#Chandrayaan3Success | ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್ | ಪ್ರಧಾನಿ ಮೋದಿಯಿಂದ ಇಸ್ರೋ ಸಾಧನೆಗೆ ಸಲಾಂ

August 23, 2023
6:54 PM
ಚಂದ್ರಯಾನ 3ರ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಬ್ರಿಕ್ಸ್​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದು, ಅಲ್ಲಿಂದಲೇ ಇಸ್ರೋ ಯಶಸ್ಸಿನ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಭಾರತ ಈಗ ಚಂದ್ರನಲ್ಲಿದೆ ಅಂತ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ-3 ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ, ಸಂತಸ ವ್ಯಕ್ತಪಡಿಸಿದ್ದು, ಅಮೃತಕಾಲದಲ್ಲಿ ಯಶಸ್ಸಿನ ಅಮೃತ ಸುರಿದಿದೆ ಎಂದು ಬಣ್ಣಿಸಿದರು. ಬ್ರಿಕ್ಸ್ ಶೃಂಗಸಭೆ ಪ್ರಯುಕ್ತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಮೋದಿ ಅವರು ಜೊಹಾನ್ಸ್​ಬರ್ಗ್​​ನಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ #ISRO ವಿಜ್ಞಾನಿಗಳು ಹಾಗೂ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

Advertisement
Advertisement

ಚಂದ್ರಯಾನ ಮಿಷನ್ ಚಂದ್ರನ ಮೇಲೆ ಕಾಲಿಟ್ಟ ನಂತರ ಪ್ರಧಾನಿ ಮೋದಿ ಅವರು ಇಸ್ರೋ ಮತ್ತು ಇಡೀ ದೇಶವನ್ನು ಅಭಿನಂದಿಸಿದ್ದಾರೆ. ಈ ಕ್ಷಣ ಅಭೂತಪೂರ್ವ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ನವ ಭಾರತದ ಹೊಸ ಯುಗಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಕ್ಷಣ ಭಾರತದ ಹೊಸ ವೈಭವ. ಕಷ್ಟಗಳ ಸಾಗರವನ್ನು ದಾಟಿದ ಕ್ಷಣ ಇದಾಗಿದೆ. ಇಂತಹ ಐತಿಹಾಸಿಕ ಕ್ಷಣವನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಜತೆಗೆ, ಇದು ನವ ಭಾರತದ ಸೂರ್ಯೋದಯ ಎಂದು ಬಣ್ಣಿಸಿದರು.

ಪ್ರತಿಯೊಬ್ಬ ಭಾರತೀಯನೂ ಇಂದು ಸಂಭ್ರಮ ಆಚರಿಸುತ್ತಿದ್ದಾನೆ. ಪ್ರತಿ ಮನೆಯೂ ಆಚರಿಸುತ್ತಿದೆ. ಈ ಹೆಮ್ಮೆಯ ಕ್ಷಣದಲ್ಲಿ ನಾನು ನನ್ನ ದೇಶದ ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಇದು ಹೊಸ ಯುಗದ ಉದಯವಾಗಿದೆ ಎಂದು ಮೋದಿ ಹೇಳಿದರು. ಈ ಹಿಂದೆ ಯಾವುದೇ ದೇಶವು (ಚಂದ್ರನ ದಕ್ಷಿಣ ಧ್ರುವ) ಅಲ್ಲಿಗೆ ತಲುಪಿಲ್ಲ. ಕಠಿಣ ಪರಿಶ್ರಮದಿಂದ ನಮ್ಮ ವಿಜ್ಞಾನಿಗಳನ್ನು ನಾವು ಅಲ್ಲಿಗೆ ತಲುಪಿದ್ದೇವೆ ಎಂದು ಮೋದಿ ಹೇಳಿದರು. ಈ ಅಭೂತಪೂರ್ವ ಸಾಧನೆಗಾಗಿ ನಾನು ಇಸ್ರೋ ಮತ್ತು ಅದರ ವಿಜ್ಞಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಪ್ರಧಾನಿ ತಮ್ಮ ವರ್ಚುವಲ್ ಭಾಷಣದಲ್ಲಿ ಹೇಳಿದರು. ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಐತಿಹಾಸಿಕ ದಿನ. ಚಂದ್ರಯಾನ-3 ಗಮನಾರ್ಹ ಯಶಸ್ಸಿಗಾಗಿ ಇಸ್ರೋಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಟ್ವೀಟ್​ ಸಹ ಮಾಡಿದ್ದಾರೆ.

ಚಂದ್ರಯಾನದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಲಿಂಕ್ ಮೂಲಕ ಇಸ್ರೋ ವಿಜ್ಞಾನಿಗಳ ಸಂಭ್ರಮಕ್ಕೆ ಜತೆಯಾದರು.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ
ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ
May 22, 2025
9:45 PM
by: ದ ರೂರಲ್ ಮಿರರ್.ಕಾಂ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸುರಿದ ಮಳೆಗೆ 63 ಕೆರೆಗಳು ಭರ್ತಿ
May 22, 2025
9:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group