ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಸುಲಲಿತ ವಾಹನ ಸಂಚಾರಕ್ಕಾಗಿ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ಕೋರಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೇಂದ್ರ ಸರಕಾರವನ್ನು ಮನವಿ ಮಾಡಿದ್ದಾರೆ. ಈಚೆಗೆ ಬೊಮ್ಮಾಯಿ ಅವರು ದೆಹಲಿ ಭೇಟಿಯ ವೇಳೆ ಕೇಂದ್ರ ಸಚಿವರನ್ನು ಭೇಟಿಯಾದ ಸಂದರ್ಭ ಮನವಿ ಮಾಡಿದ್ದಾರೆ.
ಜಪಾನ್ ಸರ್ಕಾರದ ಸಹಯೋಗದೊಂದಿಗೆ ಬಂದರು ನಗರ ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾದ ಶಿರಾಡಿ ಘಾಟ್ ವಿಭಾಗದ ಸುರಂಗ ಬೈಪಾಸ್ ನಿರ್ಮಾಣಕ್ಕೆ ಸಿಎಂ ಅನುಮೋದನೆ ಕೋರಿದ್ದಾರೆ. ಈ ಯೋಜನೆಯ ಬಂಡವಾಳ ವೆಚ್ಚ ಸುಮಾರು 10,146 ಕೋಟಿ ರೂಪಾಯಿ ಆಗಿದೆ. ಹಲವು ವರ್ಷಗಳಿಂದ ಈ ಯೋಜನೆಯ ಪ್ರಸ್ತಾಪ ಇದೆ. ಪರಿಸರದ ಮೇಲೆ ಯಾವುದೇ ಹಾನಿಯಾಗದಂತೆ ಜಪಾನ್ ಮಾದರಿಯಲ್ಲಿ ಈ ಯೋಜನೆ ಅನುಷ್ಟಾನದ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗಿನ ಸಭೆ ಬಳಿಕ ಮಾತನಾಡಿದ ಸಿಎಂ, ಭೂಸ್ವಾಧೀನ ಮತ್ತು ಇತರ ಸಮಸ್ಯೆಗಳಿಂದಾಗಿ ಬಾಕಿಯಾದ ಯೋಜನೆಗಳ ಬಗ್ಗೆ ರಾಜ್ಯಕ್ಕೆ ಕಾಳಜಿ ಇದೆ, ಈ ಯೋಜನೆಗಳ ಕಡೆಗೂ ಗಮನಹರಿಸಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಭೂಸ್ವಾಧೀನಕ್ಕೆ ಶೇಕಡಾ 30 ರಷ್ಟು ವೆಚ್ಚವನ್ನು ಭರಿಸಲು ನಿರ್ಧರಿಸಿದೆ ಮತ್ತು ರಸ್ತೆ ನಿರ್ಮಾಣ ಸಾಮಗ್ರಿಗಳ ಮೇಲೆ ವಿಶೇಷವಾಗಿ ಸ್ಟೀಲ್, ಸಿಮೆಂಟ್, ಮರಳು ಮತ್ತು ಒಟ್ಟು ಮೊತ್ತದ ಮೇಲೆ ರಾಜ್ಯ ಜಿಎಸ್‌ಟಿ ವಿನಾಯಿತಿಗಾಗಿ ಸುಮಾರು 1,000 ಕೋಟಿ ರೂ ನಿಗದಿ ಪಡಿಸುವ ಯೋಜನೆ ಹೊಂದಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…