ಇತ್ತೀಚೆಗೆ ಹೆಚ್ಚಿನ ಯುವಕರು(youths) ಕೃಷಿಯತ್ತ(Agriculture) ಒಲವು ತೋರಿಸುತ್ತಿದ್ದಾರೆ. ಹಾಗೆ ಈಗಾಗಲೇ ಕೃಷಿಯಲ್ಲಿ ತೊಡಗಿರುವ ರೈತರು(Farmer) ರಾಸಾಯನಿಕ ಕೃಷಿ(Chemical) ಬಿಟ್ಟು ನೈಸರ್ಗಿಕ ಕೃಷಿಯತ್ತ(Natural Farming) ಮರಳುತ್ತಿದ್ದಾರೆ. ಸಾಮಾನ್ಯವಾಗಿ ಕೆಲ ತರಬೇತಿ, ಮಾಹಿತಿಗಳು(Information) ಕೆಲವೊಮ್ಮೆ ಬೇಕಾಗುತ್ತದೆ. ಅಂತವರಿಗಾಗಿಯೇ ಅನೇಕ ಕೃಷಿ ಸಂಘಗಳು, ನಿಪುಣ ರೈತರು ಕೆಲವು ಕಾರ್ಯಕ್ರಮ, ತರವೇತಿ(Training), ಕಾರ್ಯಗಾರ(Workshop), ಶಿಬಿರ ಹಾಗೂ ಕೃಷಿ ಪ್ರವಾಸೋದ್ಯಮದಂತಹ(Agri tourism) ಅನುಕೂಲಗಳನ್ನು ಮಾಡುತ್ತಿದ್ದಾರೆ. ಇಲ್ಲಿ ನೋಡಿ ಅಂತದೇ ಒಂದು ಅವಕಾಶ ಕೃಷಿಕರಿಗಾಗಿ..
ಪರಿಸರ ಸ್ನೇಹಿ ಕೃಷಿ ,ಕೃಷಿಯನ್ನು ಪ್ರಮುಖ ಉದ್ಯೋಗವನ್ನಾಗಿಸಿಕೊಂಡು ಆದಾಯ ಪಡೆಯುವುದು, ಮಣ್ಣಿನ ಪ್ರಾಮುಖ್ಯತೆ ಮತ್ತು ಕೃಷಿಗೆ ಬೇಕಾದ ಮಣ್ಣು ಸಿದ್ದಪಡಿಸಿಕೊಳ್ಳುವ ಮಾಹಿತಿ , ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟದ ಸವಾಲುಗಳು ಮತ್ತು ಅವಕಾಶ, ಹವಾಮಾನ ವೈಪರೀತ್ಯದಿಂದ ಕೃಷಿ ವಲಯದ ಮೇಲೆ ಬೀಳುತ್ತಿರುವ ಹೊರೆ , ಹವಾಮಾನ ಬದಲಾವಣೆ ನಿಟ್ಟಿನಲ್ಲಿ ನಮ್ಮ ಕೃಷಿಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಮೈಸೂರಿನ ಪರಿಸರ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನೈಸರ್ಗಿಕ ಕೃಷಿ ಮತ್ತು ಮಣ್ಣು ಸಂರಕ್ಷಣೆ” ವಿಚಾರವಾಗಿ ನಾಲ್ಕು ದಶಕಗಳ ಕಾಲ ಮಣ್ಣು ಮತ್ತು ಕೃಷಿಯೊಂದಿಗೆ ಅನುಭವವಿರುವ ಸಾಧಕರೊಂದಿಗೆ ಮಾತುಕತೆ ಏರ್ಪಡಿಸಲಾಗಿದೆ.ಡಿ.12 ರಂದು ಮೈಸೂರಿನ ಸರಸ್ವತಿಪುರಂ ಜೆ ಎಸ್ ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಾತುಕತೆ ನಡೆಸುವ ಸಾಧಕರು:
* ಡಾ ರಾಮಕೃಷ್ಣಪ್ಪ, ಅಧ್ಯಕ್ಷರು,ಬೆಳವಲ ಪರಿಸರ ಕೇಂದ್ರ,ಮೈಸೂರು.
* ಡಾ ಚಂದ್ರಶೇಖರ, ಇಂದ್ರಪ್ರಸ್ಥ ಸಾವಯವ ಕೃಷಿ ತೋಟ,ಮೈಸೂರು.
* ಶಿವಾನಂಜಯ್ಯ ಬಾಳೇಕಾಯಿ,ಸಹಜ ಕೃಷಿಕರು, ತುಮಕೂರು.
ಹೆಚ್ಚಿನ ಮಾಹಿತಿಗೆ ಗಂಟಯ್ಯ : 9538732852, ಅವಿನಾಶ್:8197856132
-ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು
ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…
ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…
ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಬೆಂಗಳೂರು, ಶಿವಮೊಗ್ಗ, ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ…
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…