ಭಾರತದಿಂದ ಅಮೆರಿಕಕ್ಕೆ ರಪ್ತಾಗುತ್ತಿದ್ದ ಮಾವಿನಹಣ್ಣುಗಳಿದ್ದ 15 ಶಿಪ್‌ಮೆಂಟ್‌ಗಳನ್ನು ಅಮೆರಿಕ ತಿರಸ್ಕರಿಸಿದೆ. ಈ ತಿಂಗಳ ಆರಂಭದಲ್ಲಿ ಅಡಿಕೆ ಹಾಳೆತಟ್ಟೆಯನ್ನು ಕೂಡಾ ಅಮೇರಿಕಾ ತಿರಸ್ಕರಿಸಿದೆ. ಎರಡಕ್ಕೂ ಕಾರಣ ಬೇರೆ ಬೇರೆ ನೀಡಿದೆ. ಅಡಿಕೆ ಹಾಳೆತಟ್ಟೆ ತಿರಸ್ಕಾರಕ್ಕೆ ಎಫ್‌ಡಿಎ ನಿಯಮ ಹಾಗೂ ಅಡಿಕೆ ಹಾಳೆತಟ್ಟೆ ಹಾನಿ ಎನ್ನುವ ಕಾರಣ ನೀಡಿದರೆ, ಮಾವಿನಹಣ್ಣು ರಫ್ತು ವಿಚಾರದಲ್ಲಿ ಕೀಟನಾಶಕ ಬಳಕೆಗೆ ಸಂಬಂಧಿಸಿದ ದಾಖಲೆಗಳಲ್ಲಿ ವ್ಯತ್ಯಾಸದ ಕಾರಣ ಹೇಳಿದೆ. ಈಗ ಮಹಾರಾಷ್ಟ್ರದ ಮಾವಿನಹಣ್ಣುಗಳಿದ್ದ 15 ಶಿಪ್‌ಮೆಂಟ್‌ಗಳನ್ನು ಅಮೆರಿಕ ತಿರಸ್ಕರಿಸಿದೆ. ಇದರಿಂದಾಗಿ ಭಾರತದ ರಫ್ತುದಾರರಿಗೆ ಸುಮಾರು 4.28 ಕೋಟಿ ರೂ. ನಷ್ಟವಾಗಿದೆ. …..ಮುಂದೆ ಓದಿ….
ಅಮೇರಿಕಾದ ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಅಟ್ಲಾಂಟಾದ ವಿಮಾನ ನಿಲ್ದಾಣಗಳಲ್ಲಿ ಕನಿಷ್ಠ 15 ಶಿಪ್‌ಮೆಂಟ್ ಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಮೇ 8 ಮತ್ತು 9 ರಂದು ನವಿ ಮುಂಬೈನ ವಾಶಿಯಲ್ಲಿರುವ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (ಯುಎಸ್ಡಿಎ) ಮೇಲ್ವಿಚಾರಣೆಯಲ್ಲಿ ಮಾವಿನ ಹಣ್ಣುಗಳನ್ನು ವಿಕಿರಣ ಚಿಕಿತ್ಸೆಗೆ ಒಳಪಡಿಸಲಾಗಿತ್ತು.ಆದರೆ, ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ದೋಷಗಳು ಕಂಡುಬಂದಿವೆ. ಹೀಗಾಗಿ ಮಾವಿನ ಹಣ್ಣು ಅಮೇರಿಕಾದಲ್ಲಿ ಇಳಿಕೆಯಾಗಿಲ್ಲ. ಪ್ರವೇಶ ನಿರಾಕರಿಸಲಾದ ಮಾವಿನ ಸರಕುಗಳನ್ನು ಭಾರತಕ್ಕೆ ಹಿಂತಿರುಗಿಸಲಾಗುತ್ತಿತ್ತು ಅಥವಾ ನಾಶಪಡಿಸಲಾಗುತ್ತಿತ್ತು. ಮಾವಿನಹಣ್ಣುಗಳು ಬೇಗನೆ ಕೊಳೆಯುವ ಗುಣ ಮತ್ತು ಹಿಂತಿರುಗಿಸುವ ಲಾಜಿಸ್ಟಿಕ್ಸ್‌ನ ಹೆಚ್ಚಿನ ವೆಚ್ಚದಿಂದಾಗಿ, ರಫ್ತುದಾರರು ಮಾವಿನಹಣ್ಣನ್ನು ಅಲ್ಲಿಯೇ ವಿಲೇವಾರಿ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಸುಮಾರು 4.2 ಕೋಟಿ ರೂ. ನಷ್ಟವಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ.
ಮಹಾರಾಷ್ಟ್ರದ ಇತರ ಭಾಗಗಳ ಜೊತೆಗೆ ರತ್ನಗಿರಿಯು ಅಲ್ಫೋನ್ಸೊ ಮಾವಿನಹಣ್ಣು ಹೆಸರುವಾಸಿಯಾಗಿದೆ, ಇವುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಅಮೆರಿಕದಲ್ಲಿ ಹೆಚ್ಚಿನ ಬೇಡಿಕೆಯಿದೆ. ಅಮೆರಿಕವು ಬಹಳ ಹಿಂದಿನಿಂದಲೂ ಭಾರತದ ಮಾವಿನ ಹಣ್ಣುಗಳಿಗೆ, ವಿಶೇಷವಾಗಿ ಅಲ್ಫೋನ್ಸೊದಂತಹ ಪ್ರೀಮಿಯಂ ಪ್ರಭೇದಗಳಿಗೆ, ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ವಾಸ್ತವವಾಗಿ, ಅಮೆರಿಕವು ಭಾರತದ ಒಟ್ಟು ಮಾವಿನ ರಫ್ತಿನ ಸರಿಸುಮಾರು 40% ಅನ್ನು ಆಮದು ಮಾಡಿಕೊಳ್ಳುತ್ತದೆ. ರಫ್ತು ಸಮಸ್ಯೆ ಇದುರೆಗೂ ಆಗಿಲ್ಲ. ಈಗ ಸಮಸ್ಯೆ ಆಗಿರುವ ಬಗ್ಗೆಯೂ ಕಾರಣ ತಿಳಿದಿಲ್ಲ ಎಂದು ಕೆಲವು ರಫ್ತುದಾರರು ಹೇಳಿದ್ದಾರೆ.
ಅಡಿಕೆ ಹಾಳೆತಟ್ಟೆ ರಫ್ತು ಬಳಿಕವೂ ಇದೇ ಮಾದರಿಯ ಸಮಸ್ಯೆಯನ್ನು ರಫ್ತುದಾರರ ಅನುಭವಿಸಿದ್ದಾರೆ. ಅಡಿಕೆ ಹಾನಿಕಾರಕ ಎನ್ನುವ ಅಂಶವನ್ನು ಹೇಳುತ್ತಾ ಅಡಿಕೆ ಹಾಳೆತಟ್ಟೆಯೂ ಹಾನಿಕಾರಕ ಎಂದು ಹೇಳಿದೆ. ಇದಕ್ಕಾಗಿ FDA ವರದಿಯನ್ನು ಉಲ್ಲೇಖಿಸಲಾಗಿತ್ತು. ಇದೀಗ ಅಡಿಕೆ ಹಾಳೆತಟ್ಟೆ ಉದ್ಯಮ ಕೂಡಾ ಸಂಕಷ್ಟವನ್ನು ಅನುಭವಿಸಿದೆ. ಅಮೇರಿಕಾಕ್ಕೆ ಅಡಿಕೆ ಹಾಳೆತಟ್ಟೆ ರಫ್ತು ಮಾಡಲು ಸಂಕಷ್ಟವಾಗಿದೆ.
2025-26ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ…
ಯಾದಗಿರಿ ಜಿಲ್ಲೆಯ, ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ…
ಮಹಾತ್ಮ ಗಾಂಧೀಜಿ ಅವರು ಹೇಳಿದಂತೆ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ…
ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಎಂಎಸ್ಎಂಇ…
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…