ನಾನೊಬ್ಬಳು ದ್ವಿತೀಯ ಪಿಯುಸಿ ಹುಡುಗಿ ಪರೀಕ್ಷೆಯ ದಿನದ ಸಮಯದಲ್ಲಿ ನಾನೊಬ್ಬಳೇ ಮನೆಯಲ್ಲಿ ಓದುವ ಕ್ಷಣ. ಸಂಬಂಧಿಕರ ಮನೆಯಲ್ಲಿ ವಿಜ್ರಂಭಣೆಯಿಂದ ನಡೆಯುವ ಮದುವೆ ಸಮಾರಂಭಕ್ಕೆ ಮನೆಯವರೆಲ್ಲಾ ನೀನು ಬರಬೇಡ ನಿನಗೆ ಪರೀಕ್ಷೆರಲ್ಲವೇ ಓದಿ ಎಲ್ಲಾ ಮುಗಿಸು ಯಾರು ಇರಲ್ಲ ಮನೆಯಲ್ಲಿ ಯಾರದ್ದೂ ಸಹ ಕಿರಿಕಿರಿ ಗಲಭೆಗಳಿಲ್ಲವಲ್ಲ ಎಂದು ಹೊರಟು ಹೋದರು.
ನಾನು ಕೋಪ ಬೇಜಾರವನ್ನು ಮುಂದಿಟ್ಟುಕೊಂಡು ಮನಸಿಲ್ಲದಿದ್ದರು ಓದಿ ಮುಗಿಸುವೆ ಎಂದು ಕುಳಿತುಕೊಂಡೆ. ಓದಲು ಕೂತ ಕ್ಷಣ ಒಂದು ಮಾತ್ರ ನೆನಪು ಇದೆ…. ಮತ್ತೇನಾಯಿತು ಎಂದು ಅರಿವಿಲ್ಲ. ಹೊಟ್ಟೆಗೆ ಊಟ, ನೀರು ಇಲ್ಲದೆ ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಕುಳಿತುಕೊಂಡು ಓದಿರೋದರಲ್ಲಿ ಕಣ್ಣು ಮುಚ್ಚಿ ನಿದ್ದೆ ಹೋಗಿರುವುದು ಗೊತ್ತೇ ಇಲ್ಲ.
ಎಚ್ಚರವಾದಾಗ ಎದ್ದು ನೋಡಿದರೇ ಏನೂ ಗೊತ್ತಾಗುತ್ತಿಲ್ಲ ಓದಲು ಹಿಡಿದಿದ್ದ ಪುಸ್ತಕಗಳು ಎಲ್ಲಾ ಹರಿದು ನೆಲದಲ್ಲಿ ಉರುಳಿ ಬಿದ್ದಿದೆ. ಬಾಗಿಲು ಕಿಟಕಿಗಳೆಲ್ಲ ತೆರೆದು ಗಾಳಿಗೆ ಬಡಿಯುತ್ತಾ ಶಬ್ದ ಬರುತ್ತಿತ್ತು. ಗಡಿಯಾರದ ಕಡೆ ಕಣ್ಣು ಹಾಯಿಸಿದರೆ ಒಂದು ಕ್ಷಣ ಎದೆಗೆ ಬಡಿದಂತಿತ್ತು. ಹೊತ್ತು ದಾಟಿ ರಾತ್ರಿ 8 ಗಂಟೆ ಆಗಿ ಬಿಟ್ಟಿತ್ತು.
ಮನೆಯಲ್ಲಾ ಹುಡುಕಾಡಿದರೂ ಅಮ್ಮ ಸಿಗಲೇ ಇಲ್ಲ. ಅಮ್ಮ ಸಂಬಂಧಿಕರ ಮನೆಗೆ ಹೋಗಿರುವುದನ್ನು ಮರೆತುಬಿಟ್ಟು ಹುಡುಕಾಡಿರುವೆ ಎಂದು ತಡವಾಗಿ ಅರಿವಾಯಿತು. ಕಣ್ಣೀರು ಹಾಕುತ್ತಲೇ ತಿನ್ನಲು ಏನಾರು ಮಾಡಬೇಕೆಂದು ಅಡುಗೆ ಮನೆ ಕಡೆಗೆ ಹೋಗುವೆ. ಮಾಡಲು ಏನೂ ಗೊತ್ತಿಲ್ಲದಿದ್ದರೂ, ಮಾಡಿಕೊಂಡು ತಿನ್ನುವುದು ಅನಿವಾರ್ಯವಾಗಿದ್ದರಿಂದ ಅನ್ನ ಬೇಯಿಸಿ ಹೆಂಗೋ ಒಂದು ಸಪ್ಪೆ ಸಪ್ಪೆಯಾದ ಸಾಂಬಾರು ಮಾಡಿ ಊಟ ಮಾಡಿದೆ ಅದು 10 ಗಂಟೆ ಕಳೆದ ನಂತರ.
ಇನ್ನೂ ಮಲಗುವುದಾ… ಅಲ್ಲಾ… ಓದುವುದಾ ಎಂದು ಅರಿತಿಲ್ಲ… ಈಚೆ ನೋಡಿದರೆ ನಾಳೆಯ ಪರೀಕ್ಷೆಗೆ ಬೇಕಾದ ಪಾಠಗಳೇ ಓದಿ ಆಗಿಲ್ಲ. ಮಲಗುದು ಎಂದರೇ ಮನೆಯಲ್ಲಿ ಯಾರಿಲ್ಲ ಎಂಬ ಭಯ. ಈ ಕರಾಳ ದಿನ ಎಂದೂ ನನಗೆ ಬರುವುದು ಬೇಡ ಎಂದೂ ದೇವರ ಮೊರೆ ಹೋದೆ.
ದೇವರನ್ನು ಪ್ರಾರ್ಥಿಸುವಾಗಲೇ ಹೊರಗಡೆಯಿಂದ ಏನೋ ವಿಚಿತ್ರ ಧ್ವನಿಯಲ್ಲಿ ನಾಯಿಗಳ ಕೂಗು. ಹೊರಗಡೆಯೂ ಹೋಗದೇ ಕುಳಿತಲ್ಲೇ ಕಣ್ಣು ಮುಚ್ಚಿ ಜೋರಾಗಿ ಅಳುತ್ತಾ ಅಲ್ಲೇ ಕುಳಿತೇ. ಭಯದಲ್ಲಿ ಅದೊಂದು ರಾತ್ರಿಯನ್ನು ಕಳೆದುಕೊಂಡಿರುವೆ.
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ…