ಅನುಕ್ರಮ

ಅತಿ ವೇಗ, ಅಲಕ್ಷ್ಯ ಮತ್ತು ಅಪಘಾತ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮ ರಾಜ್ಯದಲ್ಲಿ ಒಂದೇ ದಿನ 51 ಮಂದಿ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ ಘಟನೆ ಕಳೆದ ಭಾನುವಾರ (26-05-2024) ಸಂಭವಿಸಿತು. ಈ ಮಾಹಿತಿಯನ್ನು ಟ್ವೀಟ್ ಮಾಡಿ ಹಂಚಿಕೊಂಡವರು ನಮ್ಮ ರಾಜ್ಯದ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್  ಕುಮಾರ್ ಅವರು.  ಇದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಸಾವು ಸಂಭವಿಸಿದ ದಾಖಲೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮರಣಗಳಿಗೆ ಚಾಲಕರ ಅತಿವೇಗದ ಚಾಲನೆಯೇ ಕಾರಣವೆಂಬುದಾಗಿ ಹೇಳಿರುವ ಅವರು ರಸ್ತೆ ಸುರಕ್ಷತೆಯ ನಿಯಮಗಳ ಪಾಲನೆಯ ಜವಾಬ್ದಾರಿಯನ್ನು ನೆನಪಿಸಿದ್ದಾರೆ.

Advertisement

“ಈ ಸಾವು ನ್ಯಾಯವೇ?” ಎಂಬುದಾಗಿ ನಾವು ಕೇಳುವ ಇಂತಹ ಘಟನೆಗಳು ದಿನನಿತ್ಯವೂ ನಡೆಯುತ್ತವೆ. ಯಾರದೋ ಅಲಕ್ಷ್ಯದಿಂದಾಗಿ ಮತ್ತ್ಯಾರೋ ಜೀವಕಳಕೊಂಡ ಅಪಘಾತಗಳು ನಡೆಯುತ್ತಲೇ ಇವೆ. ಗುಜರಾತ್‍ನ ರಾಜಕೋಟ್‍ನಲ್ಲಿ ಗೇಮ್‍ಝೋನ್ ಮಾಲ್‍ನವರ ಅಸುರಕ್ಷಿತ ಅವಸ್ಥೆಯಲ್ಲಿ ಬೆಂಕಿ ಹೊತ್ತಿಕೊಂಡು ಎಳೆಯ ಮಕ್ಕಳ ಸಹಿತ ಮೂವತ್ತಕ್ಕೂ ಹೆಚ್ಚು ಮಂದಿ ಪ್ರಾಣ ಕಳಕೊಂಡಿದ್ದಾರೆಂಬ ಘಟನೆಯ ಬೆನ್ನಿಗೆಯೇ ದೆಹಲಿಯಲ್ಲಿ ಮಕ್ಕಳ ಆಸ್ಪತ್ರೆಗೆ ಬೆಂಕಿ ತಗುಲಿ ಏಳು
ನವಜಾತ ಶಿಶುಗಳು ಬಲಿಯಾದ ಘಟನೆ ವರದಿಯಾಯಿತು. ರಜಾದಿನಗಳೆಂದು ಮಾಲ್‍ಗಳು ಘೋಷಿಸಿದ್ದ ಉಚಿತ ಆಫರ್‍ಗಳಿಗೆ ಮರುಳಾಗಿ ಗಿರಾಕಿಗಳ ಒತ್ತಡವೂ ಕಾರಣವಾಗಿ ಬೆಂಕಿಯ ಕೆನ್ನಾಲಗೆಗಳಿಂದ ತಪ್ಪಿಸಿಕೊಳ್ಳಲಾಗದೆ ಮಕ್ಕಳು ಸಾಯುವ ಪ್ರಸಂಗ ಬಂದುದು ನಿಜಕ್ಕೂ ದುರ್ದೈವ. ಆದರೆ ಈ ಮರಣಗಳನ್ನು ಸಹಿಸಿಕೊಳ್ಳುವ ಶಕ್ತಿ ಪೋಷಕರಿಗೆ ಎಲ್ಲಿಂದ ಬರಬೇಕು? ಹೇಗೆ ಸಾಧ್ಯ? ಇನ್ನು ಆಸ್ಪತ್ರೆಗಳಿರುವುದೇ ಜೀವರಕ್ಷಣೆಗೆ. ಆದರೆ ರಕ್ಷಿಸುವ ವ್ಯವಸ್ಥೆಗಳೇ ದುರ್ಬಲವಾಗಿ  ನಿಷ್ಪಾಪಿ ಶಿಶುಗಳು ಉಸಿರು ಚೆಲ್ಲಿದರು. ಈ ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಅದು ಇತಿಹಾಸಕ್ಕೆ ಸೇರಬಹುದು. ಆದರೆ ಮಕ್ಕಳನ್ನು ಕಳಕೊಂಡವರ ಬಾಳಿನಲ್ಲಿ ದುಃಖ ಮತ್ತು ನೋವು ಶಮನವಾದೀತೇ?

2024ರ ಮೇ ತಿಂಗಳಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದ ಅಪಘಾತದಿಂದಾಗಿ ಬೈಕ್‍ನಲ್ಲಿ ಸಾಗುತ್ತಿದ್ದ ಇಬ್ಬರು ಅಮಾಯಕ ಟೆಕ್ಕಿ ದಂಪತಿಗಳು ಸಾವಿಗೀಡಾದರು. ಅದಕ್ಕೆ ಕಾರಣವಾದ್ದು ಅಪ್ಪ ಮಾಡಿಟ್ಟ ಆಸ್ತಿಯ ದುಂದು ವೆಚ್ಚಕ್ಕೆ ಇಳಿದ ಇನ್ನೂ ಪ್ರೌಢಾವಸ್ಥೆಗೆ ತಲುಪದ ಹುಡುಗ ಪಿ.ಯು.ಸಿ. ಪರೀಕ್ಷೆಯಲ್ಲಿ ತಾನು ತೇರ್ಗಡೆಯಾದ ಸಂಭ್ರಮಾಚರಣೆಯನ್ನು ಆಚರಿಸಿದ ರಾಕ್ಷಸೀ ಪ್ರವೃತ್ತಿಯ ಘಟನೆ. ಕೋಟಿಗಟ್ಟಲೆ ಬೆಲೆಯ ಪೋಶೆ ಕಾರನ್ನು ಆ ಮಹಾನಗರದ ಕಿರಿದಾದ ರಸ್ತೆಯಲ್ಲಿ 150 ರಿಂದ 200 ಕಿ.ಮೀ ವೇಗದಲ್ಲಿ ಕುಡಿತದ ಅಮಲಿನಲ್ಲಿ ಓಡಿಸಿ ಹಿಡಿತಕ್ಕೆ ತರಲಾಗದೆ ಈಗಷ್ಟೇ ಬದುಕನ್ನು ಆರಂಭಿಸಿದ ದಂಪತಿಗಳ ಬೈಕ್‍ಗೆ ಡಿಕ್ಕಿ ಹೊಡೆದು ಉರುಳಿಸಿ ಬಿಟ್ಟ. ಮೃತರಾದ ಆ ದಂಪತಿಗಳು ತಮ್ಮ ಹೆತ್ತವರು ಕಂಡಿದ್ದ ಕನಸಿನ ಬಿಂಬಗಳು. ಆ ಮುಗ್ಧ ಜೀವಗಳು ತಮ್ಮ ಬಾಲ್ಯ ಮತ್ತು ಯುವಾವಸ್ಥೆಯಲ್ಲಿ ಮಾಡಿದ್ದ ಶೈಕ್ಷಣಿಕ ಹಾಗೂ ತಾಂತ್ರಿಕ ಕೌಶಲಗಳ ಗಳಿಕೆಗೆ ಮಾಡಿದ ಸಾಧನೆಗೆ ಬೆಲೆ ಕಟ್ಟಲಾದೀತೆ? ಒಬ್ಬ ಹುಡುಗನ ಶೋಕಿಗೆ ಬಲಿಯಾದ ಈ ಜೀವಗಳು ಮರಳುವುದಿಲ್ಲವಲ್ಲ!

ಕಾರುಗಳಂತಹ ವಾಹನ ಸೌಲಭ್ಯಗಳ ಮತ್ತು ರಸ್ತೆಗಳಂತಹ ಸಾರ್ವಜನಿಕ ವ್ಯವಸ್ಥೆಗಳ ಅನುಭೋಗದ ಹಕ್ಕು ಎಲ್ಲರಿಗೂ ಇದೆಯೆಂದು ತಿಳಿಯುವ ಸಂಸ್ಕಾರವು ಜನರಲ್ಲಿ ಏಕೆ ಬರುವುದಿಲ್ಲ? ಶ್ರೀಮಂತರ ಜೀವದ ಮೌಲ್ಯ ಮತ್ತು ಬಡವರ ಪ್ರಾಣದ ಬೆಲೆಯಲ್ಲಿ ವ್ಯತ್ಯಾಸ ಇರುವುದಕ್ಕೆ ಪುಣೆಯ ಪ್ರಕರಣ ಉದಾಹರಣೆಯಾಯಿತು. ತಪ್ಪೆಸಗಿದ ಮೊಮ್ಮಗನ ರಕ್ಷಣೆಗೆ ಅಜ್ಜ ತೊಡಗಿಕೊಂಡು ತಮ್ಮ ಕುಟುಂಬದ ಡ್ರೈವರ್‍ನನ್ನು ಬಲಿಪಶು ಮಾಡುವ ಪ್ರಯತ್ನ ಜರಗಿತು. ಅವರ ಶೀಂತ್ರಿಗಳು ಈ ಬಾರಿ
ಯಶಸ್ವಿಯಾಗಿಲ್ಲ ಎಂಬುದೇ ಒಂದು ಸಮಾಧಾನಕರ ಬೆಳವಣಿಗೆ. ಯುವಕನ ಹುಚ್ಚಾಟದ ಅಪರಾಧಕ್ಕೆ ಅಪ್ಪನೂ ಅಜ್ಜನೂ ಜೈಲು ಸೇರಿದ್ದು ಇನ್ನುಳಿದವರಿಗೆ ಉದಾಹರಣೆಯಾಗಬೇಕು. ಆದರೆ ಇದು ಎಷ್ಟರ ಮಟ್ಟಿಗೆ ವ್ಯಾಪಕ ಎಚ್ಚರ ನೀಡಲಿದೆ ಎಂಬುದರ ಮಾಹಿತಿಗಳು ದೊರೆಯಲಾರವು.

ಈ ಎಲ್ಲಾ ರಾಷ್ಟ್ರಮಟ್ಟದ ಘಟನೆಗಳ ಸಂದರ್ಭದಲ್ಲೇ ನಮ್ಮ ರಾಜ್ಯದಲ್ಲಿ 51 ಅಸಹಜವಾದ ಅಪಘಾತದ ಸಾವುಗಳು ಸಂಭವಿಸಿದ್ದು ಪರಿಹಾರವಿಲ್ಲದ ನಷ್ಟಗಳಾಗಿವೆ. ಸರಕಾರವೇನೋ ಒಂದೆರಡು ಲಕ್ಷಗಳ ಪರಿಹಾರ ನೀಡಬಹುದು. ಆದರೆ ಅದು ತಾತ್ಕಾಲಿಕವಷ್ಟೇ. ಇದೇ 2024ರ ಮೇ 26ರಂದು ಹಾಸನದಲ್ಲಿ ನಡೆದ ಭೀಕರ ಅಪಘಾತದಲ್ಲಿ ಚಾಲಕನ ಅತಿ ವೇಗವೇ ಕಾರಣವೆಂಬುದು ದೃಢಪಟ್ಟಿದೆ. ಮಂಗಳೂರಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರು ಹಾಸನದ ಹೊರವಲಯದಲ್ಲಿ ಚಾಲಕನ
ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಾಜಕ ದಾಟಿ ಬಲ ಭಾಗದ ರಸ್ತೆಯಲ್ಲಿ ಎದುರಿಂದ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಭರಕ್ಕೆ ಡ್ರೈವರ್ ಸಹಿತವಾಗಿ ಆರು ಮಂದಿ ಮೃತಪಟ್ಟರು. ಇವರಾರೂ ಸಾಯಬೇಕಾದವರಲ್ಲ. ಆದರೆ ಒಬ್ಬ ಚಾಲಕನ ಅಜಾಗರೂಕತೆಯಿಂದಾಗಿ ಆತನ ಸಹಿತ ಸತ್ತಿರುವ ಕುಟುಂಬದವರಿಗಾಗಿರುವ ನಷ್ಟವನ್ನು ಯಾವತ್ತೂ ಭರಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಅಪಘಾತಗಳು ಸಂಭವಿಸದಂತೆ ಜಾಗೃತೆ ವಹಿಸುವುದೇ ಎಲ್ಲ ಚಾಲಕರ ಲಕ್ಷ್ಯವಾಗಬೇಕು.

ಪೆಟ್ರೋಲ್, ಡೀಸೆಲ್, ವಿದ್ಯುತ್ ಇಂಧನಗಳ ವಾಹನಗಳನ್ನು ಚಲಾಯಿಸುವುದೆಂದರೆ ಅದೊಂದು ಸುಖಕರ ಕೌಶಲ. ಅದೂ ರಸ್ತೆಗಳಲ್ಲಿ ಇತರ ವಾಹನಗಳ ದಿಕ್ಕಿನಲ್ಲಿ ಅಥವಾ ವಿರುದ್ಧ  ದಿಕ್ಕಿನಲ್ಲಿ ಸುರಕ್ಷಿತವಾಗಿ ಚಲಾಯಿಸಲು ಧೈರ್ಯವೂ ಚಾಣಾಕ್ಷಯೂ ಬೇಕು. ಅದರೊಂದಿಗೆ ಸ್ವರಕ್ಷಣೆಯ ಹಾಗೂ ತನ್ನನ್ನು ನಂಬಿ ವಾಹನದಲ್ಲಿ ಕುಳಿತವರ ಜೀವ ರಕ್ಷಣೆಯ ಹಾಗೂ ತನ್ನನ್ನು ನಂಬಿ
ವಾಹನದಲ್ಲಿ ಕುಳಿತವರ ಜೀವ ರಕ್ಷಣೆಯ ಹೊಣೆಯೂ ತನ್ನ ಮೇಲೆ ಇದೆಯೆಂಬ ಎಚ್ಚರ ಇರಬೇಕು. ಈ ಎಚ್ಚರವು ಸ್ವಲ್ಪ ತಪ್ಪಿದರೂ ಸರಿಪಡಿಸಲಾಗದಂತಹ ಅಪಘಾತ ಸಂಭವಿಸಬಹುದು. ಹಾಗಾಗಿ ಡ್ರೈವರ್‍ಗಳ ಮೇಲೆ ಮಾನಸಿಕ ಒತ್ತಡ ಇರಬಾರದು, ನಿದ್ರೆ ಕೆಟ್ಟ ಆಯಾಸ ಇರಬಾರದು, ಅಮಲು ಪದಾರ್ಥ ಸೇವಿಸಿರಬಾರದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆಯಲ್ಲಿ ಜಾಗ್ರತೆ ಇರಬೇಕು. ಈ ಜಾಗ್ರತೆ ಇಲ್ಲದಿದ್ದಾಗ ಒಂದು ಶಾಲಾ ವಾಹನವು ಹಿಂದಕ್ಕೆ ಚಲಿಸಿ ಒಂದು ಮಗುವಿನ ಪ್ರಾಣಕ್ಕೆ
ಕುತ್ತು ತಂದ ಘಟನೆ ನಡೆದಿದೆ. ಮಹಾರಾಷ್ಟ್ರದಲ್ಲಿ ಒಂದು ಇಂಜಿನಿಯರ್‍ಗಳ ಪ್ರವಾಸದ ಬಸ್ಸಲ್ಲಿ ಪ್ರವಾಸಿಗರ ಹಾಡು ಕುಣಿತ ನೋಡಲು ಡ್ರೈವರ್ ತಿರುಗಿದಾಗ ಆಯ ತಪ್ಪಿ ಪ್ರಪಾತಕ್ಕೆ ಬಿದ್ದು ಎಲ್ಲಾ ಪ್ರವಾಸಿಗರ ಸಾವು ಸಂಭವಿಸಿದೆ. ಅದೇ ರೀತಿ ಅತಿವೇಗದಿಂದ ರಾತ್ರಿ ಹೊತ್ತಿನಲ್ಲಿ ಕುಡಿದ ಮತ್ತಿನಲ್ಲಿ ಜೀಪು ಚಲಾಯಿಸಿದ ಯುವಕರ ಗುಂಪು ನಿಂತಿದ್ದ ಲಾರಿಗೆ ಅಪ್ಪಳಿಸಿ ಎಲ್ಲರೂ ಪ್ರಾಣಕಳಕೊಂಡಿದ್ದಾರೆ. ಇನ್ನು ರಸ್ತೆ ಕಡಿದು ಮಾಡಿದ ಹೊಂಡಗಳಲ್ಲಿ ಕೊಚ್ಚಿ ಹೋಗುವುದು, ತುಂಡಾಗಿ ಬಿದ್ದು ವಿದ್ಯುತ್ ಹರಿದು ಸಂಭವಿಸುವ ಸಾವು ಹೀಗೆ ಪಟ್ಟಿ ಮಾಡಿದರೆ ಅದೆಷ್ಟೋ ಘಟನೆಗಳ ಉದಾಹರಣೆಗಳು ಸಿಗಬಹುದು.

ಇಲ್ಲಿ ಮುಖ್ಯವಾದ ವಿಷಯವೆಂದರೆ ಯಾರ ಜೀವವೂ ಅಗ್ಗವಲ್ಲ. ಪ್ರತಿಯೊಬ್ಬರೂ ಯಾರಿಗಾದರೂ ಆಸರೆಯಾಗಿರುತ್ತಾರೆ. ಈ ಆಸರೆಗಳನ್ನು ತಪ್ಪಿಸಬಾರದು. ಅದಕ್ಕಾಗಿ ಸಂಚಾರ ನಿಯಮಗಳ ಪಾಲನೆ ತೀರಾ ಅಗತ್ಯವಾದುದು.

Learn how following traffic rules can drastically reduce accidents, save lives, and improve traffic flow. Commit to safe driving practices today.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

4 hours ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

7 hours ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 hours ago

ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ

ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಪರಿಸ್ಧಿತಿ ಸಾಮಾನ್ಯ…

20 hours ago

ಮುಳಿಯ ಕೃಷಿಗೋಷ್ಟಿ | ಕೃಷಿಕರೇ ಕೃಷಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ..?

ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ  ಬಗ್ಗೆ ಪುತ್ತೂರಿನ…

21 hours ago

ಈ ರಾಶಿಯವರಿಗೆ ಒಂಟಿಯಾಗಿರುವುದೇ ಇಷ್ಟ, ಫ್ರೆಂಡ್ಸೂ ಬೇಡ, ಫ್ಯಾಮಿಲಿಯವ್ರೂ ಬೇಡ…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago