ಸುಳ್ಯ: ಕೊಡಗು ಸಂಪಾಜೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಸಂಪಾಜೆ ಘಟಕ ಅಧ್ಯಕ್ಷ ಅನಂತ ಊರುಬೈಲು, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್, ಸದಸ್ಯೆ ರಮಾದೇವಿ ಬಾಲಚಂದ್ರ ಕಳಗಿ, ಸಾಹಿತಿ ಲೈನ್ಕಜೆ ರಾಮಚಂದ್ರ ಭಟ್, ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ, ಕಸಾಪ ಕಾರ್ಯದರ್ಶಿ ಬಿ.ಜೆ ಯಶೋಧರ, ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಹೊನ್ನಪ್ಪ ಕಾಸ್ಪಾಡಿ, ಕಸಾಪ ಪದಾಧಿಕಾರಿಗಳಾದ ರವಿರಾಜ್ ಹೊಸೂರು, ಅಮೃತರಾಜ್ ಕುಯಿಂತೋಡು, ಶಭರೀಶ್ ಕುದ್ಕುಳಿ, ಶಾಲಾ ವಿದ್ಯಾರ್ಥಿಗಳು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳು, ಶಾಲಾ ವಿದ್ಯಾರ್ಥಿಗಳ ಪೋಷಕರು, ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಕನ್ನಡದ ರಾಜ್ಯೋತ್ಸವದ ಮಹತ್ವದ ಬಗ್ಗೆ ಕಿರುಭಾಷಣ ಮತ್ತು ಕನ್ನಡ ಗೀತೆಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಲೈನ್ಕಜೆ ರಾಮಚಂದ್ರ ಭಟ್ ಶಾಲಾ ಮಕ್ಕಳಿಗೆ ಕನ್ನಡ ಭಾಷಾ ಮಹತ್ವವನ್ನು ತಿಳಿಸಿ ಕನ್ನಡ ಸಾಹಿತ್ಯದ ಪುಸ್ತಕವನ್ನು ನೀಡಿದರು. ಶಿಕ್ಷಕ ಚೇತನ್ ಸ್ವಾಗತಿಸಿ, ವಂದಿಸಿದರು.