ಈಗಾಗಲೇ ತನ್ನ ವಿಶೇಷತೆಯಿಂದ ಗಿನ್ನೆಸ್ ರೆಕಾರ್ಡ್ ಮಾಡಿದ್ದ ಕಾರೀಗ ತನ್ನದೇ ದಾಖಲೆಯನ್ನು ಮುರಿದು ಹೊಸ ರೆಕಾರ್ಡ್ ಮಾಡಿದೆ. ಜಗತ್ತಿನ ಅತ್ಯಂತ ಉದ್ದನೆಯ ಕಾರಿನ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
1986ರಲ್ಲಿ ಕ್ಯಾಲಿಫೋರ್ನಿಯಾದ ಬರ್ಬ್ಯಾಂಕ್‌ನಲ್ಲಿ ಪ್ರಸಿದ್ಧ ಕಾರ್ ಕಸ್ಟಮೈಸರ್ ಜೈ ಓರ್ಬರ್ಗ್ ಅವರು ವಿಶ್ವದ ಅತಿ ಉದ್ದನೆಯ ಕಾರು ನಿರ್ಮಿಸಿ ಸಾಧನೆಗೈದಿದ್ದರು. ಆಗ ಈ ಕಾರು18.28 ಮೀಟರ್ (60 ಅಡಿ) ಉದ್ದವಿತ್ತು. ಇದೀಗ ಮತ್ತೆ ಆ ಐಷಾರಾಮಿ ಕಾರನ್ನು ನವೀಕರಿಸಿ ಪುನಃ ಪರಿಚಯಿಸಲಾಗಿದೆ.
‘ದಿ ಅಮೆರಿಕನ್ ಡ್ರೀಮ್ ಕಾರು’ ಈಗ 30.54 ಮೀಟರ್ (100 ಅಡಿ ಮತ್ತು 1.50 ಇಂಚು) ಉದ್ದವಿದೆ. 26 ಚಕ್ರಗಳನ್ನು ಒಳಗೊಂಡ ಈ ಕಾರು, ದೊಡ್ಡ ವಾಟರ್ ಬೆಡ್, ಡೈವಿಂಗ್ ಬೋರ್ಡ್‌ನೊಂದಿಗೆ ಈಜುಕೊಳ, ಬಾತ್‌ಟಬ್, ಮಿನಿ-ಗಾಲ್ಫ್ ಕೋರ್ಸ್, ಹೆಲಿಪ್ಯಾಡ್ ಇದ್ದು 75 ಕ್ಕೂ ಹೆಚ್ಚು ಜನರು ಕೂರಬಹುದಾಗಿದೆ.
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …