ಸುಳ್ಯ: ಕಳೆದ 4 ದಿನಗಳಿಂದ ವಾತಾವರಣದ ತಾಪಮಾನದಲ್ಲಿ ದಿಢೀರ್ ಏರಿಕೆಯಾಗಿದೆ. ವಿಪರೀತ ಬಿಸಿಲು ಕಂಡುಬರುತ್ತಿದ್ದು 2 ದಿನಗಳಿಂದ ಸುಳ್ಯ ತಾಲೂಕಿನ ವಿವಿದೆಡೆ 40 ಡಿಗ್ರಿ ತಾಪಮಾನ ದಾಖಲಾಗಿದೆ. ಬುಧವಾರ ಬೆಳಗ್ಗೆ 10 ಗಂಟೆಯ ಅವಧಿಗೇ 35 ಡಿಗ್ರಿ ತಾಪಮಾನ ಕಂಡುಬಂದಿದೆ. ಇಂದು 41 ಡಿಗ್ರಿಯವರೆಗೆ ತಲುಪಬಹುದು ಎಂದು ಹವಾಮಾನ ವರದಿ ಹೇಳುತ್ತದೆ. ಒಂದೆರಡು ದಿನದಲ್ಲಿ ಮಳೆಯಾಗಬಹುದು ಎಂದು ಹವಾಮಾನ ವರದಿ ಹೇಳಿದೆ.
Advertisement
Advertisement
ಸುಳ್ಯ ತಾಲೂಕಿನಂತಹ ಪ್ರದೇಶದಲ್ಲಿ ಗರಿಷ್ಟ ತಾಪಮಾನ ದಾಖಲಾಗುತ್ತಿದೆ. ಸುತ್ತಲೂ ಹಸಿರು ಪರಿಸರ ಇರುವ ಕಡೆಯೂ ತಾಪಮಾನ ಅಧಿಕವಾಗುತ್ತಿರುವುದು ಭವಿಷ್ಯದಲ್ಲಿ ಆತಂಕದ ಸಂಗತಿಯಾಗಿದೆ.
ವಿಪರೀತ ತಾಪಮಾನ ಕಂಡುಬರುತ್ತಿರುವುದು ವಿವಿಧ ಕೃಷಿಗೂ ಸಮಸ್ಯೆಯಾಗಿದೆ. ಕೊರೊನಾ ವೈರಸ್ ಹರಡುವುದು ತಡೆಗೆ ತಾಪಮಾನ ಇದ್ದರೆ ಉತ್ತಮ ಎಂಬ ವಾದವೂ ಇದೆ. ಒಟ್ಟಿನಲ್ಲಿ ಕಳೆದೆರಡು ದಿನಗಳಿಂದ ವಾತಾವರಣದ ತಾಪಮಾನ ಗರಿಷ್ಟ ಮಟ್ಟಕ್ಕೆ ತಲಪಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement