Advertisement
Exclusive - Mirror Hunt

ಇಂಜಿನಿಯರ್‌ ಆರಂಭಿಸಿದ “ಹಲಸಿನ ಕತೆಗಳು ” | ಹಲಸನ್ನು ಜೀರೋ ವೇಸ್ಟೇಜ್‌ ಪ್ರಾಡಕ್ಟ್‌ ಮಾಡುವ ಕನಸು |

Share

ಹಲಸು ಇಂದು ಆಹಾರ ಬೆಳೆಯಾಗೂ, ಆಕರ್ಷಕ ಬೆಳೆಯಾಗು ಹಬ್ಬುತ್ತಿದೆ. ಕೇರಳದಲ್ಲಿ ಹಲಸು ಉದ್ಯಮಗಳು ಸಾಕಷ್ಟು ಬೆಳೆದಿವೆ. ಕರ್ನಾಟಕದಲ್ಲಿ ಇನ್ನೂ ಬೆಳೆಯುವ ಹಂತದಲ್ಲಿದೆ. ಈಗ ಯುವ ಕೃಷಿಕರನ್ನೂ ಹಲಸು ಉದ್ಯಮ ಆಕರ್ಷಿಸುತ್ತಿದೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ನೀರ್ಚಾಲಿನ ಅಜೇಯ ಶಂಕರ ಖಂಡಿಗೆ ಅವರು ಈಗ ಹಲಸು ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.…..ಮುಂದೆ ಓದಿ….

ಕಾಸರಗೋಡು ಜಿಲ್ಲೆಯ ನೀರ್ಚಾಲು ಬಡಗಮೂಲೆಯ ಅಜೇಯ ಶಂಕರ್‌ ಅವರು 2018 ರಲ್ಲಿ ಇಂಜಿನಿಯರಿಂಗ್‌ ಮುಗಿಸಿದ ಯುವಕ. ಇಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಇಂಜಿನಿಯರಿಂಗ್‌ ಓದಿದ ಬಳಿಕ ಮುಂದೆ ಏನು ಎಂಬುದರ ಯೋಜನೆಗೇ ಹೋಗಲಿಲ್ಲ. ಹಲಸು ಉದ್ಯಮಕ್ಕೆ ಇಳಿದರು. ಅದಕ್ಕೂ ಹಿಂದೆ ಅಜಯ್‌ ಅವರ ತಾಯಿ ಕನಕವಲ್ಲಿ ಗೃಹ ಉದ್ಯಮದ ಮಾದರಿಯಲ್ಲಿ ಹಪ್ಪಳ ತಯಾರಿ ಮಾಡುತ್ತಿದ್ದರು. ಬಿಡುವಿದ್ದಾಗ ಮನೆಯಲ್ಲಿ ಹಾಳಾಗಿ ಹೋಗುವ ಹಲಸಿಗೆ ಮಾನ ತಂದಿದ್ದರು. ಹೀಗಾಗಿ ಹಪ್ಪಳದ ವ್ಯವಹಾರದ ಬಗ್ಗೆ ಅಜೇಯ ಶಂಕರ ತಿಳಿದುಕೊಂಡಿದ್ದರು. ಹೀಗಾಗಿ ಓದಿನ ಬಳಿಕ ನೇರವಾಗಿ ಹಲಸು ಉದ್ಯಮವನ್ನೇ ಆರಂಭಿಸಿದರು. ತಂದೆ ಈಶ್ವರ ಭಟ್‌ ಖಂಡಿಗೆ ಅಜೇಯ ಅವರ ಆಕಾಂಕ್ಷೆಗೆ ಬೆಂಬಲವಾಗಿಯೂ ನಿಂತರು.

ಅಜೇಯ ಶಂಕರ್‌, ಖಂಡಿಗೆ

ರಬ್ಬರ್‌, ಅಡಿಕೆ ಕೃಷಿ ಸಹಿತ ಕೊಕೋ ಕೃಷಿಯನ್ನೂ ಹೊಂದಿರುವ ಈಶ್ವರ ಭಟ್‌ ಅವರಿಗೆ ಪುತ್ರನ ಹಲಸು ಉದ್ಯಮದ ಕಾರಣದಿಂದ ತಮ್ಮ ಜಮೀನಿನಲ್ಲಿ ಹಲಸು ಗಿಡವನ್ನೂ ನಾಟಿ ಮಾಡಲು ಆರಂಭಿಸಿದ್ದರು. ಹೀಗಾಗಿ ಕಳೆದ ವರ್ಷದವರೆಗೆ ಸುಮಾರು 700 ಹಲಸು ಗಿಡ ನಾಟಿ ಮಾಡಿದ್ದರು, 1000 ಗಿಡ ಬೆಳೆಸುವ ಇರಾದೆಯನ್ನು ವ್ಯಕ್ತಪಡಿಸುತ್ತಾರೆ.

ಅಜೇಯ ಶಂಕರ ಅವರು ಆರಂಭದಲ್ಲಿ ತಾಯಿ ಕನಕವಲ್ಲಿ ಅವರು ಮಾಡುತ್ತಿದ್ದ ಹಪ್ಪಳವನ್ನೇ ಉದ್ಯಮದ ಮೂಲಕ ಮಾರುಕಟ್ಟೆಗೆ ಇಳಿದರು. ತಮ್ಮ ಉದ್ಯಮಕ್ಕೆ”ಜ್ಯಾಕ್‌ ಟೇಲ್”‌ ಎಂದೂ ಹೆಸರು ಇರಿಸಿದರು. ನಂತರ ಸೆಂಡಿಗೆ ಹಾಗೂ ಆರಂಭಿಸಿದ್ದರು. ಮುಂದೆ ಹಲಸು ಜೀರೋ ವೇಸ್ಟೇಜ್‌ ಐಟಂ ಆಗಲು ಏನೆಲ್ಲಾ ಮಾಡಬೇಕು ಅದನ್ನು ಮಾಡುತ್ತೇನೆ ಎನ್ನುತ್ತಾರೆ.

2021 ರಲ್ಲಿ ಈ ಯುವಕ ಹಲಸು ಉದ್ಯಮ “ಜ್ಯಾಕ್‌ ಟೇಲ್”‌ ಆರಂಭಿಸಿದರು. 6 ಜನ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ. ಹಲಸು ಕೀಳಲು 2-3 ಜಬ ಬರುತ್ತಾರೆ. ಬೆಳೆದ ಹಲಸಿನ ಕಾಯಿಯನ್ನು ತಮ್ಮ ತೋಟದಿಂದ ಅಥವಾ ಆಸುಪಾಸಿನ ಕೃಷಿಕರ ತೋಟದಿಂದ ಬೆಳಗ್ಗೆ ಹೋಗಿ ತರುತ್ತಾರೆ. ಹಲಸು ತಮ್ಮ ಪ್ಯಾಕ್ಟರಿಗೆ ಬಂದ ಬಳಿಕ ಅದನ್ನು ಕೊರೆದು ಮುಂದಿನ ಹಂತಗಳು ನಡೆಯುತ್ತದೆ. ಅದನ್ನು ಕಾರ್ಮಿಕರು ಮಾಡುತ್ತಾರೆ. ಆ ಬಳಿಕ ಹಪ್ಪಳ, ಸೆಂಡಿಗೆ ತಯಾರಿ ಆಗುತ್ತದೆ. ವರ್ಷಪೂರ್ತಿ ಹಲಸಿನ ಹಪ್ಪಳ ಮಾಡಲು ಆಗುವುದಿಲ್ಲ, ಅಷ್ಟೊಂದು ಹಲಸು ಇಲ್ಲ ಎನ್ನುವ ಅಜೇಯ, 4-6 ತಿಂಗಳ ಹಲಸು ಹಪ್ಪಳ ಮಾಡಿ ನಂತರ ಮರಗೆಣಿಸಿನ ಹಪ್ಪಳ, ಗೆಣಸಿನ ಹಪ್ಪಳ ಮಾಡಲಾಗುತ್ತದೆ ಎನ್ನುತ್ತಾರೆ.ಸದ್ಯ ಸೆಮಿ ಅಟೋಮೆಟಿಕ್‌ ಯಂತ್ರದ ಮೂಲಕ ಹಲಸು ಉದ್ಯಮ ನಡೆಯುತ್ತಿದೆ.…..ಮುಂದೆ ಓದಿ….

ಹಪ್ಪಳ ಸಹಿತ ಇತರ ಎಲ್ಲಾ ಹಲಸಿನ ಉತ್ಪನ್ನಗಳು ಬೆಂಗಳೂರು ಹಾಗೂ  ದೇಶದ ಎಲ್ಲೆಡೆಗೂ ಕೊರಿಯರ್‌ ಸೇವೆಯ ಮೂಲಕ ಮಾರಾಟವಾಗುತ್ತದೆ. ಸ್ಥಳೀಯವಾಗಿಯೂ ಖರೀದಿಯಾಗುತ್ತದೆ ಎನ್ನುತ್ತಾರೆ ಅಜೇಯ.

ಮರದಿಂದ ಹಲಸು ತಂದು ಉತ್ಪನ್ನ ತಯಾರಿಸಿ ಮಾರುಕಟ್ಟೆ ಮಾಡುವವರೆಗೂ ಸವಾಲುಗಳು ಇದೆ, ಅದನ್ನು ದಾಟಿ ಬರುವುದು ಆರಂಭದಲ್ಲಿ ಸವಾಲಾಗಿತ್ತು , ಆದರೆ ಅದೆಲ್ಲಾ ಬಳಿಕ ಸುಧಾರಿಸಿಕೊಂಡು ಈಗ ಯಶಸ್ವಿಯಾಗಿ ನಡೆಯುತ್ತಿದೆ ಎನ್ನುತ್ತಾರೆ ಅಜೇಯಶಂಕರ್.‌…..ಮುಂದೆ ಓದಿ….

ಹಲಸು ಊರಲ್ಲಿ ಎಷ್ಟು ಬೇಕಾದರೂ ಬೆಳೆಯುತ್ತದೆ, ಅದು ಹಾಳಾಗಿ ಹೋಗುತ್ತದೆ. ಹಲಸಿನಲ್ಲಿ ಮೌಲ್ಯವರ್ಧನೆ ಮಾಡಬಹುದಾದ ಅನೇಕ ಅವಕಾಶಗಳು ಇದೆ. ಅದನ್ನು ಮಾಡಬೇಕು, ಝೀರೋ ವೇಸ್ಟ್‌ ಆಗಿ ಹಲಸನ್ನು ಮಾಡಬೇಕು ಎನ್ನುವ ಯೋಜನೆ, ಯೋಚನೆ ಇದೆ ಎನ್ನುತ್ತಾರೆ ಅಜೇಯಶಂಕರ್.‌

Ajeya Shankar, a resident of Neerchalu Badgamule in Kasaragod district, is a young man who completed his engineering degree in 2018. After graduating from the electronics department, he was uncertain about his next steps. However, he is now actively involved in the jackfruit industry at Ajeya Shankara Khandi, a canal near Badiyadka in Kasaragod district.

Until last year, he had planted approximately 700 jackfruit trees on his farm and now plans to increase the number to 1000. He named his business “Jack Tales” and has already begun operations. He is determined to minimize waste and maximize the use of jackfruit in his business.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!

ಸ್ವಲ್ಪ ಸಿಹಿ ರುಚಿಯ ಹಲಸಿನ ಕಾಯಿಗೆ ವಿವಿಧ ಮಸಾಲೆಗಳನ್ನು ಸೇರಿಸಿ ಕೆಲವೇ ನಿಮಿಷಗಳಲ್ಲಿ…

5 hours ago

ಅಡಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ಪರಿಹಾರ ತೀರಾ ಕಡಿಮೆ…! ಪ್ರಕೃತಿ ವಿಕೋಪದಲ್ಲಿ ರೈತರಿಗೆ ಅನ್ಯಾಯ?

ಪ್ರಕೃತಿ ವಿಕೋಪದಿಂದ ಅಡಿಕೆ ತೋಟಗಳಿಗೆ ಆಗುವ ನಷ್ಟಕ್ಕೆ ಸಿಗುತ್ತಿರುವ ಎನ್‌ಡಿಆರ್‌ಎಫ್ ಪರಿಹಾರ ಮೊತ್ತ…

6 hours ago

ಭಾರತದ ಹಲಸಿನ ಹಣ್ಣಿನ ರಾಜಧಾನಿ ಎಲ್ಲಿದೆ ಗೊತ್ತಾ..?

ತಮಿಳುನಾಡಿನ ಪನ್ರುಟಿ ಪಟ್ಟಣವನ್ನು ಭಾರತದ ಹಲಸಿನ ಹಣ್ಣಿನ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿನ…

8 hours ago

ಉತ್ತಮ ಗುಣಮಟ್ಟದ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ; ರಾಸಾಯನಿಕ ಮಿಶ್ರಣವೇ ಅಪಾಯ – ಎಸ್.ಆರ್. ಸತೀಶ್ಚಂದ್ರ

ಉತ್ತಮ ಗುಣಮಟ್ಟದ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ…

8 hours ago

ಹವಾಮಾನ ವರದಿ | 04-07-2026 | ಜುಲೈ 10ರ ಬಳಿಕ ಕರ್ನಾಟಕದಲ್ಲಿ ಮುಂಗಾರು ದುರ್ಬಲ..? ಕರಾವಳಿ-ಮಲೆನಾಡಿನಲ್ಲಿ ಮಳೆ ಇಳಿಕೆಗೆ ಮುನ್ಸೂಚನೆ

ಜುಲೈ 10ರ ಬಳಿಕ ರಾಜ್ಯದಲ್ಲಿ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು…

9 hours ago

2026ರಲ್ಲಿ ಜಗತ್ತಿನ ಅಂತ್ಯವೇ..? 1960ರ ‘ಡೂಮ್ಸ್‌ಡೇ’ ಅಧ್ಯಯನದ ನಿಜಾಂಶ ಏನು..?

1960ರ ವಿಜ್ಞಾನ ಲೇಖನವು 2026ರಲ್ಲಿ ಜಗತ್ತು ಅಂತ್ಯವಾಗುತ್ತದೆ ಎಂದು ಹೇಳಿಲ್ಲ. ಅದು ಕೇವಲ…

9 hours ago