಕಾರಂತ ಪೆರಾಜೆ ಮೊದಲಾದವರು ಭಾಗವಹಿಸುವರು.

ಈ ಕಾರ್ಯಕ್ರಮದ ಬಳಿಕ ಗಾಂಧೀಜಿಯವರ ಮೌಲ್ಯಗಳ ಪ್ರಸ್ತುತತೆಯ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.ಸಾಹಿತಿ, ಚಿಂತಕ ಅರವಿಂದ ಚೊಕ್ಕಾಡಿ ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

22 minutes ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

48 minutes ago

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

2 days ago