ಸಣ್ಣ ಕಥೆಯನು ನಾನಿಂದು ಹೇಳುವೆ…
ನಿನ್ನ ಬದುಕಿನ ಕಥೆಯನು ತಿಳಿಸುವೆ….
ಕಷ್ಟದಿಂದ ಬದುಕುವ ನೀನು ಗೆದ್ದು ಮುಂದೆ ಬಾ….
ನಿನ್ನ ಕಷ್ಟದ ಬಗ್ಗೆ ಇಲ್ಲಿ ಯಾರೂನು ಕೇಳೋದಿಲ್ಲ…
ನಿನ್ನ ನೋವಿನ ಬದುಕು ಇಲ್ಲಿ ಯಾರಿಗೂ ಬೇಕಾಗಿಲ್ಲ…
ನಿನ್ನಯ ಬದುಕದು, ನಿನ್ನಯ ಭಾವನೆ ನಿನಗೆ ಮೀಸಲು…
ನಿನ್ನ ಬದುಕಿನ ಭಾವನೆಗಿಲ್ಲಿ ಕಿಂಚಿತ್ತೂ ಬೆಲೆಯೇ ಇಲ್ಲ…
ನಿನ್ನ ಕಷ್ಟದ ಬದುಕನ್ನಿಲ್ಲಿ ಯಾರೂನೂ ನೋಡೋದಿಲ್ಲ…
ನಿನ್ನ ಕಷ್ಟಕ್ಕೆ ಸೆಡ್ಡು ಹೊಡೆದು, ಸಾಧನೆಗೆ ಸಲಾಂ ಹೊಡೆದು…
ಪ್ರತಿಯೊಂದು ಹೆಜ್ಜೆಯಲ್ಲೂ ಗೆಲುವಿನ ಮಂತ್ರವ ಪಠಿಸಿ…
ಮುಂದೆ ನುಗ್ಗಿ ಎದ್ದು ಬಿದ್ದು ಬದುಕಲಿ ಗೆದ್ದು ಬಾ…
ನಿನ್ನ ಬದುಕಿನ ಓಟದಲ್ಲಿ ಸೋಲಿನ ಭಯವು ಇರಲಿ, ಗೆಲುವಿನ ಛಲವು ಇರಲಿ…
ಸೋಲೇ ಗೆಲುವಿನ ಮೊದಲ ಮೆಟ್ಟಿಲು ಮಾತು ನೆನಪಿರಲಿ…
ಆ ಸೂರ್ಯನ ಕಿರಣದಂತೆ ನಿನ್ನ ಬದುಕು ಬೆಳಕಾಗಿರಲಿ…
ಚಂದ್ರನ ನೆರಳಿನಂತೆ ನಿನ್ನ ಬದುಕು ನೆರಳಾಗಿರಲಿ…
ಸಾಧಿಸುವ ಪ್ರತಿಯೊಂದು ಯುವ ಮನಸಿಗೆ…
ಬದುಕಲಿ ಸಾಧಿಸುವ ಪ್ರತಿಯೊಂದು ಯುವ ಮನಸಿಗೆ…
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel