ಅಡುಗೆ ಮನೆಯಲ್ಲಿ ಉಪ್ಪಿನಕಾಯಿ ಇಲ್ಲದಿದ್ದರೆ ಆದೀತೇ? ಬೇರೆ ಏನೂ ಇಲ್ಲದಿದ್ದರೂ ಒಂದು ತುಂಡು ಉಪ್ಪಿನಕಾಯಿ, ನೀರು ಮಜ್ಜಿಗೆ ಇದ್ದರೆ ನಮಗೆ ಮೃಷ್ಟಾನ್ನವೇ.
ಮಾವಿನ ಹಣ್ಣಿನ ಕಾಲದಲ್ಲಿ ನಿತ್ಯ ಏನಾದರೊಂದು ಬಗೆ ಮಾಡಿ ಉಣಬಡಿಸದಿದ್ದರೆ ಮನೆಯಾಕೆಗೆ ಖಂಡಿತಾ ಹಿತವೆನಿಸದು. ತೋಟದ ಮೂಲೆಯ ಮರದಲ್ಲಿ ಬಿದ್ದ ಕಾಡು ಮಾವಿನ ಹಣ್ಣುಗಳನ್ನು ನಸುಕಿನಲ್ಲೇ ಹೆಕ್ಕಿ…
ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ ಬದಲಾವಣೆಗೆ ಒಗ್ಗಿದವರು ಬೇಗ ಸಂಸಾರದಲ್ಲಿ ಗೆಲ್ಲುತ್ತಾರೆ. ಹೊಂದಿ ಕೊಳ್ಳಲು ಕಷ್ಟವಾದವರು ಸಂಸಾರದಲ್ಲಿ ಸೋಲುತ್ತಾರೆ.
ಅಡುಗೆಯ ಮಾಪಕಗಳು ಒಂದೊಂದು ಮನೆಗೆ ಒಂದೊಂದು ರೀತಿ ಇರುತ್ತವೆ. ಅವುಗಳ ಕಡೆಗೆ ನಿಗಾ ಅಗತ್ಯ. ಕಿಟಕಿಯ ಒಳಗೆ ಮನಸ್ಸು ಸದಾ ನೋಡುತ್ತಿರಬೇಕು ಅದು.
ಮಹಿಳೆಯ ಸುರಕ್ಷಾ ವಲಯವೆಂದರೆ ಅದು ಅಡುಗೆ ಕೋಣೆ. ಈ ಅಡುಗೆ ಕೋಣೆಯೇ ಎಲ್ಲವೂ. ಇಂದಿನ ದಿನ ಎಲ್ಲವೂ ಇದೆ. ಸಣ್ಣ ಕಿಟಕಿಯಿಂದ ದೊಡ್ಡ ಕಿಟಕಿಗೆ ತಲಪಿದೆ ಅಡುಗೆ…