ಮಾದಕ ವ್ಯಸನದ ವಿರುದ್ಧದ ಜಾಗೃತಿ ಮನೆಯಿಂದಲೇ ಆರಂಭವಾಗಲಿ- ಜಿಲ್ಲಾ ನ್ಯಾಯಾಧೀಶ ಕಡ್ಲೂರ್ ಸತ್ಯನಾರಾಯಣಾಚಾರ್ಯ ಆಶಯ

September 24, 2019
8:24 PM

ಮಂಗಳೂರು: ಪ್ರಸ್ತುತ ಮಾದಕದ್ರವ್ಯ ವ್ಯಸನ ಮಿತಿ ಮೀರಿ ಹರಡುತ್ತಿದ್ದು ಇದರ ಪಿಡುಗನ್ನು ಕಿತ್ತು ಹಾಕಲೇ ಬೇಕು. ಯುವ ಜನತೆಯ ಪಬ್ ಸಂಸ್ಕೃತಿ ದೂರವಾಗಬೇಕು. ಇಲ್ಲದಿದ್ದರೆ ಯುವಶಕ್ತಿಯನ್ನು ಹಾಳು ಮಾಡುವ ಜೊತೆಗೆ ದೇಶವನ್ನೂ ನಾಶ ಮಾಡಿದಂತಾಗುತ್ತದೆ‌. ಆದುದರಿಂದ ಮಾದಕ ವ್ಯಸನದ ವಿರುದ್ದ ಜಾಗೃತಿ ಮನೆಯಿಂದಲೇ ಆರಂಭವಾಗಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕಡ್ಲೂರ್ ಸತ್ಯನಾರಾಯಣಾಚಾರ್ಯ ಆಶಯ ವ್ಯಕ್ತಪಡಿಸಿದ್ದಾರೆ.

Advertisement

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ.ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಭಾಗಿತ್ವದಲ್ಲಿ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಮಂಗಳವಾರ ನಡೆದ ಬ್ರ್ಯಾಂಡ್ ಮಂಗಳೂರು ಯೋಜನೆ ಅಂಗವಾಗಿ `ಶಾಲಾ ಕಾಲೇಜುಗಳಲ್ಲಿ ಕೋಮು ಸೌಹಾರ್ದತೆ ಜಾಗೃತಿ ಹಾಗೂ ಮಾದಕ ದ್ರವ್ಯ, ಸೈಬರ್ ಕ್ರೈಂ ವಿರುದ್ಧ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಆಗುಹೋಗುಗಳನ್ನುು ಗುರುತಿಸುವ ಮಾಧ್ಯಮ ರಂಗ, ಸಂವಿಧಾನದ ನಿಜವಾದ ನಾಲ್ಕನೇ ಆಧಾರಸ್ತಂಭವಾಗಿ ಕೆಲಸ ಮಾಡಬೇಕು. ಕೋಮು ಸೌಹಾರ್ದತೆ ಬೆಸೆಯುವಲ್ಲಿ ಮಂಗಳೂರು ಬ್ರ್ಯಾಂಡ್ ಆಗಬೇಕು ಎಂದರು.

ಪ್ರಕೃತಿಯನ್ನು ಆಸ್ವಾದಿಸಿದರೆ ಜೀವನೋಲ್ಲಾಸದ ಕಿಕ್- ಡಾ‌.ಪಿ.ಎಸ್‌.ಹರ್ಷ:

ಮಾದಕ ದ್ರವ್ಯ ಸೇವನೆಯಿಂದ ಕಿಕ್ ಬರುವುದಿಲ್ಲ, ಅದರ ಬದಲು ಪ್ರಕೃತಿಯನ್ನು ಆಸ್ವಾದಿಸಿದರೆ ಜೀವನೋಲ್ಲಾಸದ ಕಿಕ್ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂವೇದನಾಶೀಲರಾಗಿರಬೇಕು ಎಂದು ನಗರ ಪೊಲೀಸ್ ಕಮಿಷನರ್ ಡಾ‌.ಪಿ.ಎಸ್.ಹರ್ಷ ಹೇಳಿದ್ದಾರೆ.
ಜಾಗೃತಿ ಪೋಸ್ಟರ್’ ಬಿಡುಡೆಗೊಳಿಸಿ ಅವರು ಮಾತನಾಡಿದರು. ಮಾದಕದ್ರವ್ಯಗಳು ನಮ್ಮನ್ನು ವಾಸ್ತವ ಜಗತ್ತಿನಿಂದ ದೂರ ತಳ್ಳುತ್ತವೆ. ಇದರ ಬದಲು ಪ್ರಕೃತಿಯನ್ನು ಆಸ್ವಾದಿಸುವುದನ್ನು ಕಲಿಯಬೇಕು.ಪಶ್ಚಿಮಘಟ್ಟ, ನದಿ, ಕಿನಾರೆಗಳಲ್ಲಿ ಸಿಗುವ ಅಹ್ಲಾದಕರ ವಾತಾವರಣ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಮಾದಕದ್ರವ್ಯ ದಂಧೆಕೋರರು ಹಣಕ್ಕಾಗಿ ಇಂತಹ ಕೃತ್ಯಗಳಿಗೆ ಅಮಾಯಕ ಯುವಜನತೆಯನ್ನು ಬಲಿ ಪಡೆಯುತ್ತಿದ್ದಾರೆ. ಇದರಿಂದ ಸಿಗುವ ಮೊತ್ತವನ್ನು ಹವಾಲ, ಉಗ್ರ ಚಟುವಟಿಕೆಗೆ ಮುಂತಾದ ಕೃತ್ಯಗಳಿಗೆ ಬಳಕೆ ಮಾಡುತ್ತಾರೆ. ಆದ್ದರಿಂದ ಯುವ ಜನತೆ ಇಂತಹ ಪ್ರಲೋಭನೆಗೆ ಒಳಗಾಗಬಾರದು ಎಂದು ಅವರು ಕಿವಿ ಮಾತು ಹೇಳಿದರು.

ಸೈಬರ್ ಅಪರಾಧ ಎಚ್ಚರಿಕೆ:
ಪ್ರಸಕ್ತ ಯುವಜನತೆಗೆ ಮನೆ ಮಂದಿ, ಸ್ನೇಹಿತರಿಗಿಂತ ಮೊಬೈಲ್ ಜೊತೆಗಾರ ಎನಿಸಿಬಿಟ್ಟಿದೆ. ಮೊಬೈಲ್‍ನಲ್ಲಿ ಆಟವಾಡುವುದನ್ನೇ ಶ್ರೇಷ್ಠ ಎಂದು ಭಾವಿಸಿರುವ
ಯುವಜನತೆ ಸೈಬರ್ ಅಪರಾಧಗಳಲ್ಲಿ ತೊಡಗಿಕೊಳ್ಳುತ್ತದೆ. ಅಂತರ್ಜಾಲ ಎನ್ನುವುದು ತಳ ಇಲ್ಲದ ಬಾವಿಯಾಗಿದ್ದು, ಯುವಜನತೆ ಆನ್‍ಲೈನ್ ಮನೋವಿಕೃತಿಗೆ ಬಲಿಪಶುವಾಗುತ್ತಿದ್ದಾರೆ. ಜಾತಿ, ಕೋಮುವಾದದಿಂದ ದೂರವಾಗಿ, ಉತ್ತಮ ಭಾರತೀಯರಾಗಿ ರೂಪುಗೊಳ್ಳಬೇಕು. ಜವಾಬ್ದಾರಿಯುವ ಪ್ರಜೆಗಳಾಗಿ ಬಾಳಬೇಕು ಎಂದು ಅವರು ಹೇಳಿದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಗಂಗಾಧರ್, ಕೆನರಾ ಕಾಲೇಜು ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ರಂಗನಾಥ ಭಟ್, ಕೆನರಾ ಕಾಲೇಜು ಪ್ರಾಂಶುಪಾಲೆ ಡಾ.ಕೆ.ವಿ.ಮಾಲಿನಿ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಪ್ತಸ್ತಾವನೆಗೈದರು. ಉಪಾಧ್ಯಕ್ಷ ಪುಷ್ಪರಾಜ್ ಪ್ರತಿಜ್ಞೆ ಬೋಧಿಸಿದರು. ಭಾಸ್ಕರ ರೈ ಕಟ್ಟ ವಂದಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರ‌ಮ ನಿರೂಪಿಸಿದರು.

 

ರು.

Advertisement
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಂಶೋಧನಾ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ
July 4, 2025
10:40 PM
by: The Rural Mirror ಸುದ್ದಿಜಾಲ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ | ಪ್ರವಾಹ ಮತ್ತು ಭೂಕುಸಿತದಿಂದ ತೀವ್ರ ಪರಿಣಾಮ
July 4, 2025
9:22 PM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಭಾಗಕ್ಕೂ ತಲುಪಿದ ಆಧುನಿಕ ಸಂಸ್ಕೃತಿ | ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳ ವಿಡಿಯೋ ವೈರಲ್ | ಸೋಶಿಯಲ್‌ ಮೀಡಿಯಾದಲ್ಲಿ ಹಲವರಿಂದ ಅಸಮಾಧಾನ |
July 4, 2025
8:27 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group