ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದದ ವರದಿ ಮಾಡಲು ತೆರಳಿದ್ದ ದೃಶ್ಯ ಮಾಧ್ಯಮದ ವರದಿಗಾರರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯನ್ನು ಖಂಡಿಸಿದ ಪತ್ರಕರ್ತರ ಸಂಘವು ತಕ್ಷಣವೇ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದೆ.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದೊಂದು ವಾರದಿಂದ ಹಿಜಾಬ್ ವಿವಾದ ಚರ್ಚೆಯಾಗುತ್ತಿತ್ತು. ಹಿಜಾಬ್ ಕುರಿತಾಗಿ ನ್ಯಾಯಾಲಯದ ತೀರ್ಪು ಮತ್ತು ಸರ್ಕಾರದ ಸಮವಸ್ತ್ರ ನೀತಿ ಸಂಹಿತೆಯ ಬಳಿಕವು ಈ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬರುತ್ತಿದ್ದರು. ಈ ಬಗ್ಗೆ ಪ್ರಿನ್ಸಿಪಾಲ್ ಸರ್ಕಾರದ ಕಟ್ಟುನಿಟ್ಟಿನ ನಿಯಮ ಮತ್ತು ಕೋರ್ಟ್ ಆದೇಶದ ಬಗ್ಗೆ ವಿವರವಾಗಿ ತಿಳಿಸಿದ ಬಳಿಕವೂ ಹಿಜಾಬ್ ಧಾರಣೆ ಮುಂದುವರಿದಿತ್ತು. ಹೀಗಾಗಿ ಆರು ವಿದ್ಯಾರ್ಥಿನಿಯರನ್ನು ಮುಂದಿನ ಆದೇಶದವರೆಗೆ ಕಾಲೇಜಿನಿಂದ ಅಮಾನತು ಮಾಡಿ ಪ್ರಿನ್ಸಿಪಾಲ್ ಜೂನ್ 1 ರಂದು ಆದೇಶ ಹೊರಡಿಸಿದ್ದರು.
ಇಂದು ಕಾಲೇಜ್ ಅವರಣದಲ್ಲಿ ಹಿಜಾಬ್ ಪರ ಹಾಗೂ ವಿರುದ್ದ ಇರುವ ತಂಡಗಳ ನಡುವೆ ವಾಗ್ವಾದ ನಡೆದಿದ್ದು, ಹಿಜಾಬ್ ಧರಿಸಿಕೊಂಡು ಬಂದ 6 ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಅಮಾನತುಗೊಳಿಸಿದ್ದರು. ಹೀಗಾಗಿ ವಿವಾದದ ಹಿನ್ನೆಲೆಯಲ್ಲಿ ದೃಶ್ಯ ಮಾಧ್ಯಮದ ಪ್ರಮುಖರ ಸೂಚನೆಯ ಮೇರೆಗೆ ವರದಿ ಮಾಡಲು ವರದಿಗಾರರು ತೆರಳಿದ್ದರು. ಈ ಸಂದರ್ಭ ದೃಶ್ಯ ಮಾಧ್ಯಮದ ವರದಿಗಾರರಿಗೆ ದಿಗ್ಬಂಧನ ಹಾಕಿ ಚಿತ್ರೀಕರಿಸಿದ ವೀಡಿಯೋಗಳನ್ನು ಬಲವಂತವಾಗಿ ಅಳಿಸಿ ಹಾಕಿ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿದ್ದಾರೆ ಎಂದು ದೃಶ್ಯ ಮಾಧ್ಯಮದ ವರದಿಗಾರರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದುವರೆಗೂ ಹಿಜಾಬ್ ವಿವಾದವು ಸುದ್ದಿ ಮಾಧ್ಯಮಗಳ ಮೂಲಕವೇ ಹೆಚ್ಚು ಪ್ರಚಾರ ಪಡೆದಿತ್ತು.
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…
ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …
ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ ತಪಾಸಣೆ…
ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…