MIRROR FOCUS

ರಾಜ್ಯಾದ್ಯಂತ ಕಾಡುತ್ತಿದೆ ಬರ | ನೀರಿನ ಕೊರತೆ ಮಧ್ಯೆಯೂ ಈ 40 ಹಳ್ಳಿಗಳಿಗಿಲ್ಲ ನೀರಿನ ಕೊರತೆ..|

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬೇಸಿಗೆಯ ಬಿರು ಬಿಸಿಲಿಗೆ(Hot summer) ಭೂಮಿಯೆಲ್ಲಾ ಒಣಗಿ(Dry land) ಹೋಗಿದೆ. ಜಲ(Water) ಪಾತಾಳಕ್ಕೆ ಇಳಿದಿದೆ. ಎಲ್ಲೆಲ್ಲೂ ಖಾಲಿ  ಕೆರೆಗಳು(Empty lakes), ಅದೃಶ್ಯವಾದ ಅಂತರ್ಜಲ(Under ground water), ಅಣೆಕಟ್ಟುಗಳು(Dam) ಬರಡಾಗಿ ನಿಂತಿವೆ. ಅದರಲ್ಲೂ ಉತ್ತರ ಕರ್ನಾಟಕದ(North Karnataka) ಜಿಲ್ಲೆಗಳ ಪರಿಸ್ಥಿತಿ ದೇವರಿಗೆ ಪ್ರೀತಿ. ಆದರೆ  ಕೊಪ್ಪಳದ (Koppal) ಈ ಗ್ರಾಮಗಳಲ್ಲಿ ಪ್ರತಿ ವರ್ಷ ಬೇಸಿಗೆ ಬಂತೆಂದರೆ ಕುಡಿವ ನೀರಿನ ಸಮಸ್ಯೆ(Drinking water problem) ಎದುರಾಗುತ್ತಿತ್ತು. ಆದರೆ ಈ ಬಾರಿ ನೀರಿನ ಸಮಸ್ಯೆ ಇಲ್ಲ. ಕಾರಣ ಗ್ರಾಮಸ್ಥರು ಹಾಗೂ ಸ್ಥಳೀಯ ಆಡಳಿತಗಳು ಕುಡಿವ ನೀರಿನ ಕೆರೆಗಳನ್ನು ಸಂರಕ್ಷಿಸಿದ್ದು(Save Lakes). ಸದ್ಯ ಈ ಭಾಗದಲ್ಲಿ ಕುಡಿವ ನೀರಿಗೆ ಯಾವುದೇ ತೊಂದರೆ ಇಲ್ಲ.

Advertisement

ಹಿಂದೆ ಒಂದು ಕಾಲವಿತ್ತು. ಆಗ ಕೊಳವೆ ಬಾವಿಗಳಿರಲಿಲ್ಲ. ಕುಡಿಯುವ ನೀರಿಗಾಗಿ ಬಾವಿಗಳು ಹಾಗೂ ಕೆರೆಗಳನ್ನು ಕಟ್ಟಿಸುತ್ತಿದ್ದರು. ಆದರೆ ಕಾಲಾಂತರದಲ್ಲಿ ಬಾವಿಗಳು ಹಾಗೂ ಕೆರೆಗಳು ಕಣ್ಮರೆಯಾಗಿವೆ. ಈಗ ಬಾವಿಗಳ ಹಾಗೂ ಕೆರೆಗಳನ್ನು ಹುಡುವ ಸ್ಥಿತಿ ಬಂದಿದೆ. ಆದರೆ ಕೊಪ್ಪಳ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಈಗಲೂ ಸಹ ಕುಡಿವ ನೀರಿಗಾಗಿ ಜನರು ಪುರಾತನವಾಗಿರುವ ಕೆರೆಗಳನ್ನೇ ಆಶ್ರಯಿಸಿದ್ದಾರೆ.

40 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಕೆರೆಯೇ ಆಧಾರ : ಇಲ್ಲಿಯ ಜನರು ಕುಡಿಯಲು ಕೆರೆ ನೀರನ್ನೆ ಬಳಸುತ್ತಾರೆ. ಕೆರೆಯ ನೀರು ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವನೆ ಇದೆ. ಇದೇ ಕಾರಣಕ್ಕೆ ಗ್ರಾಮಸ್ಥರು ತಮ್ಮೂರಿನ ಕೆರೆಯನ್ನು ಮುತುವರ್ಜಿ ವಹಿಸಿ ಸಂರಕ್ಷಿಸುತ್ತಿದ್ದಾರೆ. ಕೊಪ್ಪಳ ತಾಲೂಕಿನ ಕವಲೂರು, ಅಳವಂಡಿ, ಕುಕನೂರು ತಾಲೂಕಿನ ಬಿನ್ನಾಳ, ಯರೇಹಂಚಿನಾಳ, ಬನ್ನಿಕೊಪ್ಪ, ಯಲಬುರ್ಗಾ ತಾಲೂಕಿನ ಕರಮುಡಿ ಸೇರಿ ಸುಮಾರು 40 ಹಳ್ಳಿಗಳಲ್ಲಿ ಈಗಲೂ ಜನರಿಗೆ ಕುಡಿವ ನೀರನ್ನು ಕೆರೆಗಳಿಂದಲೇ ನೀಡಲಾಗುತ್ತಿದೆ. ಈ ಗ್ರಾಮಗಳಲ್ಲಿ ಹಿಂದಿನ ಕಾಲದಲ್ಲಿಯೇ ಹಿರಿಯರು ತಮ್ಮ ಗ್ರಾಮಗಳ ಜನರಿಗಾಗಿ ಕಟ್ಟಿಸಿರುವ ಕೆರೆಗಳನ್ನು ಸಂರಕ್ಷಿಸುತ್ತಿದ್ದಾರೆ.

ಕೆರೆಗೆ ಇದೆ ಕಾವಲು : ಕಾಲಮಾನ ಬದಲಾದಂತೆ ಕೆರೆಗಳ ಸುತ್ತಲು ಒಡ್ಡುಗಳನ್ನು ಹಾಕಿಕೊಂಡು ಕೆರೆಗೆ ತಂತಿ ಬೇಲೆ ಹಾಕಿಕೊಂಡಿದ್ದಾರೆ. ಮಳೆಗಾಲದಲ್ಲಿ ಮಳೆಯ ನೀರು ಈ ಕೆರೆಗಳಿಗೆ ಬಂದು ತುಂಬಿಕೊಳ್ಳುತ್ತವೆ. ಅದಕ್ಕಾಗಿ ಈಗ ಜನಸಂಖ್ಯೆ ಹೆಚ್ಚಾದಂತೆ ಕೆರೆಯ ನಾಲಾವನ್ನು ವಿಸ್ತರಿಸಿದ್ದಾರೆ. ಕೆಲವು ಕೆರೆಗಳನ್ನು ಕಾಯುವದಕ್ಕಾಗಿ ಒಬ್ಬೊಬ್ಬರನ್ನು ನೇಮಿಸಿಕೊಂಡಿದ್ದಾರೆ.

Advertisement

ಒಂದು ವರ್ಷಕ್ಕೆ ಬೇಕಾಗುವಷ್ಟು ನೀರು ಸಂಗ್ರಹ : ಪ್ರತಿ ವರ್ಷ ಮಳೆಗಾಲದ ಮುನ್ನ ಕೆರೆಗೆ ಬರುವ ನೀರಿನ ನಾಲಾ ಸ್ವಚ್ಛತೆ, ಕೆರೆಯಲ್ಲಿ ಗಲೀಜು ಮಾಡದಂತೆ ಸುತ್ತಲು ಜಂಗಲ್‌ನ್ನು ಕತ್ತರಿಸಿರುತ್ತಾರೆ. ಕೆರೆಯಲ್ಲಿ ಹೂಳು ತೆಗೆಸಿ ಕೆರೆಯನ್ನು ಒಂದು ವರ್ಷಕ್ಕೆ ಬೇಕಾಗುವಷ್ಟು ನೀರು ಸಂಗ್ರಹಿಸುತ್ತಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಕೆರೆಗಳನ್ನು ತುಂಬಿಸಿಕೊಂಡು ಬೇಸಿಗೆಯಲ್ಲಿ ಈ ನೀರನ್ನು ಬಳಸುತ್ತಾರೆ.

Advertisement

ಕಹಿ ನೆನಪು ಮರುಕಳಿಸದಂತೆ ತಡೆ : ಕಳೆದ ಹತ್ತು ವರ್ಷಗಳ ಹಿಂದೆ ಇದೇ ಕೆರೆಗಳನ್ನು ಆಶ್ರಯಿಸಿದವರಿಗೆ ಕುಡಿವ ನೀರಿನ ಸಮಸ್ಯೆ ಇತ್ತು. ಹೂಳು ತುಂಬಿದ್ದರಿಂದ ನೀರು ನಿಲ್ಲುತ್ತಿರಲಿಲ್ಲ. ಆಗ ಗ್ರಾಮಗಳಲ್ಲಿ ಕುಡಿವ ನೀರಿಗೆ ಹಾಹಾಕಾರ. ಬಸ್‌ಗಳ ಮೂಲಕ ಪಕ್ಕದ ಊರಿಗೆ ಹೋಗಿ ನೀರು ತರುತ್ತಿದ್ದರು. ಕೆರೆಯ ನೀರಿಗಾಗಿ ಗಲಾಟೆಯಾಗಿರುವ ಉದಾಹರಣೆ ಇದೆ. ಆದರೆ ಈಗ ಕಾಲ ಬದಲಾಗಿದೆ. ಹಿಂದಿನ ಕಹಿ ನೆನಪು ಮರುಕಳಿಸದಂತೆ ಕೆರೆಗಳಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಕಪ್ಪು ಭೂಮಿ ಹೊಂದಿರುವ ಪ್ರದೇಶದಲ್ಲಿ ಈ ದೃಶ್ಯ ಸಾಮಾನ್ಯವಾಗಿದೆ. ಎರೆಭೂಮಿಯಲ್ಲಿ ಹರಿದು ಬರುವ ನೀರು ತಿಳಿಯಾಗಿರುತ್ತದೆ. ಅಲ್ಲದೇ ಕೆರೆಯಲ್ಲಿ ನೀರು ನಿಲ್ಲಿಸುತ್ತಿರುವದರಿಂದ ಈ ನೀರು ತಿಳಿಯಾಗಿರುತ್ತದೆ. ಇದೇ ನೀರನ್ನು ಹಿಂದಿನ ಕಾಲದಿಂದಲೂ ಜನರು ಕುಡಿಯುತ್ತಿದ್ದಾರೆ. ಈ ಮಧ್ಯೆ ಈ ಭಾಗದಲ್ಲಿ ನದಿಯ ಮೂಲಕ ನೀರನ್ನು ಸಹ ಇದೇ ಕೆರೆಗಳಿಗೆ ತುಂಬಿಸುತ್ತಿರುವದರಿಂದ ಈ ಬಾರಿಯ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆಯಾಗುವುದಿಲ್ಲ. ಕೆರೆಯಲ್ಲಿ ನೀರು ಕಡಿಮೆಯಾದರೆ ಆಗ ನದಿಗಳ ಮೂಲಕ ನೀರು ತುಂಬಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …

2 minutes ago

15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ

ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ  ತಪಾಸಣೆ…

1 hour ago

ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?

ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…

7 hours ago

ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು

ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…

14 hours ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…

14 hours ago

ತುಳುವರ ಆಟಿ ತಿಂಗಳು | ಆಟಿಯ ಕೊನೆಗೆ ಆಟಿಗೊಂದು ಸುತ್ತು….

ತುಳುನಾಡಿನಲ್ಲಿ ಆಟಿ ಬಹಳ ಮಹತ್ವದ ತಿಂಗಳು. ಈ ಸಮಯದಲ್ಲಿ ವಿವಿಧ ಆಚರಣೆಗಳು ಇರುತ್ತವೆ.…

14 hours ago