ಅತಿಯಾದ ರಾಸಾಯನಿಕ ಗೊಬ್ಬರಗಳ(Chemical Fertilizer) ಬಳಕೆಯಿಂದ ಮಣ್ಣಿನ ಫಲವತ್ತತೆ(Soil fertility) ಹಾಳಾಗಿದ್ದಲ್ಲದೆ ನಾವು ಸೇವಿಸುವ ಆಹಾರ ಕಲುಷಿತಗೊಂಡಿದೆ(Contaminated food). ಇಂತಹ ವಿಷಯಗಳನ್ನು ಅರಿತ ಕೆಲವು ರೈತರು(Farmer) ಸಾವಯವ ಗೊಬ್ಬರಗಳಾದ(Organic fertilizer) ಕೊಟ್ಟಿಗೆ ಗೊಬ್ಬರ(Cow Manure), ಆಡು/ಕುರಿ ಗೊಬ್ಬರ(Goat/Sheep Manure), ಎರೆಹುಳು ಗೊಬ್ಬರ(Earthworm Manure), ಹಂದಿ ಗೊಬ್ಬರ(Pig Manure) ಮತ್ತು ಕೋಳಿ ಗೊಬ್ಬರವನ್ನು(Poultry Manure) ಬಳಸಿ ಕೃಷಿ(Agriculture) ಮಾಡುತ್ತಿದ್ದಾರೆ.
ಬೇರೆ ಸಾವಯವ ಗೊಬ್ಬರಗಳಿಗೆ ಹೋಲಿಸಿದರೆ ಕೋಳಿ ಗೊಬ್ಬರದಲ್ಲಿ ಹೆಚ್ಚು ಸಾರಜನಕ, ರಂಜಕ ಮತ್ತು ಪೊಟ್ಯಾಷ್(Nitrogen, Phosphorus, Potash)ಸಿಗುತ್ತವೆ ಆದ್ದರಿಂದಲೇ ಕೋಳಿ ಹಿಕ್ಕಿಯನ್ನು ರೈತರು ಬೆಳೆಗಳಿಗೆ ಗೊಬ್ಬರಗಳಾಗಿ ಬಳಸುತ್ತಾರೆ. ಇತ್ತಿಚೆಗೆ ಕೋಳಿ ಸಾಕಾಣಿಕೆ ಒಂದು ಉದ್ಯಮವಾಗಿದೆ ಅನೇಕ ರೈತರು ಮಾಂಸ ಮತ್ತು ಮೊಟ್ಟೆ ಉತ್ಪಾದನೆಯ ಉದ್ದೇಶದಿಂದ ಕೋಳಿಗಳನ್ನು ಸಾಕುತ್ತಾರೆ. ಜೊತೆ ಜೊತೆಗೆ ಕೋಳಿ ಗೊಬ್ಬರವನ್ನು ಮಾರಾಟ ಮಾಡಿ ಹಣ ಗಳಿಸುತ್ತಾರೆ.
ಕೃಷಿಯಲ್ಲಿ ರೈತರು ಕೋಳಿ ಗೊಬ್ಬರವನ್ನು ಬಳಸಿದರೆ ಹೆಚ್ಚಿನ ಇಳುವರಿ ಪಡೆಯುವ ಜೊತೆಗೆ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು. ಕೋಳಿ ಸಾಕಾಣಿಕಾ ಕೇಂದ್ರದಿಂದ ತಂದ ಗೊಬ್ಬರವನ್ನು ರೈತರು ನೇರವಾಗಿ ಬೆಳೆಗಳಿಗೆ ಬಳಸಬಾರದು. ಕೆಲ ದಿನಗಳ ತನಕ ತೇವಾಂಶ ಇರುವ ಸ್ಥಳದಲ್ಲಿ ಸಂಗ್ರಹಿಸಿ ಉಪಯೋಗಿಸಬೇಕು. ಹೆಚ್ಚು ತೇವಾಂಶ ಇರುವ ಅಂದರೆ ಮಳೆಗಾಲದ ಸಮಯದಲ್ಲಿ ಈ ಗೊಬ್ಬರ ಬೆಳೆಸಿದರೆ ಇನ್ನು ಸೂಕ್ತ.
ಆದರೆ ಕೆಲ ರೈತರ ಅನುಭವದ ಪ್ರಕಾರ ಕೋಳಿ ಗೊಬ್ಬರದ ಬಗ್ಗೆ ಒಂದಷ್ಟು ನಕಾರಾತ್ಮಕ ಆಲೋಚನೆಗಳು ಇವೆ. ಹಾಗಾಗಿ ಕೋಳಿ ಗೊಬ್ಬರ ಒಳ್ಳೆಯದು ಹೌದೋ ಅಲ್ಲವೋ ಎಂಬ ಬಗ್ಗೆ ರೈತರೇ ವಿಮರ್ಷೆ ಮಾಡಬೇಕು, ಗೊಬ್ಬರದಿಂದ ಕೃಷಿ ಹಾಳಾಗಿದೆಯೆಂದು ಕೆಲ ರೈತರು ಹೇಳುವುದು ಇದೆ. ಯಾವುದೇ ಬಾಹ್ಯ ಪರಿಕರಗಳು ಕೃಷಿ ಕಾರ್ಯಗಳಲ್ಲಿ ಬಳಸುವುದು ಈಗ ಬಹಳ ಅಪಾಯಕಾರಿ ಮತ್ತು ಹಲವು ರೋಗಗಳಿಗೆ ನಾವೇ ಆಹ್ವಾನ ನೀಡಿದಂತೆ. ಕೋಳಿ ಗೊಬ್ಬರದಲ್ಲಿ ಸೇರಿರುವ ವಿನಾಶಕಾರಿ, ಪ್ರಚೋದನಕಾರಿ ಔಷಧಿಗಳು ಕೃಷಿ ಭೂಮಿಯಲ್ಲಿ ಸೇರಿ, ಮುಂದೆ ಕುಡಿಯುವ ನೀರು ಕೂಡಾ ಕಲ್ಮಶವಾಗುತ್ತದೆ. ಮಾರಣಾಂತಿಕ ಕಾಯಿಲೆಗಳು ಪ್ರಾರಂಭ ಆಗಲು ಇವುಗಳು ಬೀಜಾಂಕುರ ಆಗಿರುತ್ತದೆ. ಕೋಳಿ ಗೊಬ್ಬರ ಅಧಿಕ ಉಪಯೋಗ ಅಡಿಕೆ ಮರಗಳು ಹೆಚ್ಚು ಟೊಳ್ಳಾಗುತ್ತದೆ. ಪ್ರಕೃತಿ ವಿಕೋಪದಲ್ಲಿ ಬೇಗನೆ ಮುರಿದು ಬೀಳುತ್ತವೆ. ಹಾಗೆ ಕೋಳಿ ಗೊಬ್ಬರ ತುಂಬಾ ಹೀಟ್ ಅನ್ನೋ ಬಗ್ಗೆ ಕೆಲ ರೈತರ ಅಭಿಪ್ರಾಯವಿದೆ. ಯಾವುದಕ್ಕೂ ಒಂದಷ್ಟು ಪ್ರಯೋಗ, ಅಥವಾ ಈಗಾಗಲೇ ಬಳಸಿದ ರೈತರ ಸಲಹೆ ಪಡೆಯುವುದು ಉತ್ತಮ.
ಮಾಹಿತಿ ಮೂಲ : ಡಿಜಿಟಲ್ ಮೀಡಿಯಾ
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…